ಬೀದರ ಡಿಸಿ,ಎಸ್ಪಿ ಸೈಕಲ್ ಸವಾರಿ:

ಬೀದರ ನಗರದ ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಅವರು ಸೈಕಲ್ ಮೇಲೆ ತೆರಳುವ ಮೂಲಕ ಬೀದರ ಜಿಲ್ಲೆಯ ಜನತೆಗೆ ಜಾಗೃತಿ ಸಂದೇಶ ರವಾನಿಸಿದರು. ಅಪ್ರಾಪ್ತರ ಕೈಗೆ ಬೈಕ್ ನೀಡದಿರುವ ಬಗ್ಗೆ ಜಾಗೃತಿ ಹಾಗೂ ವಾರದಲ್ಲಿ ಒಂದು ದಿನ ಜಿಲ್ಲೆಯ ಅಧಿಕಾರಿಗಳು ತಮ್ಮ ಕಚೇರಿಗಳಿಗೆ ಸೈಕಲ್ ಸವಾರಿ ಪ್ರೋತ್ಸಾಹಿಸಲು ಈ ಅಭಿಯಾನ ಹಮ್ಮಿಕೊಳ್ಳಲಾಯಿತು