ಬೀದರ ಜಿಲ್ಲೆ ಇಡೀ ದೇಶದ ಗಮನ ಸೆಳೆದಿದೆ: ಪ್ರಭು ಚವ್ಹಾಣ್

ಬೀದರ: ಜೂ.1:ಕೋರೊನಾ ವೈರಸ್ ಸೋಂಕಿತರ ಸಂಖ್ಯೆ ಅತೀ ಕಡಿಮೆ ದಾಖಲಾಗುವ ಮೂಲಕ ಗಡಿ ಜಿಲ್ಲೆ ಬೀದರ ಇಡೀ ದೇಶದ ಗಮನ ಸೆಳೆದಿದೆ ಎಂದು ಪಶುಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಹೇಳಿದರು.

ಬಸವಕಲ್ಯಾಣ ತಾಲೂಕಿನ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ನಡೆದ ಕೊರೋನಾ ವಾರಿಯರ್ಸ್ ಅವರಿಗೆ ಸನ್ಮಾನಿಸಿ ಮಾತನಾಡಿದ ಅವರು, ಬೀದರ ಜಿಲ್ಲೆಯಲ್ಲಿ ಇದೀಗ ಅತೀ ಕಡಿಮೆ ಪ್ರಮಾಣದಲ್ಲಿ ಕೋವಿಡ್ ಪ್ರಕರಣಗಳು ದಾಖಲಾಗುತ್ತಿರುವುದರಿಂದ ಬೀದರ ಜಿಲ್ಲೆ ದೇಶದಲ್ಲೇ ನಂಬರ್ 1 ಎಂದು ಗುರುತಿಸಿಕೊಂಡಿದೆ ಎಂದರು.

ದೇಶದೆಲ್ಲೆಡೆ, ರಾಜ್ಯದೆಲ್ಲೆಡೆ ಕೋರೋನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರಿಗೆ ಮತ್ತು ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರಿಗೆ ತಾವು ಕರ್ನಾಟಕದ ಆರು ಕೋಟಿ ಜನತೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ಸಂಸತ್ತಿನಲ್ಲಿ, ವಿಧಾನಸಭೆಯಲ್ಲಿ ಕೋರೋನಾ ಬಗ್ಗೆ ಚರ್ಚಿಸಿ, ಉತ್ತಮ ನಿರ್ಣಯಗಳನ್ನು ತೆಗೆದುಕೊಂಡಿದ್ದರಿಂದ ಕೋರೋನಾ ಸೋಂಕು ಹರಡುವಿಕೆಯು ಈಗ ನಿಯಂತ್ರಣಕ್ಕೆ ಬರುತ್ತಿದೆ ಎಂದರು.

ಬಸವಕಲ್ಯಾಣ ತಾಲೂಕಿನಲ್ಲಿ ಕೂಡ ಕೋವಿಡ್ ಮಹಾಮಾರಿಯ ವಿರುದ್ದ ಹೋರಾಡುತ್ತಿರುವ ಕೊರೋನಾ ವಾರಿಯರ್ಸ್ ಅವರಿಗೆ ಸನ್ಮಾನಿಸಲು ತಾವು ಖುದ್ದು ಬಸವಕಲ್ಯಾಣ ಪಟ್ಟಣಕ್ಕೆ ಭೇಟಿ ನೀಡಿದ್ದಾಗಿ ಸಚಿವರು ತಿಳಿಸಿದರು.

ಬಳಿಕ ಸಚಿವರು, 14 ಜನ ವೈದ್ಯಾಧಿಕಾರಿಗಳಿಗೆ, 20 ಸ್ಟಾಪ್ ನರ್ಸ, 40 ಗ್ರೂಪ್ ಡಿ., 6 ಜನ ಲ್ಯಾಬ್ ಟೆಕ್ನಿಷಿಯನ್, 20 ಆಶಾ ಕಾರ್ಯಕರ್ತೆಯರು, 10 ಪೆÇಲೀಸ್ ಇಲಾಖೆ ಮತ್ತು ನಗರಸಭೆ ಸಿಬ್ಬಂದಿ ಮತ್ತು 8 ಇನ್ನೀತರ ಸೇರಿ ಒಟ್ಟು 100 ಜನ ಕೋರೊನಾ ವಾರಿಯರ್ಸ್ ಗಳಿಗೆ ಸಚಿವರು ಶಾಲುಹೊದಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲ ಶಾಸಕರಾದ ಶರಣು ಸಲಗರ, ತಹಸೀಲ್ದಾರ ಶ್ರೀಮತಿ ಸಾವಿತ್ರಿ ಸಲಗರ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿಷ್ಣುಕಾಂತ ಪಾಟೀಲ, ಡಿವೈಎಸ್ಪಿ ಸೋಮಲಿಂಗ ಕುಂಬಾರ, ಮಂಡಲ ಅಧ್ಯಕ್ಷರಾದ ಕೃಷ್ಣ ಗೋಣೆ ಹಾಗೂ ಅಶೋಕ ವಕಾರೆ

ಮುಖಂಡರಾದ ಅನೀಲ ಭೂಸಾರೆ, ಸುಧೀರ್ ಕಾಡಾದಿ, ಸೂರ್ಯಕಾಂತ ಚಿಲ್ಲಾಬಟ್ಟೆ, ರತಿಕಾಂತ ಕೋಹಿನೂರ್ ಸೇರಿದಂತೆ ಇತರರಿದ್ದರು.