ಬೀದರ ಜಿಲ್ಲೆ ಅಪರಾಧ ಮುಕ್ತ ಜಿಲ್ಲೆಮಾಡಲು ಸಾರ್ವಜನಿಕರ ಸಹಕಾರ ಅಗತ್ಯ :ಚನ್ನಬಸವಣ್ಣ ಎಸ್.ಪಿ.

(ಸಂಜೆವಾಣಿ ವಾರ್ತೆ)
ಹುಮನಾಬಾದ್ : ಅ.18:ಜಿಲ್ಲೆಯೂ ಅಪರಾಧ ಮುಕ್ತ ಜಿಲ್ಲೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಬೀದರ ಜಿಲ್ಲಾ ಎಸ್.ಪಿ. ಚನ್ನಬಸವಣ್ಣ ಎಸ್.ಎಲ್. ಪಟ್ಟಣದ ಪೆÇಲೀಸ ಠಾಣೆಯಲ್ಲಿ ಹಮ್ಮಿಕೊಂಡಿದ್ದಾ ಜನಸಂಪರ್ಕ ಸಭೆಯಲ್ಲಿ ಮಾತನಾಡುತ್ತಾ ಕರೆ ನೀಡಿದರು. ಹೀಗಾಗಿ ಸಾರ್ವಜನಿಕರು ಪೆÇಲೀಸ್ ಇಲಾಖೆ ಜೊತೆಗೆ ಸಹಕರಿಸಬೇಕು ಜಿಲ್ಲೆಯಲ್ಲಿ ಅಕ್ರಮ ಗುಟ್ಕಾ ಸೇರಿದಂತೆ ಒಟ್ಟು 882 ಕಡೆಯಲ್ಲಿ ದಾಳಿ ಮಾಡಿ. ಸುಮಾರು 20 ಕೋಟಿ ಮೌಲ್ಯದ ಮಾದಕ ವಸ್ತುಗಳು ಜಪ್ತಿ ಮಾಡಲಾಗಿದೆ. ಯಾವುದೇ ಗ್ರಾಮಗಳಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದ್ದರೆ ಪೆÇಲೀಸ್ ಇಲಾಖೆಯ ಗಮನಕ್ಕೆ ಸಾರ್ವಜನಿಕರು ತರಬೇಕು. ನಗರ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಮನೆ ಕಳ್ಳತನಗಳ ಬಗ್ಗೆ ಮನೆಯ ಮಾಲೀಕರು ನಿರ್ಲಕ್ಷ ವಹಿಸದೆ. ತಕ್ಷಣ ಪೆÇಲೀಸರಿಗೆ ತಿಳಿಸಬೇಕು ಎಂದರು.2022ರಲ್ಲಿ ಜಿಲ್ಲೆಯಲ್ಲಿ ರಸ್ತೆ ಅಪಘಾತದಿಂದ ಸುಮಾರು 332 ಜನರು ಮೃತಪಟ್ಟಿದ್ದಾರೆ.ಇದರಲ್ಲಿ ಬಹುತೇಕರು ದ್ವೀಚಕ್ರ ವಾಹನ ಚಾಲಕರು ಮತ್ತು ಹೆಲ್ಮೆಟ್ ಧರಿಸದೆ ಇರುವವರು ಇದ್ದಾರೆ. ಹೀಗಾಗಿ ಕಡ್ಡಾಯವಾಗಿ ಎಲ್ಲರೂ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು. ಆನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ಎಸ.ಪಿ. ಯವರಿಗೆ ವಿವಿಧ ಸಲಹೆಗಳು ನೀಡಿದರು. ಪಟ್ಟಣದಲ್ಲಿ ರಾತ್ರಿ ಗಸ್ತು ಚುರುಕುಗೋಳಿಸಬೇಕು ಕೋಳಚೆ ಪ್ರದೇಶ ಸೇರಿದಂತೆ ವಾರ್ಡುಗಳ ಒಳ ರಸ್ತೆಗೆ ರಾತ್ರಿ ಗಸ್ತು ತಿರುಗಬೇಕೆಂದು ತಿಳಿಸಿದರು. ಹುಮನಾಬಾದ ಪಟ್ಟಣಕ್ಕೆ ಸಿಟಿ ಪೆÇೀಲಿಸ ಸ್ಟೆಷನ ಮಾಡಲು ಕೂಡ ಈ ಸಂಧರ್ಭದಲ್ಲಿ ಸಾರ್ವಜನಿಕರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಡಿವೈಎಸ್ಪಿ ಜೆ.ಎಸ್. ನ್ಯಾಮೇಗೌಡ, ಸಿಪಿಐ ಗುರು ಪಾಟೀಲ, ಪಿಎ???ಗಳಾದ ಅಯ್ಯಪ್ಪ, ತಿಮ್ಮಯ್ಯ, ಸವಿತಾ ಪ್ರಿಯಾಂಕ್ , ಎಎ??? ಅಶೋಕ್, ಸಿಬ್ಬಂದಿಗಳಾದ ಭಗವಾನ್ , ಶಕೀಲ್, ಬಾಬುರಾವ್ ಕೋರೆ, ಸಂತೋಷ್ , ನಾಗೇಶ್, ವಸಂತ, ರಮೇಶ, ದೀಪಕ್, ಬಾಲಾಜಿ, ಮುಖಂಡರಾದ ಮಲ್ಲಿಕಾರ್ಜುನ ಮಹೇಂದ್ರಕರ್, ಸುರೇಶ್ ಘಾಂಗ್ರೆ, ಗೌತಮ್ ಪ್ರಸಾದ್, ಗಣಪತಿ ಅಷ್ಟೋರೆ, ಆನಂದ ಖಂಡಗೊಂಡ ಸೇರಿದಂತೆ ಇತರರು ಇದ್ದರು