ಬೀದರ ಜಿಲ್ಲೆಯ 6 ಕಡೆ ಕೋವಿಡ್ ಲಸಿಕೆ ಡ್ರೈ ರನ್

ಬೀದರ:ಜ.9: ಕೋವಿಡ್ ಲಸಿಕೆ ಹಾಕುವ ಹಿನ್ನಲೆ ಪೂರ್ವಭಾವಿಯಾಗಿ ಜಿಲ್ಲೆಯ 6 ಕಡೆಗಳಲ್ಲಿ ಶುಕ್ರವಾರ ಕೋವಿಡ್ ಲಸಿಕೆಯ ಡ್ರೈ ರನ್ ಪ್ರಾತ್ಯಕ್ಷಿಕೆ ನಡೆಸಲಾಗಿದೆ ಎಂದು ಡಿಎಚ್ ಒ ಡಾ. ವಿ.ಜಿ ರೆಡ್ಡಿ ತಿಳಿಸಿದ್ದಾರೆ.

ಅವರು,ಕೋವಿಡ್ ಲಸಿಕೆ ಬಂದ ಬಳಿಕ ಜನತೆಗೆ ಹೇಗೆ ಅದನ್ನು ನೀಡಬೇಕು ಎನ್ನುವ ಕುರಿತು ಮಾದರಿಯಾಗಿ ಮಾಡಲಾಯಿತು. ನಗರದ ಬ್ರಿಮ್ಸ್ ಆಸ್ಪತ್ರೆ, ಓಲ್ಡ್ ಸಿಟಿಯ 100 ಹಾಸಿಗೆಗಳ ಆಸ್ಪತ್ರೆ, ನೌಬಾದ್ ಪಿಎಚ್‍ಸಿ, ಆಣದೂರು ಪಿಎಚ್‍ಸಿ, ಸಂತಪುರ ಆಸ್ಪತ್ರೆ ಹಾಗೂ ಔರಾದ್‍ನ ತಾಲೂಕು ಆಸ್ಪತ್ರೆಗಳಲ್ಲಿ ಡ್ರೈ ರನ್ ನಡೆಸಲಾಗಿದೆ ಎಂದು ಹೇಳಿದ್ದಾರೆ.