
ಬೀದರಃ ಮೆ.25: ಬೀದರ ಜಿಲ್ಲೆಯ ರೈತರ ಪ್ರಗತಿಗಾಗಿ ಗೋದಾವರಿ ಬಚಾವತ್ ಆಯೋಗದಂತೆ 22.5 ಟಿ.ಎಂ.ಸಿ. ನೀರು ಸಂಪೂರ್ಣ ಬಳಕೆ ಮಾಡಿಕೊಳ್ಳುವುದು ಇತರೆ ಸಮಸ್ಯೆಗಳನ್ನು ಬಗೆಹರಿಸುವುದು, ನೀರಾವರಿಯ ಸಣ್ಣ ಕೆರೆಗಳಿಂದ ನೀರಿನ ಸದ್ಬಳಕೆ ಶಿಕ್ಷಣದ ಸುಧಾರಣೆ ಹೊಸ ಕಾಲೇಜುಗಳ ಸ್ಥಾಪನೆ, ಬೀದರ ವಿಶ್ವವಿದ್ಯಾಲಯ ಪಸ್ತುತದಲ್ಲಿಯೇ ಪ್ರಾರಂಭಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು, ಪ್ರಾಧ್ಯಾಪಕ ನೇಮಕಾತಿ ಸೇರಿದಂತೆ ಬೀದರ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಅನುಕೂಲವಾಗಲು ಮಾಜಿ ಸಚಿವ ಹಾಲಿ ಶಾಸಕ ಈಶ್ವರ ಖಂಡ್ರೆಯವರಿಗೆ ಡಿಸಿಎಂ ಹುದ್ದೆ ನೀಡಿ ಪ್ರಗತಿಗಾಗಿ ಅವಕಾಶ ನೀಡಬೇಕೆಂದು ಬೀದರ ವಕೀಲರ ಸಂಘದ ಅಧ್ಯಕ್ಷ ಮಹೇಶ ಶಿವಕುಮಾರ ಪಾಟೀಲ ವಕೀಲರು ಸರ್ಕಾರಕ್ಕೆ ಒತ್ತಾಯಿಸಿದರು.
ಅವರು ಇಂದು ಬೆಳಿಗ್ಗೆ ಬೀದರ ವಕೀಲರ ಸಂಘದ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಎಐಸಿಸಿ ಅದ್ಯಕ್ಷರಿಗೆ ಕೆಪಿಸಿಸಿ ಅಧ್ಯಕ್ಷರು ಮತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಈಶ್ವರ ಖಂಡ್ರೆಯವರು ಈ ಹಿಂದೆ ಸಚಿವರಾಗಿ ಮಾಡಿರುವ ಅಭಿವೃದ್ಧಿ ಕಾರ್ಯ ಬಿ.ಎಸ್.ಎಸ್.ಕೆ. ಅಧ್ಯಕ್ಷಾಗಿ ಮಾಡಿರುವ ಉತ್ತಮ ಕೆಲಸ ಬಾಲ್ಕಿಯಲ್ಲಿ ಹೈಕೋರ್ಟ ಮಾದರಿಯಲ್ಲಿ ನಿರ್ಮಿಸಿರುವ ಭಾಲ್ಕಿ ನ್ಯಾಯಾಲಯದ ಕಟ್ಟಡಕ್ಕೆ ಸಹಕಾರ ಸೇರಿದಂತೆ ಅವರು ಮಾಡಿರುವ ಉತ್ತಮ ಕೆಲಸ ಕಾರ್ಯಗಳು ಪರಿಗಣಿಸಿ ಡಿಸಿಎಂ ಹುದ್ದೆ ನೀಡಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶರಣಪ್ಪ ಶರ್ಮಾ ಅವರು ಈಶ್ವರ ಖಂಡ್ರೆಯವರು ಸಚಿವರಾಗಿದ್ದಾಗ ಬೀದರ ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳ್ನು ಮಾಡಿದ್ದಾರೆ. ಸರ್ವರನ್ನು ಸಮನಾಗಿ ಕಾಣುವ ಸಾಮಥ್ರ್ಯ ಅವರಲ್ಲಿದೆ. ಅವರಿಗೆ ಡಿಸಿಎಂ. ಹುದ್ದೆ ನೀಡಿದರೆ ಜಿಲ್ಲೆಯ ಅಭಿವೃದ್ಧಿ ಸಾಧ್ಯ ಎಂದರು. ಶಿವಶಂಕರ ಎಸ್. ಬಿರಾದಾರ ಮಾತನಾಡಿ, ಜಿಲ್ಲೆಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕಾಗಿರುವುದು ಅತ್ಯಂತ ಅವಶ್ಯಕವಾಗಿದ್ದು, ಖಂಡ್ರೆಯವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವರನ್ನಾಗಿ ಮಾಡಬೇಕೆಂದು ಮನವಿ ಮಾಡಿದರು. ಪ್ರಶಾಂತ ಪ್ರಭಾ ವಕೀಲರು ಮಾತನಾಡಿ, ಪ್ರಗತಿಯ ದೂರದೃಷ್ಟಿವುಳ್ಳ ವ್ಯಕ್ತಿ ಈಶ್ವರ ಖಂಡ್ರೆಯವರಾಗಿದ್ದಾರೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಶೈಕ್ಷಣಿಕ, ಆರ್ಥಿಕ ಪ್ರಗತಿಗಾಗಿ ಅವಕಾಶ ಕೊಡಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ವಕೀಲರ ಸಂಘದ ಜಂಟಿ ಕಾರ್ಯದರ್ಶಿ ರವಿಕಾಂತ ವಿ. ಪಾಟೀಲ, ಸಂಗಮೇಶ ಜಿ. ಪಾಟೀಲ, ವಿಲ್ಸನ್, ಅವರುಗಳು ಮಾತನಾಡಿ ಬೀದರ ಜಿಲ್ಲೆಗೆ ಪ್ರಾತಿನಿಧ್ಯ ನೀಡಿ ಖಡ್ರೆಯವರಿಗೆ ಜನಸೇವೆಗಾಗಿ ಅವಕಾಶ ನೀಡಬೇಕೆಂದರು.