ಬೀದರ ಜಿಲ್ಲೆಯಲ್ಲಿ 6 ನಾಮಪತ್ರಗಳು ತಿರಸ್ಕøತ

ಬೀದರ್:ಎ.22: ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ – 2023 ರ ಬೀದರ ಜಿಲ್ಲೆಯ 06 ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಏಪ್ರಿಲ್ 13 ರಿಂದ ಏಪ್ರಿಲ್ 20 ವರೆಗೆ ಸಲ್ಲಿಕೆಯಾದ ನಾಮಪತ್ರದಲ್ಲಿ ಆರು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿವೆ.
47-ಬಸವಕಲ್ಯಾಣ ವಿಧಾನ ಸಭಾ ಕ್ಷೇತ್ರದಿಂದ ರಾಷ್ಟ್ರೀಯ ಕೀಸಾನ ಬಹುಜನ ಪಾರ್ಟಿಯ ಅಜಿತ ಗಾಯಕವಾಡ, ಇವರು ಕರ್ನಾಟಕ ರಾಜ್ಯದ ಮತದಾರರು ಇರುವುದಿಲ್ಲ, ರಾಷ್ಟ್ರ ನಿರ್ಮಾಣ ಪಕ್ಷದ ಸೂರ್ಯಕಾಂತ ಇವರು ಪರಿಷ್ಕೃತ ನಮೂನೆ 26 ಪ್ರಮಾಣ ಪತ್ರ ಸಲ್ಲಿಸಿರುವುದಿಲ್ಲ, ಕರ್ನಾಟಕ ಸರ್ವೋದಯ ಪಕ್ಷದ ವೀರಾ ರೆಡ್ಡಿ ನಮೂನೆ-ಎ ಹಾಗೂ ಬಿ ಸಲ್ಲಿಸಿರುವುದಿಲ್ಲ ಮತ್ತು ಪರಿಷ್ಕೃತ ನಮೂನೆ 26 ಪ್ರಮಾಣ ಪತ್ರ ಸಲ್ಲಿಸಿರುವುದಿಲ್ಲ ಬೆರೊಂದು ನಾಮಪತ್ರ ಸಲ್ಲಿಸಿರುವ ಮೂಲಕ ಪಕ್ಷೇತರ ಅಭ್ಯರ್ಥಿಯಾಗಿ ಮುಂದುವರೆದಿರುತ್ತಾರೆ, 50- ಬೀದರ ವಿಧಾನ ಸಭಾ ಕ್ಷೇತ್ರದಿಂದ ಬಹುಜನ ಸಮಾಜವಾದಿ ಪಕ್ಷದ ಸೈಯದ ವಾಹಿದ ಲಖನ್ ನಮೂನೆ-ಎ ಹಾಗೂ ಬಿ ಸಲ್ಲಿಸಿರುವುದಿಲ್ಲ ಬೆರೊಂದು ನಾಮಪತ್ರ ಸಲ್ಲಿಸಿರುವ ಮೂಲಕ ಪಕ್ಷೇತರ ಅಭ್ಯರ್ಥಿಯಾಗಿ ಮುಂದುವರೆದಿರುತ್ತಾರೆ, ಪಕ್ಷೇತರ ಅಭ್ಯರ್ಥಿ ಮನೋಹರ ಪರಿಷ್ಕೃತ ನಮೂನೆ 26 ಪ್ರಮಾಣ ಪತ್ರ ಸಲ್ಲಿಸಿರುವುದಿಲ್ಲ ಹಾಗೂ 52- ಔರಾದ (ಬಿ) ವಿಧಾನ ಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ರವೀಂದ್ರ ಸ್ವಾಮಿ ಜಾತಿ ಪ್ರಮಾಣ ಪತ್ರ ಅನೂರ್ಜಿತವಾಗಿದೆ. ಒಟ್ಟಾರೆಯಾಗಿ ಬೀದರ ಜಿಲ್ಲೆಯಲ್ಲಿ ಆರು ನಾಮಪತ್ರಗಳು ತಿರಸ್ಕೃತಗೊಂಡಿವೆ ಎಂದು ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆಯಲ್ಲಿ ತಿಳಿಸಿದೆ.