
ಬೀದರ್:ಮೇ.11: ಮಹಿಳಾ ಮತದಾರರು 71,879 ಮತದಾನ ಮಾಡಿರುತ್ತಾರೆ. 51-ಭಾಲ್ಕಿಯಲ್ಲಿ 1,72,671 ಜನರು ಮತದಾನ ಮಾಡಿದ್ದು ಇದರಲ್ಲಿ ಪುರುಷ ಮತದಾರರು 88,958 ಮತ್ತು ಮಹಿಳಾ ಮತದಾರರು 83,713 ಮತದಾನ ಮಾಡಿರುತ್ತಾರೆ. 52-ಔರಾದ(ಬಿ)ನಲ್ಲಿ 1,57,143 ಜನರು ಮತದಾನ ಮಾಡಿದ್ದು, ಇದರಲ್ಲಿ ಪುರುಷ ಮತದಾರರು 81,939 ಮತ್ತು ಮಹಿಳಾ ಮತದಾರರು 75,204 ಮತದಾನ ಮಾಡಿರುತ್ತಾರೆ. ಬೀದರ ಜಿಲ್ಲೆಯಲ್ಲಿ ಒಟ್ಟು 9,83,328 ಜನ ಮತದಾನ ಮಾಡಿದ್ದು, ಇದರಲ್ಲಿ ಪುರುಷ ಮತದಾರರು 5,07,050 ಮತ್ತು ಮಹಿಳಾ ಮತದಾರರು 4,76,275 ಮತ್ತು ಇತರೆ ಮತದಾರರು 03 ಜನ ಮತದಾರರು ಮತದಾನ ಮಾಡುವ ಮೂಲಕ ಜಿಲ್ಲೆಯಲ್ಲಿ ಅಂದಾಜು ಶೇ.71.54 ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಅವರು ತಿಳಿಸಿದ್ದಾರೆ.
ಬೀದರ ಜಿಲ್ಲಾ ಪಂಚಾಯತದಲ್ಲಿ ಇದೇ ಮೊದಲ ಬಾರಿಗೆ ಸ್ಥಾಪಿಸಿದ ಎರಡು ಬಿದ್ರಿ ಕಲೆ ಮತಗಟ್ಟೆಗಳು ಮತದಾರರ ಆಕರ್ಷಣೆಯ ಕೇಂದ್ರಗಳಾಗಿದ್ದವು. ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ ಕೂಡಿದ್ದ ಪಿಂಕ್ ಮತಗಟ್ಟೆಗಳು ವಿಶೇಷವಾಗಿ ಮತದಾರರಿಗೆ ಆಕರ್ಷಿಸುವಂತೆ ಅಲಕೃಂತಗೊಂಡಿದ್ದವು. ಯುವ ಮತಗಟ್ಟೆ ಮತ್ತು ವಿಶೇಷಚೇತನರ ಮತಗಟ್ಟೆಗಳು ಸಹ ವಿಶೇಷತೆಯಿಂದ ಕೂಡಿದ್ದವು. ಜನರು ಬೆಳಿಗ್ಗೆಯಿಂದಲೇ ಮತಗಟ್ಟೆಗಳಲ್ಲಿ ಸರತಿ ಸಾಲಿನಲ್ಲಿ ಸಾಲು ಸಾಲಾಗಿ ನಿಂತು ತಮ್ಮ ಮತಗಳನ್ನು ಚಲಾಯಿಸುತ್ತಿರುವುದು ಕಂಡುಬಂತು.
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ, ಜಿಲ್ಲಾ ಸ್ವೀಫ್ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ. ಮತ್ತು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ಅವರು ಜಿಲ್ಲೆಯ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಜಿಲ್ಲೆಯಲ್ಲಿ ಸುಗಮವಾಗಿ ನಡೆಯುವಂತೆ ನೋಡಿಕೊಂಡರು.
ಬೀದರ ಜಿಲ್ಲೆಯಲ್ಲಿ ಶಾಂತಯುತವಾಗಿ ಮತದಾನ ನಡೆಯಲು ಸಹಕರಿಸಿದ ಜಿಲ್ಲೆಯ ಎಲ್ಲಾ ಜನತೆಗೆ ಹಾಗೂ ಚುನಾವಣಾ ಕರ್ತವ್ಯವನ್ನು ಹಗಲಿರುಳು ಎನ್ನದೇ ಕಾರ್ಯನಿರ್ವಹಿಸಿದ ಎಲ್ಲಾ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಅವರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.