ಬೀದರ ಜಿಲ್ಲೆಯಲ್ಲಿ ಡಯಾಲಿಸಿಸ್ ಕೇಂದ್ರ ಹೆಚ್ಚಿಸಲು ಶಾಸಕ ಡಾ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ,ಡಿ.8: ಸರಕಾರಿಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೌಕರ್ಯ ವಿಳಂಬವಾಗಿಪ್ರತಿ ವಾರ ಡಯಾಲಿಸಿಸ್ ಮಾಡಿಸಿಕೊಳ್ಳಬೇಕಾದ ರೋಗಿಗಳು ಚಿಕಿತ್ಸೆ ಸಿಗದೆ ತೀವ್ರ ಬಾಧೆಪಡುತ್ತಿದ್ದಾರೆ.ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೆ ಖಾಸಗಿ ಆಸ್ಪತ್ರೆಗಳಲ್ಲಿದು ಬಾರಿ ಹಣಕೊಟ್ಟು ಡಯಾಲಿಸಿಸ್ ಮಾಡಿಸಿಕೊಳ್ಳುವ ಅನಿವಾರ್ಯತೆಸೃಷ್ಟಿಯಾಗಿದೆ ಹೀಗಾಗಿ ಡಯಾಯಾಲಿಸಿಸ್ ಕೇಂದ್ರ ಹೆಚ್ಚಿಸಬೇಕುಎಂದು ಬೀದರ್‍ದಕ್ಷಿಣಕ್ಷೇತ್ರದ ಶಾಸಕರಾದಡಾ ಶೈಲೇಂದ್ರ ಬೆಲ್ದಾಳೆ ಒತ್ತಾಯಿಸಿದ್ದಾರೆ.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಆರೋಗ್ಯ ಸಚಿವ ದಿನೇಶ್‍ಗುಂಡುರಾವಅವರಿಗೆ ಸಭಾಧ್ಯಕ್ಷರ ಮೂಲಕ ಮನವಿ ಮಾಡಿದರು.ಜಿಲ್ಲಾಸ್ಪತ್ರೆಗಳಲ್ಲಿ ಜನದಟ್ಟಣೆ ಹೆಚ್ಚಾಗಿರುವಕಾರಣ ಡಯಾಲಿಸಿಸ್ ಮುಂದೂಡುತ್ತಿರುವುದರಿಂದ ರೋಗಿಗಳು ಸಂಕಟಅನುಭವಿಸುತ್ತಿದ್ದಾರೆ.ಆಸ್ಪತ್ರೆಯಲ್ಲಿದಟ್ಟಣೆ ಹೆಚ್ಚಾಗಿ ರೋಗಿಗಳು ಹೆಚ್ಚಿದ್ದು ಡಯಾಲಿಸಿಸ್ ಕೇಂದ್ರಕಡಿಮೆಇದ್ದುಜನರು ಸಮಸ್ಯೆಎದುರಿಸುತ್ತಿದ್ದಾರೆ.ಬೀದರ ಜಿಲ್ಲೆಯಲ್ಲಿ ಡಯಾಲಿಸಿಸ್ ಕೇಂದ್ರ ಹೆಚ್ಚಿಸಿದರೆ ಜಿಲ್ಲಾ ಆಸ್ಪತ್ರೆಯಲ್ಲಿದಟ್ಟಣೆಕಡಿಮೆ ಮಾಡುಬಹುದುಎಂದರು. ಡಯಾಲಿಸಿಸ್ ಕೇಂದ್ರ ಸಂಬಂಧಿಸಿದಂತೆ ನಡೆದಚರ್ಚೆಯಲ್ಲಿ ಮಾತನಾಡಿದಅವರು ಬೀದರ್‍ಜಿಲ್ಲೆಯಲ್ಲಿ ಅನೇಕ ಡಯಾಲಿಸಿಸ್ ರೋಗಿಗಳು ಚಿಕಿತ್ಸೆಗಾಗಿ ತಿಂಗಳುಗಂಟ್ಟಲೆ ಕಾಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ .ಜಿಲ್ಲೆಯಲ್ಲಿಇದರಕೊರತೆಯಿಂದಾಗಿ ರೋಗಿಗಳು ಪರದಾಡುವಂತಾಗಿದೆ ಹೆಚ್ಚಿನ ಸಂಖ್ಯೆಯಲ್ಲಿ ಹಳ್ಳಿಗಳನ್ನೊಳಗೊಂಡ ಬೀದರ್‍ದಕ್ಷಿಣ ವಿಧಾನಸಭಾಕ್ಷೇತ್ರದಚಿಟಗುಪ್ಪಾ ಹಾಗೂ ಮನ್ನಾಏಖೆಳ್ಳಿ ಆರೋಗ್ಯ ಕೇಂದ್ರಗಳಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಡಯಾಲಿಸಿಸ್ ರೋಗಿಗಳು ಆಗಮಿಸುತ್ತಿದ್ದು ಡಯಾಲಿಸಿಸ್ ಸೌಲಭ್ಯಇಲ್ಲದಕಾರಣ ಹಳ್ಳಿಗಳಿಂದ ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಪಡೆಯಲುತೊಂದರೆಆಗುತ್ತಿದೆ ಹೀಗಾಗಿ ಬೀದರ್‍ದಕ್ಷಿಣ ವಿಧಾನಸಭಾಕ್ಷೇತ್ರದ ವ್ಯಾಪ್ತಿಯಲ್ಲಿ ಬರುವಚಿಟಗುಪ್ಪಾ ಹಾಗೂ ಮನ್ನಾಏಖೆಳ್ಳಿ ಸಮುದಾಯಆರೋಗ್ಯ ಕೇಂದ್ರಗಳಲ್ಲಿ ಡಯಾಲಿಸಿಸ್ ವ್ಯವಸ್ಥೆಯನ್ನುಕಲ್ಪಿಸಬೇಕುಎಂದು ಸದನದಲ್ಲಿ ಶಾಸಕÀಡಾ ಶೈಲೇಂದ್ರ ಬೆಲ್ದಾಳೆ ಅವರು ಮನವಿ ಮಾಡಿದರು.