
ಬೀದರ. ಮೇ 8: ಮೇ 10 ರಂದು ನಡೆಯಲಿರುವ ಚುನಾವಣೆಗೆ ಬೀದರ ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು ಜಿಲ್ಲೆಯಲ್ಲಿ ಶಾಂತಿ ಹಾಗೂ ಸುವ್ಯವಸ್ಥಿತವಾಗಿ ಮತದಾನ ನಡೆಯುವಂತೆ ಕ್ರಮ ವಹಿಸಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಹೇಳಿದರು.
ಅವರು ರವಿವಾರ ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ- 2023ರ ನಿಮಿತ್ಯ ಬೀದರ ಜಿಲ್ಲೆಯಲ್ಲಿ ಚುನಾವಣಾ ತೈಯಾರಿ ಕುರಿತು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದರು.
ಬೀದರ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ದಕ್ಕೆಯಾಗದಂತೆ ಮೇ. 8 ರಂದು ಸಂಜೆ 6 ಗಂಟೆಯಿಂದ ನಿಶ್ಯಬ್ದ ಅವಧಿಯಲ್ಲಿ ಕಲಂ 144 ಜಾರಿಯಲ್ಲಿರಲಿದೆ ಮತ್ತು ಡ್ರೈ ಡೇ ಘೋಷಿಸಲಾಗಿದ್ದು ಎಲ್ಲಾ ಬಾರ್ ಮತ್ತು ವೈನ್ ಶಾಪ್‍ಗಳು ಮುಚ್ಚಲಾಗುತ್ತದೆ. ಬಹಿರಂಗ ಪ್ರಚಾರ ಇರುವದಿಲ್ಲ, ಲೌಡ ಸ್ಪೀಕರ್ ಬಳಸುವಂತಿಲ್ಲ, ವೇದಿಕೆ ಕಾರ್ಯಕ್ರಮ ಮತ್ತು ಮೆರವಣಿಗೆ ಇರುವುದಿಲ್ಲ, ಮನೆ ಮನೆಗೆ ತೆರಳಿ ಬೆಳಿಗ್ಗೆ 6 ಗಂಟೆಯಿಂದ ಸಂಜೆ 10 ಗಂಟೆಗಳವರೆಗೆ ಪ್ರಚಾರ ಮಾಡಬಹುದು. ಅಭ್ಯರ್ಥಿ ಮತ್ತು ಚುನಾವಣಾ ಎಜೆಂಟರನ್ನು ಹೊರತುಪಡಿಸಿ ಮತದಾರರಲ್ಲದವರು ಮತಕ್ಷೇತ್ರವನ್ನು ಬಿಟ್ಟು ತೆರಳಬೇಕು ಎಂದರು.
ಮೇ. 8 ಸಾಯಂಕಾಲ 6 ಗಂಟೆಯಿಂದ ಮತದಾನ ಸಮೀಕ್ಷೆ ಮಾಡುವಂತಿಲ್ಲ. ಮೇ 10 ರ ಸಂಜೆ 6:30 ಗಂಟೆಗಳ ನಂತರ ಎಕ್ಸಿಟ್ ಪೆÇೀಲ್ ಬಹಿರಂಗ ಪಡಿಸಬಹುದು. ಮೇ. 8 ರ ಸಾಯಂಕಾಲ 6 ಗಂಟೆಗಳ ನಂತರ ಎಲೆಕ್ಟ್ರಾನಿಕ್ ಮೀಡಿಯಾ ಹಾಗೂ ಪತ್ರಿಕೆಗಳಲ್ಲಿ ಜಾಹೀರಾತುಗಳನ್ಮು ಪ್ರಕಟಿಸಲು ಜಿಲ್ಲಾ ಮಾಧ್ಯಮ ಸಮಿತಿ ಎಂ.ಸಿ.ಎಂ.ಸಿ ಯಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಬೇಕು. ಚುನಾವಣಾ ದಿನದಂದು ಅಭ್ಯರ್ಥಿ ಮತ್ತು ಅವರ ಎಜೆಂಟರ ವಾಹನಗಳಿಗೆ ಮಾತ್ರ ಅನುಮತಿಸಲಾಗುತ್ತದೆ ಮತ್ತು ಈಗಾಗಲೇ ಅನುಮತಿ ನೀಡಲಾದ ವಾಹನಗಳ ಅನುಮತಿ ಮೇ. 8 ರ ಸಂಜೆ 6 ಗಂಟೆಗಳ ನಂತರ ಹಿಂಪಡೆಯಲಾಗುತ್ತದೆ ಎಂದು ಹೇಳಿದರು.
ಚೆಕ್ ಪೆÇಸ್ಟ್‍ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಎಫ್.ಎಸ್.ಟಿ ತಂಡಗಳು ಹೆಚ್ಚಿನ ಜಾಗೃತಿಯಿಂದ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಲಿವೆ. ಬೀದರ ಜಿಲ್ಲೆಯಲ್ಲಿ 13,75,169 ಮತದಾರರಿದ್ದು. 1,044 ಸರ್ವಿಸ್ ಓಟರಗಳು ಇದ್ದಾರೆ. ಪೆÇೀಸ್ಟಲ್ ಬ್ಯಾಲೆಟ್ ಓಟರ್ 8590 ಜನರಿದ್ದು, ಇದರಲ್ಲಿ 6032 ಜನ ಮತದಾನ ಮಾಡಿದ್ದಾರೆ ಎಂದರು. ಜಿಲ್ಲೆಯಲ್ಲಿ ಒಟ್ಟು 1017 ಸ್ಥಳಗಳಲ್ಲಿ 1506 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ನಗರ ಪ್ರದೇಶಗಳಲ್ಲಿ 220 ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 1286 ಇರಲಿವೆ ಎಂದರು.
ಜಿಲ್ಲೆಯ ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ 5 ಪಿಂಕ್ ಪೆÇೀಲಿಂಗ್ ಸ್ಟೇಷನ್ ಮತ್ತು 1 ಯಂಗ್ ಪೆÇೀಲಿಂಗ್ ಸ್ಟೇಷನ್ ಹಾಗೂ ಒಂದು ವಿಶೇಷ ಚೇತನರ ಪೆÇೀಲಿಂಗ್ ಸ್ಟೇಷನ್ ಹಾಗೂ ಬೀದರ ನಗರದಲ್ಲಿ ಎರಡು ಬಿದರಿ ಕಲೆಯ ಪೆÇೀಲಿಂಗ್ ಸ್ಟೇಷನಗಳು ಇರಲಿವೆ ಎಂದರು.
ಚುನಾವಣಾ ಕರ್ತವ್ಯಕ್ಕೆ 6752 ಜನರನ್ನು ನಿಯೋಜನೆ ಮಾಡಲಾಗಿದೆ. 1502 ಪೆÇೀಲಿಂಗ್ ಭೂತಗಳಿಗೆ 2243 ವಿವಿಪ್ಯಾಟ್ ಮಶೀನಗಳನ್ನು ಒದಗಿಸಿದ್ದು. ಶೇ. 50 ಪ್ರತಿಶತ ವಿವಿಪ್ಯಾಟ್ ಮಶೀನಗಳು ಹೆಚ್ಚುವರಿಯಾಗಿ ಇರುವುದರಿಂದ ಮಶೀನಗಳ ಕೊರತೆ ಆಗುವದಿಲ್ಲ. ಜಿಲ್ಲೆಯಲ್ಲಿ ಒಟ್ಟು 1506 ಪೆÇೀಲಿಂಗ್ ಬೂತಗಳಲ್ಲಿ 301 ಕ್ರಿಟಿಕಲ್ ಪೆÇೀಲಿಂಗ್ ಭೂತಗಳಿದ್ದು. ಇವುಗಳಲ್ಲಿ 278 ಮತಗಟ್ಟೆಗಳಿಗೆ ಕೇದ್ರಿಯ ಅರೆಸೇನಾ ಪಡೆಗಳನ್ನು ನಿಯೋಜನೆಮಾಡಲಾಗಿದೆ. 950 ಮತಗಟ್ಟೆಗಳಲ್ಲಿ ಸಿಸಿಟಿವಿ ಮತ್ತು ಕ್ಯಾಮರಾ ಅಳವಡಿಸಲಾಗಿದೆ. 124 ಮತಗಟ್ಟೆಗಳಿಗೆ ಮೈಕ್ರೋ ಅಬ್ಸರ್ವರಗಳನ್ನು ನಿಯೋಜನೆ ಮಾಡಲಾಗುತ್ತಿದೆ. 128 ಮತಗಟ್ಟೆಗಳಲ್ಲಿ ವಿಡಿಯೋ ಗ್ರಾಫಿ ಮಾಡಲಾಗುತ್ತಿದೆ ಎಂದು ಹೇಳಿದರು.
ಇಲ್ಲಿಯವರೆಗೆ ಜಿಲ್ಲೆಯಲ್ಲಿ ಎಲ್ಲವು ಸೇರಿ ಜಪ್ತಿಮಾಡಿದ ಒಟ್ಟು ಮೊತ್ತ 9,82,36,515 ರೂಪಾಯಿಗಳಾಗಿದ್ದು. ಒಟ್ಟು. 67 ಎಫ್ ಐ.ಆರ್ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿವೆ. ಸುವಿಧಾ ???ಫ್ ಮೂಲಕ 513 ಅರ್ಜಿಗಳನ್ನು ಸ್ವೀಕೃತವಾಗಿವೆ. ಸಿವಿಜಿಲ್ ???ಫ್ ಮೂಲಕ 323 ದೂರುಗಳು ಬಂದಿವೆ ಮತ್ತು ಕಂಪ್ಲೇಂಟ್ ಮಾನಿಟರಿಂಗ್ ಸೆಲ್ ಮೂಲಕ 392 ದೂರುಗಳು ಬಂದಿದ್ಧು ಅವುಗಳಲ್ಲಿ 384 ಇತ್ಯಾರ್ಥ ಮಾಡಲಾಗಿದೆ ಎಂದರು.
ಜಿಲ್ಲಾ ಸ್ವೀಫ್ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ. ಅವರು ಮಾತನಾಡಿ ಬೀದರ ಜಿಲ್ಲೆಯಲ್ಲಿ ಸ್ವೀಫ್ ಸಮಿತಿ ವತಿಯಿಂದ ಹಲವಾರು ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಇಂದು ಮಾನವ ಸರಪಳಿ ಮೂಲಕ ಬೀದರ ನಗರದಲ್ಲಿ ಮತದಾನ ಜಾಗೃತಿ ಮಾಡಲಾಯಿತು. ಮೇ 10 ರಂದು ಎಲ್ಲರೂ ಮತದಾನ ಮಾಡುವಂತೆ ಮಾಧ್ಯಮಗಳು ಹೆಚ್ಚಿನ ಪ್ರಚಾರ ನೀಡಬೇಕೆಂದರು.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಅವರು ಮಾತನಾಡಿ ಬೀದರ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ 1506 ಮತಗಟ್ಟೆಗಳಿದ್ದು. ಇವುಗಳಲ್ಲಿ 301 ಕ್ರಿಟಿಕಲ್ ಪೆÇಲಿಂಗ್ ಸ್ಟೇಷನಗಳಿವೆ. 1205 ನಾನ ಕ್ರಿಟಿಕಲ್ ಪೆÇಲಿಂಗ್ ಸ್ಟೇಷನಗಳಿವೆ. 278 ಕ್ರಿಟಿಕಲ್ ಪೆÇಲಿಂಗ್ ಸ್ಟೇಷನಗಳಿಗೆ ಕೇದ್ರಿಯ ಮೀಸಲು ಪಡೆಯ ಸಿ.ಆರ್.ಪಿ.ಎಫ್., ಐ.ಟಿ.ಬಿ.ಪಿ. ಹಾಗೂ ಮಣಿಪುರ ಪೆÇೀಲಿಸ್ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದರು.
76 ಸೆಕ್ಟರ್ ಮೊಬೈಲ್ ಟೀಮ್. ಸಿಪಿಐ ಸುಪರವೈಜರ್ 19 ಮೊಬೈಲ್ ಟೀಮ್. ಪ್ರತಿ ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಎ.ಎಸ್.ಪಿ ಮತ್ತು ಡಿ.ಎಸ್.ಪಿಗಳನ್ನು ನಿಯೋಜನೆ ಮಾಡಲಾಗಿದೆ. ಒಟ್ಟು 101 ಮೊಬೈಲ್ ಟೀಮಗಳನ್ನು ಜಿಲ್ಲೆಯಲ್ಲಿ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
171 ಕೇಂದ್ರಿಯ ಪೆÇಲೀಸ್ ತುಕಡಿಗಳು ಜಿಲ್ಲೆಗೆ ಬಂದಿದ್ದು. ಅವುಗಳಲ್ಲಿ 306 ಸಬ್ ಸೆಕ್ಸನ ಮಾಡಲಾಗಿದೆ. 6 ಕೆ.ಎಸ್.ಆರ್.ಪಿ ತುಕಡಿಗಳು ಹಾಗೂ ಸ್ಥಳೀಯವಾಗಿ 700 ಜನ ಹಾಗೂ ಪಕ್ಕದ ರಾಜ್ಯ ಮಾಹಾರಾಷ್ಟ್ರದ ನಾಂದೇಡ ಜಿಲ್ಲೆಯಿಂದ 100 ಜನ ಹೋಮಗಾರ್ಡಗಳನ್ನು ಚುನಾವಣಾ ಕರ್ತವ್ಯಕ್ಲೆ ನಿಯೋಜನೆ ಮಾಡಲಾಗಿದ್ದು. ಒಟ್ಟು ಬೀದರ ಜಿಲ್ಲೆಯಲ್ಲಿ 2188 ಪೆÇಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ ಎಂದರು.
ಈ ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ. ಚುನಾವಣಾ ತಹಶಿಲ್ದಾರ ಗೋಪಾಲ ಕಪೂರ್. ಜಿಲ್ಲಾ ವಾರ್ತಾಧಿಕಾರಿ ಜಿ. ಸುರೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.