
ಬೀದರ :ಎ.12:ಜಿಲ್ಲೆಯಲ್ಲಿ ಈಗಾಗಲೇ ಕುಸುಬೆ ಬೇಳೆ ಕಟಾವು ಪ್ರಾಂಭವಾಗಿ ಸುಮಾರ ಒಂದು ತಿಂಗಳಾಯಿತು. ಕುಸುಬೆ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿರುವುದರಿಂದ ರೈತರು ಆರ್ಥಿಕವಾಗಿ ಸಂಕಷ್ಟಗಳನ್ನು ಎದುರಿಸುತ್ತಿದ್ದು, ಈಗಲಾದರೂ ಅತಿ ಶಿಘ್ರದಲ್ಲಿ ಸರ್ಕಾರದ ವತಿಯಿಂದ ಬೆಂಬಲ ಬೆಲೆಯಲ್ಲಿ ಕುಸುಬೆ ಬೆಳೆ ಖರೀದಿ ಕೇಂದ್ರ ಪ್ರಾರಂಭಿಸಿ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ವಿಶ್ವನಾಥ ಧರಣೆ, ಪ್ರಕಾಶ ಬಾವಗೆ, ಸತ್ತಾರಮಿಯ್ಯಾ ಜೋಜನಾ, ಮಲಶೆಟ್ಟಿ, ಸಂಗಪ್ಪಾ ಬಿರಾದಾರ, ರಾಜಕುಮಾರ ಬಿರಾದಾರ,ಶಿವರಾಜ ಖಾನಾಪೂರೆ ಸೇರಿದಂತೆ ಅನೇಕರು ರೈತರು ಉಪಸ್ಥಿತರಿದ್ದರು.
ಇಲ್ಲವಾದರೆ, ಜಿಲ್ಲಾದ್ಯಂತ ರಸ್ತಾ ರೋಕೋ ಜೊತೆಗೆ ವಿವಿಧ ರೀತಿಯ ಹೊರಾಟಗಳನ್ನು ಮಾಡಲಾಗುವುದು ಎಂದು ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಧ್ಯಕ್ಷರಾದ ಶ್ರಿಮಂತ ಬಿರಾದಾರ ಅವರು ಎಚ್ಚರಿಕೆ ನೀಡಿದ್ದಾರೆ.