ಬೀದರ ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸಲು ಕೇಂದ್ರ ಸಚಿವ ಖೂಬಾ ಆಗ್ರಹ

ಬೀದರ :ಸೆ.2:ಲೋಕಸಭಾ ಕ್ಷೇತ್ರದ ಎಲ್ಲಾ ತಾಲುಕುಗಳನ್ನು ಬರಪಿಡಿತ ತಾಲುಕುಗಳೆಂದು ಘೊಷಣೆ ಮಾಡಬೇಕೆಂದು ಕೇಂದ್ರ ನೂತನ ಹಾಗು ನವೀಕರಿಸಬಹುದಾದ ಇಂಧನ ಮೂಲ ಮತ್ತು ರಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಹ ಸಚಿವರಾದ ಶ್ರೀ ಭಗವಂತ ಖೂಬಾ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಭಾಲ್ಕಿ, ಹುಲಸೂರ ಮತ್ತು ಆಳಂದ ತಾಲೂಕುಗಳನ್ನು ಮಾತ್ರ ಬರಪಿಡಿತ ಎಂದು ಘೋಷಿಸಿದರೆ ಸಾಲದು, ಉಳಿದ ತಾಲುಕುಗಳಲ್ಲಿಯೂ ಸಹ ಮಳೆಯಾಗಿರುವುದಿಲ್ಲ, ಔರಾದ ಹಾಗೂ ಚಿಂಚೋಳಿಯಲ್ಲಂತು ಕುಡಿಯಲು ನೀರು ಸಹ ಸಿಗುತ್ತಿಲ್ಲಾ, ಒಟ್ಟಿನಲ್ಲಿ ಬೀದರ ಲೋಕಸಭಾ ಕ್ಷೇತ್ರದ ರೈತರು ಮಳೆಯಿಲ್ಲದೆ ಕಂಗಾಲಾಗಿದ್ದಾರೆ.

ಆದರೆ ಜಿಲ್ಲೆಯಲ್ಲಿ ಶತ ಪ್ರತಿಷತಃ ಉಳಿಮೆಯಾಗಿದೆ, ರೈತರು ಉಳಿಮೆಗಾಗಿ ತನ್ನಲ್ಲಿದ್ದ ದುಡ್ಡನ್ನು ಖರ್ಚು ಮಾಡಿಕೊಂಡಿದ್ದಾರೆ, ರೈತರ ಬಳಿ ದುಡ್ಡಿಲ್ಲಾ, ಇದರ ಜೊತೆಗೆ ಪಿ.ಎಮ್.ಕಿಸಾನ್ ನಿಧಿಯಡಿ ರಾಜ್ಯ ಸರ್ಕಾರದಿಂದ ನೀಡಲಾಗುತ್ತಿದ್ದ 4000 ರೂಪಾಯಿ ಪ್ರೋತ್ಸಾಹ ಧನ ಸಹ ಬಂದ ಮಾಡಲಾಗಿದೆ, ಇದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಕೂಡಲೆ ಪಿ.ಎಮ್. ಕಿಸಾನ್ ನಿಧಿಯಡಿ ನೀಡಲಾಗುತ್ತಿದ್ದ 4000 ರೂ. ಪ್ರೊತ್ಸಾಹ ಧನವನ್ನು ರೈತರ ಖಾತೆಗೆ ಜಮೆ ಮಾಡಬೇಕು.

ಬೀದರ ಲೋಕಸಭಾ ಕ್ಷೇತ್ರದ ಎಲ್ಲಾ ತಾಲೂಕುಗಳು ಬರಪಿಡಿತ ಎಂದು ಘೋಷಿಸಿ, ಪ್ರತಿ ಹೆಕ್ಟರಗೆ 50 ಸಾವಿರ ರೂಪಾಯಿ ಪರಿಹಾರ ಘೋಷಣೆ ಮಾಡಬೇಕು, ರೈತರ ಹಿತವನ್ನು ಕಾಪಾಡುವ ಕೆಲಸ ಮಾಡಬೇಕೆಂದು ಸರ್ಕಾರಕ್ಕೆ ಕೇಂದ್ರ ಸಚಿವ ಭಗವಂತ ಖೂಬಾ ಆಗ್ರಹಿಸಿದ್ದಾರೆ.