ಬೀದರ-ಔರಾದ ಮಾರ್ಗ ಪ್ರಯಾಣಿಕರ ನಿತ್ಯ ಪರದಾಟ ಊರಿಗೆ ತೆರಳಲು ಹರಸಾಹಸ

ಔರಾದ: ಸೆ.25:ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಇಬ್ಬರು ಸಚಿವರನ್ನು ಹೊಂದಿದ ಕರ್ನಾಟಕದ ಕಿರೀಟ ಎಂದು ಕರೆಯಿಸಿಕೊಳ್ಳುವ ಬೀದರ ಜಿಲ್ಲೆಯ ಸಾರ್ವಜನಿಕರ ದುಸ್ಥಿತಿ ಇದು, ವಿಶೇಷವಾಗಿ ಇಬ್ಬರು ಸಚಿವರು ಸಹ ಔರಾದ್ ಕ್ಷೇತ್ರದವರೆ ಆದರೆ ಸಚಿವರ ತವರು ಕ್ಷೇತ್ರದ ಜನರ ಸಮಸ್ಯೆಗಳಿಗೆ ಪರಿಹಾರ ಇಲ್ಲ,
ಬೀದರ್-ಔರಾದ್ ಮಾರ್ಗಕ್ಕೆ ಸಮಯಕ್ಕೆ ಸರಿಯಾಗಿ ಬಸ್‍ಗಳು ಸಂಚರಿಸದೇ, ನಿರ್ದಿಷ್ಟ ಸಮಯಕ್ಕೆ ಬಸ್ ಸಂಚಾರವಿಲ್ಲದೆ ವಿದ್ಯಾರ್ಥಿಗಳು ಸೇರಿದಂತೆ, ಗ್ರಾಮಸ್ಥರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಸ್ ನಿಲ್ದಾಣದಲ್ಲಿ ಬೀದರನಿಂದ ಔರಾದಗೆ ಪ್ರಯಾಣಿಸುವ ಸಾರ್ವಜನಿಕರು ಗಂಟೆಗಟ್ಟಲೆ ಕಾದು ಕುರಬೇಕು. ರಸ್ತೆ ಸಾರಿಗೆ ಸಂಸ್ಥೆಯ ಘಟಕವೂ ಪ್ರಯಾಣಿಕರ ಸಮಸ್ಯೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಸಿಬ್ಬಂದಿಗಳು ಜಾಣ ಕುರುಡರಂತೆ ವರ್ತಿಸುತ್ತಾರೆ ಎಂದು ಪ್ರಯಾಣಿಕರು ಆಕ್ರೊ?ಶ ವ್ಯಕ್ತಪಡಿಸುತ್ತಿದ್ದಾರೆ.

ಬೀದರ ಘಟಕ ವ್ಯವಸ್ಥಾಪಕರಿಗೆ ಕೇಳಿದರೆ ಔರಾದ ವ್ಯವಸ್ಥಾಪಕರಿಗೆ ಕೇಳಿ ಎಂದು ಹೇಳುತ್ತಾರೆ. ಒಬ್ಬರ ಮೇಲೆ ಒಬ್ಬರು ದೂರು ಹೇಳುತ್ತಾರೆ ಪರಿಹಾರ ಸಿಗದೆ ಇಕ್ಕಟ್ಟಿನಂತಾಗಿದೆ ಅದರ ಜೊತೆಗೆ ಬಸ್‍ಗಳು ಸಮಯಕ್ಕೆ ಸರಿಯಾಗಿ ಬಾರದೇ ನಿಲ್ದಾಣದಲ್ಲಿಯೇ ಪ್ರಯಾಣಿರು ಅದರಲ್ಲೂ ವಿದ್ಯಾರ್ಥಿಗಳು ಅನಾವಶ್ಯಕವಾಗಿ ಕಾಲಹರಣ ಮಾಡುವಂತಾಗಿ ಜನದಟ್ಟಣೆಯಿಂದ ಜನ ಜಾತ್ರೆಯಂತೆ ಬಸ್ ನಿಲ್ದಾಣ ತುಂಬಿ ತುಳುಕುತ್ತಿದೆ.

ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಕಾಲೇಜುಗಳು ಇರದೇ ಇರುವದರಿಂದ ಅನಿವಾರ್ಯವಾಗಿ ಬೀದರ ಬರಬೇಕಾದ ಪರಿಸ್ಥಿತಿ ವಿದ್ಯಾರ್ಥಿಗಳದಾಗಿದ್ದು ಬಸ್ಸಿನ ಅವ್ಯವಸ್ಥಿತ ಸಂಚಾರದಿಂದಾಗಿ ಕಾಲೇಜು ಮುಗಿಸಿ ಮನೆ ಸೇರುವದು ರಾತ್ರಿಯಾಗುತ್ತಿದೆ ನಾವು ಓದಲು ಸಮಯವೂ ಸಿಗುವದಿಲ್ಲ ತಡವಾಗಿ ಹೋಗುವದಕ್ಕೆ ಮನೆಯಲ್ಲೂ ಬೈಯಿಸಿಕೊಳ್ಳುವಂತಾಗುತ್ತಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು. ಬೆಳಿಗ್ಗೆ ಸಾಯಂಕಾಲದ ಸಮಯದಲ್ಲಿ ಬಸ್ ಸಂಚರಿಸದೇ ನೂರಾರು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.ಘಟಕದಿಂದ ಹೊರಡುವ ಅನೇಕ ಗ್ರಾಮಾಂತರ ಪ್ರದೇಶಕ್ಕೆ ನಿಯಮಿತವಾಗಿ ವಾಹನಗಳು ಸಂಚರಿಸದೇ ತಾಲೂಕಿನ ಎಲ್ಲಪ್ರಯಾಣಿಕರಿಗೆ ಇದು ದಿನನಿತ್ಯದ ಗೋಳಾಗಿದೆ.ಈ ಬಗ್ಗೆ ಬಸ್ ನಿಲ್ದಾಣಕ್ಕೆ ಸಂಪರ್ಕಿಸಿದರೆ ಸಮಂಜಸ ಉತ್ತರ ನೀಡದೆ ಸತಾಯಿಸುತ್ತಿರುವುದು ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಗುವುದು ಎಂದು ಸಾರ್ವಜನಿಕರ ಆಕ್ರೊ?ಶ ವ್ಯಕ್ತಪಡಿಸಿದರು.