ಬೀದರ ಉತ್ತರ ಭಾಜಪಾ ಅಭ್ಯರ್ಥಿ ಈಶ್ವರಸಿಂಗ್ ಠಾಕೂರ ಅವರಿಂದ ನಾಮಪತ್ರ ಸಲ್ಲಿಕೆಭವ್ಯ ಮೆರವಣಿಗೆ ಮುಖಾಂತರ ಶಕ್ತಿ ಪ್ರದರ್ಶನ

ಬೀದರ,ಏ.21: ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾದ ಈಶ್ವರಸಿಂಗ್ ಠಾಕೂರ ಅವರು ದಿನಾಂಕ:20-04-2023 ರಂದು ಬೆಳಿಗ್ಗೆ 11.00 ಗಂಟೆಗೆ ಗಾಂಧಿಗಂಜ್‍ನ ಬಸವೇಶ್ವರ ದೇವಸ್ಥಾನದಿಂದ ಸಾವಿರಾರು ಕಾರ್ಯಕರ್ತರ ಮೆರವಣಿಗೆಯ ಮುಖಾಂತರ ಬೋಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತ , ಅಂಬೇಡ್ಕರ ವೃತ್ತದಿಂದ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ತೆರಳಿ ತಮ್ಮ ನಾಮಪತ್ರವನ್ನು ಸಲ್ಲಿಸಿದರು.

ನಾಮಪತ್ರ ಸಲ್ಲಿಸುವಾಗ ಚುನಾವಣೆ ಕಾರ್ಯಾಲಯದಲ್ಲಿ ಈಶ್ವರಸಿಂಗ್ ಠಾಕೂರ ಅವರ ಜೊತೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ ಮಲ್ಕಾಪೂರೆ, ಭಾರತೀಯ ಜನತಾ ಪಾರ್ಟಿಯ ಮಾಜಿ ಜಿಲ್ಲಾ ಅಧ್ಯಕ್ಷರಾದ ನಂದಕಿಶೋರ ವರ್ಮಾ, ಬೀದರ ನಗರ ಪ್ರಾಧಿಕಾರದ ಅಧ್ಯಕ್ಷರಾದ ಬಾಬುವಾಲಿ ಹಾಗೂ ಸೋಮಶೇಖರ ಪಾಟೀಲ ಗಾದಗಿ ಜೊತೆಯಲ್ಲಿ ಇದ್ದರು.

ಗಾಂಧಿಗಂಜ್‍ನ ಬಸವೇಶ್ವರ ದೇವಸ್ಥಾನದಿಂದ ಹೊರಟ ಮೆರವಣಿಗೆಯಲ್ಲಿ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಈ ಮೆರವಣಿಗೆಯಲ್ಲಿ ಮುಖ್ಯವಾಗಿ ಹೈದ್ರಾಬಾದಿನ ಗೋಶಾ ಮಹಲ್ ಕ್ಷೇತ್ರದ ಶಾಸಕರಾದ ಎ. ರಾಜಾ ಅವರ ಭಾಷಣವನ್ನು ಕೇಳುವುದಕ್ಕೆ ಸಾವಿರಾರು ಯುವಕರು ಒತ್ತಾಯವನ್ನು ಮಾಡಿದರು. ಆದರೆ ಚುನಾವಣೆ ಆಯೋಗದಿಂದ ಭಾಷಣಕ್ಕೆ ಅನುಮತಿ ಇಲ್ಲದಿರುವರಿಂದ ಎ.ರಾಜಾ ಅವರು ಭಾಷಣವನ್ನು ಮಾಡಲು ಬರುವುದಿಲ್ಲ ಎಂದು ಹೇಳಿದರು.

ಇಂದು ಮುಕ್ತಾಯವಾದ ಈ ಮೆರವಣಿಗೆಯಲ್ಲಿ ನಗರ ಸಭೆ ಸದಸ್ಯರಾದ ಚಂದ್ರಶೇಖರ ಪಾಟೀಲ ಗಾದಗಿ, ಭೀಮರಾವ ಪಾಟೀಲ ನೌಬಾದ, ಪ್ರಭು ಪಾಟೀಲ ಚಿಟ್ಟಾ, ರಾಜಾರಾಮ್, ನಗರ ಘಟಕದ ಅಧ್ಯಕ್ಷರಾದ ಶಶಿ ಹೊಸಳ್ಳಿ, ಗ್ರಾಮೀಣ ಘಟಕದ ಅಧ್ಯಕ್ಷರಾದ ರಾಜೇಂದ್ರ ಪೂಜಾರಿ, ಬೀದರ ವಿಧಾನಸಭಾ ಕ್ಷೇತ್ರದ ಸಂಚಾಲಕರಾದ ರೇವಣಸಿದ್ದಪ್ಪಾ ಜಲಾದೆ, ಬಾಬುರಾವ ಮದಕಟ್ಟಿ, ಭಾಜಪಾ ಮುಖಂಡರಾದ ಮಹೇಶ ಪಾಲಂ, ಮಹೇಶ್ವರ ಸ್ವಾಮಿ, ಚಂದ್ರಶೇಖರ ಗಾದಾ, ರಾಜಶೇಖರ ನಾಗಮೂರ್ತಿ, ಶಿವರಾಜ ಕುದರೆ, ಶಿವಪುತ್ರ ವೈದ್ಯ, ಸುರಜಸಿಂಗ್ ರಜಪೂತ್, ದೀಲಿಪ್, ಸುಭಾಷ ಮಡಿವಾಳ, ಗಣೇಶ ಭೋಸ್ಲೆ, ಭೂಷಣ ಫಾಠಕ್, ವಿಜಯಕುಮಾರ ಪಾಟೀಲ ಗಾದಗಿ, ಕುಶಾಲ ಪಾಟೀಲ ಗಾದಗಿ, ದೇವೇಂದ್ರ, ಪ್ರಕಾಶ, ಮಹಿಳಾ ಘಟಕದ ಮಹಾನಂದಾ ಪಾಟೀಲ, ಪ್ರೇಮಿಳಾ ದೇಶಪಾಂಡೆ ಸೇರಿದಂತೆ ಅನೇಕ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.