ಬೀದರ ಅಂಚೆ ಅಧೀಕ್ಷಕರಾದ ಶ್ರೀಕರಬಾಬು ಅವರಿಗೆ ಸ್ವಾಗತ

ಬೀದರ:ಜೂ.15:ಹೊಸದಾಗಿ ವರ್ಗಾವಣೆಯಾಗಿ ಬಂದ ಅಂಚೆ ಅಧೀಕ್ಷಕರಾದ ಶ್ರೀಕರಬಾಬು ಅವರನ್ನು ಬೀದರ್ ಪ್ರಧಾನ ಅಂಚೆ ಕಚೇರಿಯಲ್ಲಿ ಸ್ವಾಗತಿಸಲಾಯಿತು. ಬೀದರ್ ಅಂಚೆ ನೌಕರರ ಮನೋರಂಜನಾ ಕೂಟದಿಂದ ಈ ಸ್ವಾಗತ ಸಭೆಯನ್ನು ಆಯೋಜಿಸಲಾಗಿದ್ದು , ಬೀದರ್ ಪ್ರಧಾನ ಅಂಚೆ ಕಚೇರಿಯ ಅಂಚೆ ಪಾಲಕರದ ಶ್ರೀಮತಿ ಮಂಗಳಾ ಭಾಗವತ್ ಸ್ವಾಗತಿಸಿ , ಹೊಸ ಅಂಚೆ ಅಧೀಕ್ಷಕರ ನೇತೃತ್ವದಲ್ಲಿ ಬೀದರ್ ಅಂಚೆ ವಿಭಾಗ ಜನರಿಗೆ ಇನ್ನೂ ಹೆಚ್ಚಿನ ಸೇವೆ ಸಲ್ಲಿಸುವಂತಾಗಲಿ, ರಾಜ್ಯ ಮತ್ತು ಕೇಂದ್ರ ಸರಕಾರದ ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಅಂಚೆ ಸಿಬ್ಬಂದಿಗಳು , ಅಂಚೆ ಅಧಿಕ್ಷಕರಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಆಶ್ವಾಸನೆ ನೀಡಿದರು. . ಹೊಸದಾಗಿ ಅಧಿಕಾರ ಸ್ವೀಕರಿಸಿದ ಶ್ರೀ ಶ್ರಿಕರ್ ಬಾಬು ಮಾತನಾಡಿ ಗ್ರಾಹಕರಿಗೆ ಶೀಘ್ರ ಹಾಗೂ ತೃಪ್ತಿಕರ ಸೇವೆ ನೀಡಲು ಅಂಚೆ ಇಲಾಖೆ ಬದ್ಧ ವಾಗಿದೆ. ಹೊಸದಾಗಿ ಬಂದಿರುವ ” ಮಹಿಳಾ ಸಮ್ಮಾನ ಸೇವಿಂಗ್ಸ್ ಸರ್ಟಿಫಿಕೇಟ್ ” ತುಂಬಾ ಚೆನ್ನಾಗಿದ್ದು, ಎರಡು ವರ್ಷಗಳ ಅವಧಿಗೆ 7.5% ಬಡ್ಡಿ ಸಿಗಲಿದ್ದು , ಇದು ಅತಿ ಹೆಚ್ಚಿನ ಬಡ್ಡಿದರವಾಗಿದೆ. ವಿಶೇಷವಾಗಿ ಮಹಿಳೆಯರಿಗಾಗಿಯೇ ರೂಪಿಸಲಾದ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕೆಂದು ನುಡಿದರು. ಬೀದರ್ ಅಂಚೆ ಕಚೇರಿಯ ಸಿಬ್ಬಂದಿಗಳು, ಡಿಟಿಸಿ ಟ್ರೈನರ್ ಚಿದಾನಂದ್ ಕಟ್ಟಿ, ಕಲ್ಲಪ್ಪ ಕೋಣಿ, ಪ್ರಶಾಂತ್ ಘಾಳೆ , ಉಪಸ್ಥಿತರಿದ್ದರು