ಬೀದರ್ ಸ್ವಲ್ಪ ಹಾಟ್ ಆದರೂ ಜನ ಮಾತ್ರ ಕೂಲ್: ನಟಿ ಆಶಿಕಾ ರಂಗನಾಥ

ಬೀದರ್:ಮೇ.22: ಬೀದರ್ ರಾಜ್ಯದ ತುತ್ತ ತುದಿಯ ನಗರವಾಗಿದ್ದು, ಇಲ್ಲಿ ಸ್ವಲ್ಪ ಹಾಟ್ ಅನಿಸಿದರೂ ಇಲ್ಲಿಯ ಜನ ಮಾತ್ರ ಕೂಲಾಗೆ ನನಗೆ ಮಾತನಾಡಿಸಿದ್ದಾರೆ ಎಂದು ನಟಿ ಆಶಿಕಾ ರಂಗನಾಥ ಹೇಳಿದರು.

ನಗರದಲ್ಲಿ ನೂತನವಾಗಿ ಆರಂಭಗೊಂಡ ಜಿವಿ ಮಾಲ್ ಉದ್ಘಾಟಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾನು ಬೀದರ್‍ಗೆ ಬಂದಿದ್ದು ಮೊದಲನೇ ಸಲ ಆದರೂ ಇಲ್ಲಿಯ ಜನರ ಪ್ರೀತಿ, ವಿಶ್ವಾಸ ಕಂಡು ತುಂಬ ಖುಷಿ ಆಯ್ತು. ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಶುರು ಮಾಡಿದ ಈ ಮಾಲ್‍ನಲ್ಲಿ ರೇಷ್ಮೆ ಸೀರೆ, ಕಾಂಚಿಪುರಂ, ಮೈಸೂರು ಶಿಲ್ಕ್ ಸೇರಿದಂತೆ ಎಲ್ಲ ವಿವಿಧ ಸಾರಿಗಳು ಈ ಮಾಲ್‍ನಲ್ಲಿ ದೊರೆಯುತ್ತವೆ. ಇಲ್ಲಿಯ ಹೆಣ್ಣು ಮಕ್ಕಳು ಇನ್ನು ಮುಂದೆ ಶಾಪಿಂಗ್‍ಗಾಗಿ ಮೈಸೂರು, ಬೆಂಗಳೂರಿಗೆ ಅಥವಾ ದೂರದ ಕಾಂಚಿಪುರಂಗೆ ಹೋಗುವ ಅಗತ್ಯವಿಲ್ಲ. ಎಲ್ಲ ವಿಧದ ಸೀರೆಗಳು ಜಿವಿ ಮಾಲ್‍ನಲ್ಲಿ ದೊರೆಯಲಿವೆ ಇಲ್ಲಿಯ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಆಶಿಕಾ ಕಿವಿ ಮಾತು ಹೇಳಿದರು.

ತೆಲಂಗಾಣಾ ಹಾಗೂ ಆಂದ್ರ ಪ್ರದೇಶದ ಹತ್ತು ಕಡೆಗಳಲ್ಲಿ ಈ ಮಾಲ್‍ಗಳು ಕಾರ್ಯನಿರ್ವಹಿಸುತ್ತಿದ್ದು, ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಬೀದರ್‍ನಲ್ಲಿ ಈ ಮಾಲ್ ಆರಂಭಗೊಂಡಿದೆ. ಬಸವಣ್ಣನ ನಾಡಿನಿಂದ ಕೆಂಪೆಗೌಡ ನಾಡಿಗೆ ಈ ಮಾಲ್ ಕಾಲಿಡಲಿದೆ. ಹಾಗಾಗಿ ಬೀದರ್ ಜನ ಇದರ ಬಗ್ಗೆ ಹೆಮ್ಮೆ ಪಡಬೇಕೆಂದು ಆಶಿಕಾ ರಂಗನಾಥ ಕರೆ ಕೊಟ್ಟರು.

ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಮಾಲ್‍ನ ವ್ಯವಸ್ಥಾಪಕ ನಿರ್ದೇಶಕ ಉಮಾ ಮಹೇಶ್ವರ, ನಿರ್ದೇಶಕ ಗುರಂ ಶ್ರೀನಿವಾಸ, ವ್ಯವಸ್ಥಾಪಕ ಪಾಲುದಾರರಾದ ನಾ.ಮಾ ಅರವಿಂದ ಹಾಗೂ ಕಿರಣಕುಮಾರ ಸೇರಿದಂತೆ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.