ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಉಳಿವಿಗಾಗಿ ಜೂ.10ಕ್ಕೆ ಸಭೆ: ಸುಭಾಷ ಗಂಗಾ

ಹುಮನಾಬಾದ್:ಮೇ.14: ಸಹಕಾರ ಸಕ್ಕರೆ ಕಾರ್ಖಾನೆ ಪುನಃ ಪ್ರಾರಂಭಕ್ಕೆ ಹಾಗೂ ಕಾರ್ಖಾನೆ ಉಳಿಸುವಲ್ಲಿ ವಿಫಲಗೊಂಡ ಆಡಳಿತ ಮಂಡಳಿ ತಕ್ಷಣ ರಾಜಿನಾಮೆ ನೀಡುವಂತೆ ಜೂ. 10ಕ್ಕೆ ಸಭೆ ಕರೆಯಲಾಗಿದೆ ಎಂದು ಹಿತರಕ್ಷಣಾ ಸಮಿತಿ ಅಧ್ಯಕ್ಷ ಸುಭಾಷ ಗಂಗಾ ಮಾಹಿತಿ ನೀಡಿದರು.

ಪಟ್ಟಣದ ಕಚೇರಿಯಲ್ಲಿ ಸೋಮವಾರ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.10ಕ್ಕೆ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಹಿತರಕ್ಷಣಾ ಸಮಿತಿಯಿಂದ ಬಿಎಸ್ ಎಸ್‍ಕೆ ಕಾರ್ಖಾನೆಯ ಮುಂಭಾಗ ರೈತರು, ವ್ಯಾಪಾರ ಸ್ಥರು, ಕಾರ್ಮಿಕರ ಸಭೆ ಕರೆಯಲಾಗಿದೆ ಎಂದರು.

ಕಾರ್ಖಾನೆಯ ಆಡಳಿತ ಮಂಡಳಿ ಹೆಸರನ್ನು ದುರು ಪಯೋಗ ಪಡೆಸಿಕೊಂಡು ಅಲ್ಲಿರುವ ವಿವಿಧ ಸಲಕರಣೆ ಮಾರಾಟ ಮಾಡಿರುವುದನ್ನು ಖಂಡಿಸಿ ಹಾಗೂ ಕಾರ್ಖಾನೆ ಪುನಃ ಪ್ರಾರಂಭಕ್ಕೆ ಖಾಸಗಿಯವರಿಗೆ ಬಾಡಿಗೆ ನೀಡಿ ಅಥವಾ ಕಾರ್ಖಾನೆ ನಡೆಸಲು ಅನುದಾನ ನೀಡು ವಂತೆ ಕೇಲ ಪ್ರಮುಖ ಚರ್ಚೆ ನಡೆಸುವ ಮೂಲಕ ಜೂ.
10ರ ಬಳಿಕ ಸಿಎಂ ಬಳಿ ನಿಯೋಗ ಕರೆದೊ ಯ್ಯಲು ತಿರ್ಮಾನಿಸಲು ಸಭೆ ಕರೆಯಲಾಗಿದೆ ಎಂದರು.

ಹೆಚ್ಚಿನ ಸಂಖ್ಯೆಯಲ್ಲಿ ಬೀದರ್ ಜಿಲ್ಲೆಯ ರೈತರು, ವ್ಯಾಪಾರಸ್ಥರು, ಕಾರ್ಖಾನೆ ಉಳಿವಿಗಾಗಿ ಚಿಂತಿಸು ವವರು ಸಭೆಗೆ ಬರುವ ಮೂಲಕ ತಮ್ಮ ಸಲಹೆ, ಸೂಚನೆ ನೀಡುವಂತೆ ಮನವಿ ಮಾಡಿದರು.

ಏಪ್ರಿಲ್ 2010ರಿಂದ ಮಾರ್ಚ್ 2024ರ ವರೆ ಗಿನ 14 ವರ್ಷಗಳ ಕಾರ್ಖಾನೆಯಲ್ಲಿ ನುರಿಸಿದ ಕಬ್ಬು, ಸಕ್ಕರೆ ಮಾರಾಟ, ಸರ್ಕಾರದಿಂದ ಬಂದಿರುವ ಅನುದಾನ ಸೇರಿದಂತೆ ಲೆಕ್ಕ ಪತ್ರ ನೀಡುವಂತೆ ವ್ಯವಸ್ಥಾಪಕ ನಿರ್ದೇಶರಿಗೆ ಪತ್ರದ ಮೂಲಕ ಮಾಹಿತಿ ಕೇಳಲಾಗಿದೆ.

ಕಾರ್ಖಾನೆಗಳಲ್ಲಿ ಆಡಳಿತ ಮಂಡಳಿಯವರು ಸಾಕಷ್ಟು ಅವ್ಯವಹಾರ ಮಾಡಿದರ ಹೀಗಾಗಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆಯಲಿರುವ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕಬ್ಬು ಬೆಳೆಗಾರರು ಆಗಮಿಸಿ ಮುಂದಿನ ಕ್ರಮದ ಬಗ್ಗೆ ಸಲಹೆ ನೀಡಬೇಕು ಎಂದು. ಹಿತರಕ್ಷಣೆ ಉಪಾಧ್ಯಕ್ಷ ಶಿವರಾಜ ಸೇರಿದಂತೆ ಇದ್ದರು.