ಬೀದರ್ ಸಮ್ಮೇಳನದಲ್ಲಿ ಎರಡು ಕೃತಿ ಬಿಡುಗಡೆ

ಕಲಬುರಗಿ:ಮಾ.12: ಬೀದರ ಜಿಲ್ಲಾ 21 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗಜಲ್ ಕವಯಿತ್ರಿ ಡಾ.ಪ್ರೇಮಾ ಹೂಗಾರ ಅವರ ಎರಡು ಕೃತಿಗಳನ್ನು ಭಾನುವಾರ ಬಿಡುಗಡೆ ಮಾಡಲಾಯಿತು.
ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರಗಿಯಿಂದ ಇತ್ತೀಚೆಗೆ ಪಿಎಚ್‍ಡಿ ಪದವಿ ಪಡೆದ ಡಾ.ಪ್ರೇಮಾ ಹೂಗಾರ ಅವರು ಬರೆದ ಬೆಂಗಳೂರಿನ ಸಿವಿಜಿ ಪ್ರಕಟಿಸಿರುವ ಮಕ್ಕಳ ಸಂಕಲನ ಲಾಲಿ’ ಮತ್ತು ಬೀದರಿನ ಸಿದ್ದೇಶ್ವರ ಪ್ರಕಾಶನ ಪ್ರಕಟಿಸಿರುವ ತಾಂಕಾ ಸಂಕಲನಹಕ್ಕಿಗೂಡು’ ಕೃತಿಗಳನ್ನು ಸಮ್ಮೇಳನಾಧ್ಯಕ್ಷರಾದ ಭಾಲ್ಕಿಯ ಡಾ.ಚನ್ನಬಸವ ಪಟ್ಟದ್ದೇವರು ಹಾಗೂ ಹಿರಿಯ ಸಾಹಿತಿ ಸಿದ್ದು ಯಾಪಲಪರವಿ ಬಿಡುಗಡೆ ಮಾಡಿದರು. ಮುಖಂಡರಾದ ಬಾಬು ವಾಲಿ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಇತರರಿದ್ದರು.
ಇದೇ ಸಂದರ್ಭದಲ್ಲಿ, ಗುಲ್ಬರ್ಗ ವಿವಿಯಿಂದ ಪಿಎಚ್‍ಡಿ ಪದವಿ ಪಡೆದ ಹಿನ್ನೆಲೆಯಲ್ಲಿ ಡಾ.ಪ್ರೇಮಾ ಹೂಗಾರ ಅವರನ್ನು ಸಮ್ಮೇಳನಾಧ್ಯಕ್ಷರಾದ ಭಾಲ್ಕಿಯ ಡಾ.ಚನ್ನಬಸವ ಪಟ್ಟದ್ದೇವರು ಶಾಲು ಹೊದಿಸಿ, ಬಸವಣ್ಣನ ಭಾವಚಿತ್ರ ನೀಡಿ ಗೌರವಿಸಿದರು.