ಬೀದರ್: ವಿಮಾನಯಾನ ಸೇವೆ ಪುನರಾರಂಭಕ್ಕೆ ಆಗ್ರಹ, ಪ್ರತಿಭಟನೆ

ಬೀದರ್: ಮಾ.17:ಬೀದರ್-ಬೆಂಗಳೂರು ವಿಮಾನಯಾನ ಸೇವೆ ಪುನರಾರಂಭಿಸಬೇಕು ಎಂದು ಆಗ್ರಹಿಸಿ ಭಾರತ ರಕ್ಷಣಾ ವೇದಿಕೆಯ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಬೀದರ್-ಬೆಂಗಳೂರು ವಿಮಾನಯಾನವು ಯಶಸ್ವಿಯಾಗಿ ನಡೆದಿತ್ತು. 2023ರಲ್ಲಿ ವಿಮಾನಯಾನ ಸಂಸ್ಥೆಯೊಂದಿಗಿನ ಒಪ್ಪಂದ ಕೊನೆಗೊಂಡ ಹಿನ್ನೆಲೆಯಲ್ಲಿ ಸೇವೆ ನಿಂತಿದೆ.

ಮರು ಒಪ್ಪಂದ ಮಾಡಿಕೊಂಡು ತಕ್ಷಣವೇ ವಿಮಾನ ಸೇವೆ ಶುರು ಮಾಡಬೇಕೆಂದು ಒತ್ತಾಯಿಸಿದರು. ಈ ಸಂಬಂಧ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಹೆಸರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.

ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ಗೌಡಪನೋರ, ಪ್ರದೀಪ ಯನಗುಂದಾ, ಅರುಣ ಕೋಡಗೆ, ಶ್ರೀನಿವಾಸ ಮಲ್ಬಾ, ಬಸವರಾಜ ಪಾಟೀಲ ಇನ್ನಿತರರು ಹಾಜರಿದ್ದರು.