ಬೀದರ್ ಭೇಟಿ ಸಂದರ್ಭ ಪತ್ರಿಕಾ ಭವನಕ್ಕೆ ಭೇಟಿ ನೀಡುವೆ: ಸಿಎಂ

ಬೀದರ್:ಸೆ.12: ಬೀದರ್ ಜಿಲ್ಲೆಗೆ ಭೇಟಿ ನೀಡಿದಾಗ ಪತ್ರಿಕಾ ಭವನಕ್ಕೆ ಕಡ್ಡಾಯವಾಗಿ ಭೇಟಿ ನೀಡುವೆ ಸಧ್ಯಕ್ಕೆ ಶೀಘ್ರದಲ್ಲಿ ಪತ್ರಿಕಾ ಭಾವ ಉದ್ಘಾಟನೆ ಕೈಗೊಳ್ಳಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಮುಖ್ಯಮಂತ್ರಿಗಳ ನಿವಾಸದಲ್ಲಿ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ ಅವರ ನೇತೃತ್ವದಲ್ಲಿ ಬೀದರ್ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಗೂ ಹಿರಿಯ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಮ್ಮ ಜಿಲ್ಲೆಯ ಸಚಿವರಾದ ಪ್ರಭು ಚವ್ಹಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಂಕರ ಪಾಟೀಲ ಮುನೆನಕೊಪ್ಪ ಅವರ ನೇತೃತ್ವದಲ್ಲಿ ಪತ್ರಿಕಾ ಭವನ ಉದ್ಘಾಟಿಸಿ ಎಂದು ಸಲಹೆ ನೀಡಿದರು.
ಆದಷ್ಟು ಬೇಗೆ ಭವನ ಉದ್ಘಾಟನೆ ಮಾಡಿ ಎಂದು ಸಿಎಂ ಇದೇ ಸಂದರ್ಭದಲ್ಲಿ ಪ್ರಭು ಚವ್ಹಾಣ ಅವರಿಗೆ ಸೂಚಿಸಿದ ಸಿಎಂ ಅವರು, ಜಿಲ್ಲೆಯ ಜೀವನಾಡಿಯಾಗಿರುವ ಪತ್ರಿಕರ್ತರಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ರಾದ ಶಿವಾನಂದ ತಗಡೂರು ಬೀದರ್ ಜಿಲ್ಲಾ ಅಧ್ಯಕ್ಷರಾದ ಅಶೋಕ್ ಕುಮಾರ್ ಕರಂಜಿ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಸದಸ್ಯರಾದ ಅಪ್ಪಾರಾವ್ ಸೌದಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಬೀದರ್ ಜಿಲ್ಲಾ ಹಿರಿಯ ಪತ್ರಕರ್ತರಾದ ಚಂದ್ರಕಾಂತ ಮಸಾನಿ ಗುರುರಾಜ ಕುಲಕರ್ಣಿ ಶಶಿಕಾಂತ ಬಂಬುಳಗಿ, ಮಾರುತಿ ಬಾವಿದೊಡ್ಡಿ, ಅನಿಲಕುಮಾರ್ ದೇಶಮುಖ ಹಾಗೂ ಇತರರು ಈ ಸಂದರ್ಭದಲ್ಲಿದ್ದರು.