ಬೀದರ್ | ಬೊಮ್ಮಗೊಂಡೇಶ್ವರ ಉತ್ಸವ: ಬೈಕ್ ರ್ಯಾಲಿ

ಬೀದರ್:ಮಾ.11: ಬೊಮ್ಮಗೊಂಡೇಶ್ವರ ಉತ್ಸವದ ಪ್ರಚಾರಾರ್ಥವಾಗಿ ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ವತಿಯಿಂದ ನಗರದಲ್ಲಿ ಬೈಕ್ ರ್ಯಾಲಿ ನಡೆಯಿತು.

ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷಕುಮಾರ ಜೋಳದಾಪಕೆ ನೇತೃತ್ವದಲ್ಲಿ ನಾವದಗೇರಿಯ ಬೊಮ್ಮಗೊಂಡೇಶ್ವರ ಬೆಟ್ಟದಿಂದ ಆರಂಭವಾದ ಬೈಕ್ ರ್ಯಾಲಿಯು ಅಂಬೇಡ್ಕರ್ ವೃತ್ತ, ಜನರಲ್ ಕಾರ್ಯಪ್ಪ ವೃತ್ತ, ನೆಹರೂ ಕ್ರೀಡಾಂಗಣ, ಮಡಿವಾಳ ಮಾಚಿದೇವ ವೃತ್ತ, ಪಾಪನಾಶ ಗೇಟ್, ಹಳೆಯ ಆರ್.ಟಿ.ಒ ಕಚೇರಿ, ತಾಯಿ- ಮಗು ವೃತ್ತ, ಕೆ.ಇ.ಬಿ.ಕಚೇರಿ, ಹರಳಯ್ಯ ವೃತ್ತ, ಶಿವಾಜಿ ವೃತ್ತ, ಮಹಾವೀರ ವೃತ್ತ, ಬಸವೇಶ್ವರ ವೃತ್ತ, ಬೊಮ್ಮಗೊಂಡೇಶ್ವರ ವೃತ್ತ, ಗುಂಪಾ, ಮೈಲೂರು, ಚಿದ್ರಿ ರಿಂಗ್ ರಸ್ತೆ ಮೂಲಕ ಹಾಯ್ದು ಗಾಂಧಿಗಂ???ನ ಕನಕ ಭವನಕ್ಕೆ ತಲುಪಿ ಸಮಾರೋಪಗೊಂಡಿತು.

ಬೊಮ್ಮಗೊಂಡೇಶ್ವರ ಭಾವಚಿತ್ರ ಹಾಗೂ ಬೊಮ್ಮಗೊಂಡೇಶ್ವರ ಉತ್ಸವಕ್ಕೆ ಆಹ್ವಾನ ನೀಡುವ ಕಟೌ???ಗಳನ್ನು ಅಳವಡಿಸಿದ ಅಲಂಕೃತ ಪ್ರಚಾರ ರಥ ???ಯಾಲಿಯ ಮುಂಭಾಗದಲ್ಲಿ ಇತ್ತು. ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘ ಸೇರಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಬೈ???ಗೆ ಹಳದಿ ಬಣ್ಣದ ಧ್ವಜ ಕಟ್ಟಿಕೊಂಡು ಉತ್ಸಾಹದಿಂದ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ರ್ಯಾಲಿಯ ಉದ್ದಕ್ಕೂ ಬೊಮ್ಮಗೊಂಡೇಶ್ವರರಿಗೆ ಜಯವಾಗಲಿ, ಬೊಮ್ಮಗೊಂಡೇಶ್ವರ ಉತ್ಸವಕ್ಕೆ ಜಯವಾಗಲಿ ಎನ್ನುವ ಘೋಷಣೆಗಳು ಮೊಳಗಿದವು.
ಇದಕ್ಕೂ ಮುನ್ನ ಗೊಂಡ ಸಮಾಜದ ಮುಖಂಡ ನರಸಿಂಗ್ ಚಂದಾಪುರೆ ಅವರು ಬೈಕ್ ???ಯಾಲಿಗೆ ಚಾಲನೆ ನೀಡಿದರು.
ಮಾ. 12 ರಂದು ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರ ರಂಗ ಮಂದಿರದಲ್ಲಿ ನಡೆಯಲಿರುವ ಬೊಮ್ಮಗೊಂಡೇಶ್ವರ ಉತ್ಸವದ ಯಶಸ್ವಿಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಸಮಾಜ ಬಾಂಧವರು ಹಾಗೂ ಬೊಮ್ಮಗೊಂಡೇಶ್ವರ ಅನುಯಾಯಿಗಳು ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಂತೋಷಕುಮಾರ ಜೋಳದಾಪಕೆ ಮನವಿ ಮಾಡಿದರು.
ಮುಖಂಡರಾದ ತುಕಾರಾಮ ಚಿಮಕೋಡ್, ವಿಜಯಕುಮಾರ ನಾವದಗೇರಿ, ಕಲ್ಲಪ್ಪ ಬೆನಕನಳ್ಳಿ, ಲೋಕೇಶ ಮರ್ಜಾಪುರ, ಸಚಿನ್ ಮಲ್ಕಾಪುರೆ, ರವಿ ಸಿರ್ಸೆ, ಸಚಿನ್ ಜಾಂಪಾಡೆ, ಆನಂದ ಸೋಲಪುರೆ, ವಿಜಯಕುಮಾರ ಬ್ಯಾಲಹಳ್ಳಿ, ಆನಂದ ಸಿಕೇನಪುರೆ, ಮಾರುತಿ ಪೂಜಾರಿ, ಸುನೀಲ್ ಚಿಲ್ಲರ್ಗಿ, ರಜನಿಕಾಂತ ಕಮಠಾಣ, ಲಕ್ಷ್ಮಣ ಕೊಳಾರ, ಎಂ.ಪಿ. ವೈಜಿನಾಥ, ಅನಿಲ್ ಚಿಲ್ಲರ್ಗಿ, ಪ್ರಕಾಶ ಜಾಂಪಾಡೆ, ಸಿದ್ದು ಕಿಂಡಿ ಪಾಲ್ಗೊಂಡಿದ್ದರು.