ಬೀದರ್ ನಿಂದ ತಿರುಪತಿಗೆ ಇನ್ನೊಂದು ರೈಲು ಆರಂಭ

ಬೀದರ್: ಜು.15:ಬೀದರ್‍ನಿಂದ ತಿರುಪತಿಗೆ ಇನ್ನೊಂದು ರೈಲು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಇದೇ ತಿಂಗಳಲ್ಲಿ ಎರಡು ರೈಲುಗಳು ಈ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ನಡೆಸಲಿವೆ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.
ಜುಲೈ 16 ಮತ್ತು 23 ರಂದು ನಾಂದೇಡ್- ತಿರುಪತಿ ವಯಾ ಬೀದರ್ ರೈಲು (ಸಂಖ್ಯೆ 07633) ನಾಂದೇಡನಿಂದ ಮಧ್ಯಾಹ್ನ 12ಕ್ಕೆ ಹೊರಟು ಪೂರ್ಣಾ ಜಂಕ್ಷನ್, ಪರಭಣಿ, ಲಾತೂರ್ ರಸ್ತೆ, ಭಾಲ್ಕಿ ಮಾರ್ಗವಾಗಿ ಸಂಜೆ 6ಕ್ಕೆ ಬೀದರಗೆ ಬರಲಿದೆ. ಬೀದರನಿಂದ ಸಂಜೆ 6.02ಕ್ಕೆ ಹೊರಟು ವಿಕಾರಾಬಾದ್, ಚಿತ್ತಾಪುರ, ರೇಣಿಗುಂಟಾ ಜಂಕ್ಷನ್ ಮಾರ್ಗವಾಗಿ ಜುಲೈ 17 ಹಾಗೂ ಜುಲೈ 24 ರಂದು ಬೆಳಿಗ್ಗೆ 8.30ಕ್ಕೆ ತಿರುಪತಿಗೆ ತಲುಪಲಿದೆ ಎಂದು ಹೇಳಿದ್ದಾರೆ.
ಜುಲೈ 17 ಮತ್ತು 24 ರಂದು ತಿರುಪತಿ- ನಾಂದೇಡ್ ರೈಲು (ಸಂಖ್ಯೆ 07634) ರಾತ್ರಿ 9.10ಕ್ಕೆ ತಿರುಪತಿಯಿಂದ ಹೊರಟು ಮರುದಿನ ಬೆಳಿಗ್ಗೆ 8.58ಕ್ಕೆ ಬೀದರ್‍ಗೆ ಬರಲಿದೆ. ಭಾಲ್ಕಿಗೆ ಬೆಳಿಗ್ಗೆ 9.40 ಮತ್ತು ಸಂಜೆ 5.20ಕ್ಕೆ ನಾಂದೇಡಗೆ ತಲುಪಲಿದೆ ಎಂದು ತಿಳಿಸಿದ್ದಾರೆ.
ಇದರ ಜತೆಗೆ ಜುಲೈ 17, 24 ಮತ್ತು 31 ತಿರುಪತಿ-ನಗರಸೋಲ್ ರೈಲು (ಸಂಖ್ಯೆ 07637) ಬೆಳಿಗ್ಗೆ 7ಕ್ಕೆ ತಿರುಪತಿಯಿಂದ ಹೊರಟು ಗುಂಟೂರ್, ಸಿಕಿಂದ್ರಾಬಾದ್, ಲಿಂಗಂಪಲ್ಲಿ, ವಿಕಾರಾಬಾದ್ ಮಾರ್ಗವಾಗಿ ಬೀದರಗೆ ರಾತ್ರಿ 11ಕ್ಕೆ ತಲುಪಲಿದೆ. ಭಾಲ್ಕಿಗೆ ರಾತ್ರಿ 11.50ಕ್ಕೆ, ಉದಗಿರ, ಲಾತೂರ್ ಮಾರ್ಗವಾಗಿ ಜುಲೈ 18, 25 ಹಾಗೂ ಅಗಸ್ಟ್ 1 ರಂದು ಮಧ್ಯಾಹ್ನ 01.20ಕ್ಕೆ ನಗರಸೋಲ್ ತಲುಪಲಿದೆ ಎಂದು ಹೇಳಿದ್ದಾರೆ.
ಜುಲೈ 18, 25 ಹಾಗೂ ಆಗಸ್ಟ್ 1 ರಂದು ನಗರಸೋಲ್- ತಿರುಪತಿ ರೈಲು (ಸಂಖ್ಯೆ 07638) ನಗರಸೋಲನಿಂದ ರಾತ್ರಿ 10ಕ್ಕೆ ಹೊರಟು ಮರುದಿನ ಭಾಲ್ಕಿಗೆ ಬೆಳಿಗ್ಗೆ 6.40ಕ್ಕೆ, ಬೀದರಗೆ ಬೆಳಿಗ್ಗೆ 7.10ಕ್ಕೆ ತಲುಪಲಿದೆ, ವಿಕರಾಬಾದ್, ಸಿಕಿಂದ್ರಾಬಾದ್, ಗುಂಟೂರ್, ರೇಣಿಗುಂಟಾ ಮೂಲಕ ತಿರುಪತಿಗೆ ಮಧ್ಯರಾತ್ರಿ 1ಕ್ಕೆ ತಲುಪಲಿದೆ.
ಪ್ರಯಾಣಿಕರು ಪ್ರಾಯೋಗಿಕ ರೈಲುಗಳ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.