ಬೀದರ್ ನಲ್ಲಿ ಬೆಳ್ಳಂ ಬೆಳಗ್ಗೆ ರೌಡಿ ಶೀಟರ್ ಗಳ ಮನೆ ಮೇಲೆ ದಾಳಿ : ನಶೆ ಏರಿಸುವ ಮೆಡಿಸೀನ್ ಪತ್ತೆ

ಬೀದರ್:ಮಾ.17: ವಿಧಾನಸಭೆ ಚುನಾವಣೆ ಸಮೀಪವಾಗುತ್ತಿರುವ ಹಿನ್ನೆಲೆ ಪೆÇಲೀಸರು ಎಲ್ಲಾ ಕಡೆ ಅಲರ್ಟ್ ಆಗಿದ್ದಾರೆ.ಬೀದರ್ ನಲ್ಲಿ ಬೆಳ್ಳಂ ಬೆಳಗ್ಗೆ ರೌಡಿ ಶೀಟರ್ ಗಳಿಗೆ ಪೆÇಲೀಸರು ಬಿಗ್ ಶಾಕ್ ನಿಡಿದ್ದು, ಮನೆ ಮೇಲೆ ದಾಳಿ ನಡೆಸಿ ನಶೆ ಎರಿಸುವ ಮೆಡಿಸೀನ್ಗಳನ್ನು ಜಪ್ತಿ ಮಾಡಿದ್ದಾರೆ.

ನಗರದ ಓಲ್ಡ್ ಸಿಟಿ ಮಾಂಗರ್ ವಾಡಿ ಗಲ್ಲಿಯಲ್ಲಿ ರೌಡಿಶೀಟರ್ಗಳ ಮನೆ ಮೇಲೆ ದಾಳಿ ಮಾಡಿದ್ದಾರೆ. ಎಸ್ಪಿ ಚನ್ನಬಸವಣ್ಣ ಲಂಗೋಟಿ ಮಾರ್ಗದರ್ಶನದಲ್ಲಿ ಡಿಎಸ್ಪಿ ಕೆ.ಎಂ ಸತೀಶ್ ತಂಡ ದಾಳಿ ಮಾಡಿದ್ದು, ಕೆಲವರ ಮನೆಯಲ್ಲಿ ನಶೆ ಎರಿಸುವ ಮೇಡಿಸೀನ್ ಪತ್ತೆಯಾಗಿದೆ ಎನ್ನಲಾಗಿದೆ. ಸದ್ಯ, ಇಬ್ಬರನ್ನು ವಶಕ್ಕೆ ಪಡೆದುಕೊಂಡಿರುವ ಪೆÇಲೀಸರು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ರೌಡಿ ಶೀಟರ್ಗಳಿಗೆ ಪೆÇಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.