ಬೀದರ್ ನಲ್ಲಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ ಆಚರಣೆ

ಬೀದರ:ಡಿ.26: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶುಕ್ರವಾರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ ಆಚರಿಸಲಾಯಿತು.

ಯುವ ಮೋರ್ಚಾ: ಬಿಜೆಪಿ ನಗರ ಯುವ ಮೋರ್ಚಾ ವತಿಯಿಂದ ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ನಡೆದ ವಾಜಪೇಯಿ ಜನ್ಮದಿನ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಗೋವುಗಳಿಗೆ ಪೂಜೆ ಸಲ್ಲಿಸಿ, ಬೆಲ್ಲ ಹಾಗೂ ಬಾಳೆ ಹಣ್ಣು ತಿನ್ನಿಸಿದರು. ಮೇವು ವಿತರಣೆ ಮಾಡಿದರು.

ಆಶ್ರಮದ ಜ್ಯೋತಿರ್ಮಯಾನಂದ ಸ್ವಾಮೀಜಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ, ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಪಾಟೀಲ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ನಗರ ಘಟಕದ ಅಧ್ಯಕ್ಷ ಅಂಬರೀಷ ಬಟನಾಪುರೆ, ಮುಖಂಡರಾದ ಹಣಮಂತ ಬುಳ್ಳಾ, ಮೃತ್ಯುಂಜಯ, ಅನಿಲ್, ಸತೀಶ ಶಟಗೊಂಡ, ವಿಶಾಲ ಮಡಿವಾಳ, ಉಪಾರ ಕೃಷ್ಣ, ಯೋಗೇಶ ಬಿರಾದಾರ, ಧನರಾಜ ಮಡಿವಾಳ, ಸಂಜಯ ಜೀರ್ಗೆ, ಸಂತೋಷ ಕಾಳೆ, ಸಚಿನ್ ಪಾಟೀಲ್ ಇದ್ದರು.
ವಾಜಪೇಯಿ ವೃತ್ತ:
ಬಿಜೆಪಿ ನಗರ ಮಂಡಲ ವತಿಯಿಂದ ನಗರದ ಶಿವನಗರದ ಅಟಲ್ ಬಿಹಾರಿ ವಾಜಪೇಯಿ ವೃತ್ತದಲ್ಲಿ ವಾಜಪೇಯಿ ಅವರ ಜನ್ಮದಿನ ಆಚರಿಸಲಾಯಿತು
ಸಂಸದ ಭಗವಂತ ಖೂಬಾ ಅವರು ವಾಜಪೇಯಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಪಕ್ಷದ ನಗರ ಘಟಕದ ಅಧ್ಯಕ್ಷ ಹಣಮಂತ ಬುಳ್ಳಾ, ಪ್ರಧಾನ ಕಾರ್ಯದರ್ಶಿ ಸುನೀಲಕುಮಾರ ಗೌಳಿ, ಅನಿಲಕುಮಾರ ರಾಜಗೀರಾ ಇದ್ದರು.

ಬಿಜೆಪಿ ಕಚೇರಿ:
ನಗರದ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ ಹಾಗೂ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಅವರು ವಾಜಪೇಯಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಮೋದಿ ಭಾಷಣ ವೀಕ್ಷಣೆ: ನಗರದ ಗಾಂಧಿಗಂಜ್‍ನ ಎಪಿಎಂಸಿ ಸಭಾಂಗಣದಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾಷಣದ ನೇರ ಪ್ರಸಾರವನ್ನು ಬಿಜೆಪಿ ಕಾರ್ಯಕರ್ತರು ರೈತರೊಂದಿಗೆ ವಿಕ್ಷಿಸಿದರು.
ರಾಜ್ಯ ಕೈಗಾರಿಕಾ ಅಭಿವೃದ್ಧಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಕೇಸ್ಕರ್, ಎಪಿಎಂಸಿ ಅಧ್ಯಕ್ಷ ಅನಿಲಕುಮಾರ ಪನ್ನಾಳೆ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕುಶಾಲ ಪಾಟೀಲ ಗಾದಗಿ, ವಿಜಯಕುಮಾರ ಆನಂದೆ, ರಾಜಕುಮಾರ ಚಿದ್ರಿ, ಶಿವಪುತ್ರ ವೈದ್ಯ, ಸುರೇಶ ಮಾಶೆಟ್ಟಿ, ಸುಭಾಷ ಮಡಿವಾಳ, ಸಂಜು ಪಾಟೀಲ, ಶಶಿಧರ ಹೊಸಳ್ಳಿ, ಸಂತೋಷ ಚಿಮಕೋಡೆ, ಪ್ರಸನ್ನ ಲಕ್ಷ್ಮಿ ದೇಶಪಾಂಡೆ, ಚಂದ್ರಕಲಾ ವಿಶ್ವಕರ್ಮ, ಲುಂಬಿಣಿ ಗೌತಮ, ಉಪೇಂದ್ರ ದೇಶಪಾಂಡೆ, ಕಿರಣ ಪಾಲಂ ಇದ್ದರು.