ಬೀದರ್ ನಗರಸಭೆ ಅತಂತ್ರ ಫಲಿತಾಂಶ: ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ ಕಾಂಗ್ರೆಸ್

ಬೀದರ,ಏ.30- ಬೀದರ ನಗರಸಭೆ ಚುನಾವಣೆ ಮತ ಎಣಿಕೆ ಕಾರ್ಯ ಇಲ್ಲಿನ ಗುರುನಾನಕ ಪಬ್ಲಿಕ್ ಶಾಲೆಯಲ್ಲಿ ಇಂದು ಬೆಳಿಗ್ಗೆ ಆರಂಭಗೊಡು, ಮಧ್ಯಾಹ್ನದ ಒಳಗೆ ಫಲಿತಾಂಶ ಪ್ರಕಟವಾಗಿದೆ.
ಚುನಾವಣೆ ನಡೆದ ಒಟ್ಟು 32 ಸ್ಥಾನಗಳ ಪೈಕಿ 15 ರಲ್ಲಿ ಕಾಂಗ್ರೆಸ್, 7 ರಲ್ಲಿ ಜೆಡಿಎಸ್, 2ರಲ್ಲಿ ಎಐಎಂಐಎಂ, ಎಪಿಪಿ-1 ಸ್ಥಾನ ಹಾಗೂ 8 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದೆ.
ನಗರಸಭೆಯ ಒಟ್ಟು 35 ವಾರ್ಡ್ ಗಳ ಪೈಕಿ ವಾರ್ಡ್ ಸಂಖ್ಯೆ 28ಕ್ಕೆ ಅವಿರೋಧ ಆಯ್ಕೆ ನಡೆದಿದೆ. ವಾರ್ಡ್ ಸಂಖ್ಯೆ 33 ರ ಫಲಿತಾಂಶ ಇನ್ನು ಬರಬೇಕಿದೆ. ವಾರ್ಡ್ ಸಂಖ್ಯೆ 26 ಹಾಗೂ 32 ಹೊರತುಪಡಿಸಿ ಉಳಿದ 32 ವಾರ್ಡಗಳ ಸದಸ್ಯ ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆದಿತ್ತು.
ಸುರಕ್ಷತಾ ಕ್ರಮ: ಮತ ಎಣಿಕೆ ಕೇಂದ್ರದಲ್ಲಿ ಸುರಕ್ಷತಾ ಕ್ರಮ ಅನುಸರಿಸಲಾಗಿದೆ.ಬಂದೋಬಸ್ತ್ಗೆ ನಿಯೋಜಿತ ಪೆÇಲೀಸ್ ಸಿಬ್ಬಂದಿ ಪಾಸ್, ಕೋವಿಡ್ ನೆಗೆಟಿವ್ ವರದಿ ಹೊಂದಿದ್ದ ಅಭ್ಯರ್ಥಿಗಳು ಹಾಗೂ ಮತ ಎಣಿಕೆ ಏಜೆಂಟರಿಗೆ ಮಾತ್ರ ಎಣಿಕೆ ಕೇಂದ್ರದೊಳಗೆ ಪ್ರವೇಶಿಸಲು ಅವಕಾಶವಿದೆ.
ಅಭ್ಯರ್ಥಿಗಳು, ಮತ ಎಣಿಕೆ ಏಜೆಂಟರು ಹಾಗೂ ಎಣಿಕೆ ಕರ್ತವ್ಯಕ್ಕೆ ನಿಯೋಜಿತ ಸಿಬ್ಬಂದಿ ಮಾಸ್ಕ್ ಧರಿಸುವುದರ ಜೊತೆಗೆ ಸುರಕ್ಷಿತ ಅಂತರ ಕಾಯ್ದುಕೊಂಡರು. ಮೊದಲಿಗೆ ಮತ ಎಣಿಕೆ ಕೇಂದ್ರವನ್ನು ಸ್ಯಾನಿಟೈಸ್ ಮಾಡಲಾಯಿತು.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು: ಹುಮನಾಬಾದ್ ಪಟ್ಟಣ ಪಂಚಾಯಿತಿಯ ವಾರ್ಡ್ ಸಂಖ್ಯೆ 11ರ ಸದಸ್ಯ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ 168 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಮತ ಎಣಿಕೆ ಹುಮನಾಬಾದ್ ತಹಶೀಲ್ದಾರ್ ಕಚೇರಿಯಲ್ಲಿ ನಡೆಯಿತು.