ಬೀದರ್ ನಗರದಲ್ಲಿ ಹೈಟೆಕ್ ಚರ್ಮರೋಗ ಆಸ್ಪತ್ರೆ ಉದ್ಘಾಟನೆ

ಬೀದರ್ :ಮೇ.30:ನಗರದಲ್ಲಿ ಬರುವ ನೆಹರು ಸ್ಟೇಡಿಯಂ ರಸ್ತೆ ಸಾಯಿಪುಷ್ಪಂಜಲಿ ಕಲ್ಯಾಣ ಮಂಟಪದ ಸಮೀಪ ಹೈಟೆಕ್ ಚರ್ಮ ರೋಗದ ಆಸ್ಪತ್ರೆ ಉದ್ಘಾಟನೆಗೊಂಡಿದೆ ಬೀದರ್ ನಗರದ ಹೃದಯ ಗುದಗೆ ಆಸ್ಪತ್ರೆಯ ಅಧ್ಯಕ್ಷರಾದ ಡಾ. ಚಂದ್ರಕಾಂತ್ ಗುದಗೆ ಅವರು ಚರ್ಮರೋಗದ ಹೈಟೆಕ್ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿ ಅವರು ಮುಂದಿನ ದಿನಗಳಲ್ಲಿ ಚರ್ಮರೋಗದ ಖ್ಯಾತ ಮಹಿಳಾ ತಜ್ಞರಾದ ಶ್ರೀಮತಿ ಸುಪ್ರಿಯ ಕೊಡಗೆ ಪಾಟೀಲ್ ಅವರು ಒಳ್ಳೆ ರೀತಿಯಿಂದ ಸೇವೆ ಸಲ್ಲಿಸಿ ರೋಗಿಗಳ ಪ್ರೀತಿಗೆ ಪಾತ್ರರಾಗಬೇಕೆಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಬೀದರ್ ಜಿಲ್ಲಾ ಘಟಕದ ಅಧ್ಯಕ್ಷರಾದ ವೈಜಿನಾಥ ಕಮಠಾಣೆ, ಡಾಕ್ಟರ್ ವಿಶ್ವನಾಥ್ ಪಾಟೀಲ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಮಹೇಶ ಬಿರಾದಾರ, ಚರ್ಮರೋಗ ತಜ್ಞರಾದ ಸೋಮನಾಥ ಪಾಟೀಲ್, ಡಾ. ಸಚಿನ್ ಗುದಗೆ, ಡಾ. ಶಾರದಾ ಗುದಗೆ, ಡಾ. ಶಿವರಾಜ ಬಿರಾದಾರ, ಡಾ. ರಾಜಶ್ರಿ ಬಿರಾದಾರ, ಡಾ. ಸಿ. ಆನಂದರಾವ, ಡಾ. ಸಂತೋಷ ರೇಜಂತಲ್, ಡಾ. ಮಹೇಶ ತೊಂಡಾರೆ, ಮಹಿಳಾ ತಜ್ಞರಾದ ಎಸಿ ಲಲಿತಮ್ಮ, ಬಸವರಾಜ ಪಾಟೀಲ್, ಸುಭಾಷ್ ಕೊಡಗೆ, ಅಶೋಕ್ ಕೊಡಗೆ, ಹಾವಶೆಟ್ಟಿ ಪಟೀಲ್, ಚೆನ್ನಬಸವಣ್ಣ ಬಳತೆ, ಬಂಡೆಪ್ಪಾ ವಕೀಲ್ ಸೇರಿದಂತೆ ಮತ್ತಿತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.