ಬೀದರ್ ದಕ್ಷಿಣ ಕ್ಷೇತ್ರದ ಕಾರ್ಯಕಾರಿಣಿ ಸಭೆ

ಬೀದರ್ :ಜೂ.20:ದಕ್ಷಿಣ ಕ್ಷೇತ್ರದಲ್ಲಿ ಡಾ. ಶೈಲೇಂದ್ರ ಬೆಲ್ದಾಳೆ ಅವರು ಎರಡು ಬಾರಿ ಚುನಾವಣೆಗಳಲ್ಲಿ ಯಶಸ್ವಿಯಾಗಿಲ್ಲ ಆದರು ಕ್ಷೇತ್ರದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರಕಾರದ ಅನೇಕ ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಇಂದು ಅವರು ಶಾಸಕರಾಗಿ ಆಯ್ಕೆಯಾಗಿದ್ದಾರೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರದ ಕಮಠಾಣ ಗ್ರಾಮದ ಹೊರವಲಯದಲ್ಲಿರುವ ಪಶುವೈದ್ಯಕೀಯ ಕಾಲೇಜ ಹತ್ತಿರದ ಪೇಟ್ರೋಲ್ ಬಂಕ್ ಬಳಿಯಲ್ಲಿರುವ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು.
ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಪಕ್ಷದ ಮುಖಂಡರ, ಕಾರ್ಯಕರ್ತರ ಜೊತೆ
ಡಾ. ಶೈಲೇಂದ್ರ ಬೆಲ್ದಾಳೆ ಅವರ ಪಕ್ಷ ಸಂಘಟನೆ ಮತ್ತು ಹೋರಾಟ ಇಂದು ಗುರಿಮುಟ್ಟಲು ಸಾಧ್ಯವಾಗಿದೆ ಅವರು ಮುಂದಿನ ದಿನಗಳಲ್ಲಿಯೂ ಸಹ ಕ್ಷೇತ್ರದ ಜನರಿಗಾಗಿ ಹಗಲಿರುಳು ಶ್ರಮಿಸುತ್ತಾರೆ ಎಂದರು.
ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಅನೇಕ ಯೋಜನೆಗಳು ಜನಸಾಮಾನ್ಯರು ಸದುಪಯೋಗ ಪಡಿಸಿಕೊಂಡಿದ್ದಾರೆ ಬಡಜನರಿಗಾಗಿ ನಮ್ಮ ಕೇಂದ್ರ ಸರ್ಕಾರ ಹಗಲಿರುಳು ದುಡಿಯಲು ಸದಾ ಸಿದ್ಧವಿದೆ. ನಮ್ಮ ರಾಜ್ಯ ಸರ್ಕಾರವು ಸಹ ಅನೇಕ ಜನಪರ ಕಾಳಜಿಯ ವಿವಿಧ ಯೋಜನೆಗಳನ್ನು ಜಾರಿಗೆ ತಂದು ಜನರ ಹಿತ ಕಾಪಾಡಿತ್ತು ಆದರು ಸಹ ಕಾಂಗ್ರೆಸ್ ಪಕ್ಷದ ಸುಳ್ಳು ಆಶ್ವಾಸನೆಯಿಂದ ಕಾಂಗ್ರೆಸ್ ಪಕ್ಷ ಗೆದ್ದಿದೆ ಆದರೆ ಇಗಾಗಲೆ ಕಾಂಗ್ರೆಸ್ ಪಕ್ಷದ ನಿಜ ಬಣ್ಣ ಬಯಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಮಾತನಾಡಿ, ಬೀದರ್ ದಕ್ಷಿಣ ಕ್ಷೇತ್ರವು ನನ್ನ ಚುನಾವಣೆ ಎನ್ನುವುದಕ್ಕಿಂತ ನನ್ನ ನೆಚ್ಚಿನ ಪಕ್ಷದ ಮುಖಂಡರು ಕಾರ್ಯಾಕರ್ತರ ಅವರು ಈ ಚುನಾವಣೆಯಲ್ಲಿ ಹಗಲಿರುಳು ಕೆಲಸ ಮಾಡಿದ್ದಾರೆ.
ನಮ್ಮ ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಎಲ್ಲ ಸಮಾಜದ ಜನರು ಬೆಂಬಲಿಸಿದರೆ ಮಾತ್ರ ಗೆಲುವು ಸಾಧಿಸಬಹುದು ಈ ಬಾರಿ ಎಲ್ಲ ಸಮಾಜದ ಮತದಾರರು ನನ್ನ ಕೈ ಹಿಡಿದ ಕಾರಣ ನನ್ನ ಗೆಲುವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ನನ್ನ ಗೆಲುವಿನ ಬಳಿಕ ರೈತರಿಗಾಗಿ ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಬಿಜ ವಿತರಣೆ ಕೇಂದ್ರ ಹೆಚ್ಚಿಸಿದ್ದೇನೆ ಮತ್ತು ಬೀದರ್ ದಕ್ಷಿಣ ಕ್ಷೇತ್ರದ ಸಮಸ್ಯೆ ಇರುವ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಮೂಲ ಸೌಕರ್ಯ ಕಲ್ಪಿಸುವ ಕೆಲಸ ಮಾಡಿದ್ದೇನೆ ಮತ್ತು ದಕ್ಷಿಣ ಕ್ಷೇತ್ರದ ಪ್ರತಿಯೊಂದು ಗ್ರಾಮದ ನೀರಿನ ಟ್ಯಾಂಕರ್ ಸ್ವಚ್ಛತೆ ಅಭಿಯಾನದ ಪ್ರಾರಂಭಿಸಿದ್ದೇನೆ ಅದು ಇದೀಗ ಮೂಗಿಯುವ ಹಂತದಲ್ಲಿವೆ ಅದು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಯಾವುದೇ ಗ್ರಾಮದಲ್ಲಿ ಸಹ ಯಾವುದೇ ಸಮಸ್ಯೆ ಇದ್ದರು ತಕ್ಷಣ ಸ್ಪಂದಿಸಿ ಸೇವೆಗಾಗಿ ನಾನು ಸದಾ ಸಿದ್ಧ ಎಂದರು.
ನನ್ನ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ ನನ್ನ ಕ್ಷೇತ್ರದ ಮುಖಂಡರು ಕಾರ್ಯಕರ್ತರಿಗೆ ಧನ್ಯವಾದಗಳು ತಿಳಿಸಿದರು.
ಬಿಜೆಪಿಜಿಲ್ಲಾ ಅಧ್ಯಕ್ಷರಾದ ಶಿವಾನಂದ ಮಂಠಾಳಕರ್ ಮಾತನಾಡಿ, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ನಿಗಮ ಮಂಡಳಿ ಮೂಲಕ ಜಿಲ್ಲಾ ಆಸ್ಪತ್ರೆಗೆ 1 ಕೋಟಿ ರೂ ವೆಚ್ಚದಲ್ಲಿ ಆಮ್ಲಜನಕ ಘಟಕ ಮತ್ತು ಜಿಲ್ಲೆಯಲ್ಲಿ ಉಚಿತ ಅಂಬುಲೆನ್ಸ್ ಸೇವೆ ಮಾಡುವ ಮೂಲಕ ಈ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸುವ
ಹಗಲಿರುಳು ಜನಸೇವೆ ಮಾಡಿ ಇಂದು ಈ ಕ್ಷೇತ್ರದ ಶಾಸಕರಾಗಿದ್ದಾರೆ ಎಂದರು.
ಕಾರ್ಯಕಾರಿಣಿ ಸಭೆಯಲ್ಲಿರಾಜರೆಡ್ಡಿ ಶಾಬಾದ ಅಧ್ಯಕ್ಷತೆ ವಹಿಸಿದರು.
ಬೀದರ್ ದಕ್ಷಿಣ ಕ್ಷೇತ್ರದ ಉಸ್ತುವಾರಿ ಪೀರಪ್ಪ ಯರನನಳ್ಳಿ ಚುನಾವಣೆಯಲ್ಲಿ ಗೆಲುವಿಗಾಗಿ ಶ್ರಮಿಸಿದ ಕುರಿತು ವಿವರಣೆ ನೀಡಿದರು.ಈ ಸಂದರ್ಭದಲ್ಲಿ ಕ್ಷೇತ್ರದ ಉಸ್ತುವಾರಿ ಪೀರಪ್ಪ ಯರನನಳ್ಳಿ ಮುಖಂಡರಾದ ಸುರೇಶ ಮಾಶೆಟ್ಟಿ, ಬಾಬುರಾವ ಮಲ್ಕಾಪೂರೆ,ಶಿವರಾಜ ಪಾಟೀಲ, ಹಣಮಂತಪ್ಪ ಮೈಲಾರೆ,ಕುಶಲರಾವ ಯಾಬಾ, ಶಿವಕುಮಾರ ಸ್ವಾಮಿ, ನಾಗಭೂಷಣ ಕಮಠಾಣ,ಚಂದ್ರಶೇಖರ ಪಾಟೀಲ, ಸಂಜೀವರೆಡ್ಡಿ ಆಣದೂರ, ಜಗನ್ನಾಥ ಪಾಟೀಲ, ಹೇಮಾ ತುಂಕಾರೆಡ್ಡಿ, ಜೋಸೆಫ್ ಕೊಡ್ಡೆಕರ್, ಶಿವಕಾಂತ ಶೇಕಾಪೂರ, ವೀರಶೆಟ್ಟಿ ನಿಡವಂಚಾ,
ಚಂದ್ರಯ್ಯ ಸ್ವಾಮಿ ಚನ್ನಪ್ಪ ಗೌರಶೆಟ್ಟಿ ಪಕ್ಷದ ಮುಖಂಡರು ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು.