ಬೀದರ್ ದಕ್ಷಿಣದಲ್ಲಿ ವಿಜಯ ಸಂಕಲ್ಪ ಯಾತ್ರೆಗೆ ಭವ್ಯ ಸ್ವಾಗತ

ಬೀದರ್:ಮಾ.7: ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ ಬೀದರ್ ತಾಲ್ಲೂಕಿನ ಕಮಠಾಣ ಸಮೀಪ ನಡೆದ ಸಾರ್ವಜನಿಕ ಸಭೆಯಲ್ಲಿ ಜಾತ್ಯತೀತ ಜನತಾ ದಳದ ಅನೇಕ ಮುಖಂಡರು ಬಿಜೆಪಿಗೆ ಸೇರ್ಪಡೆಯಾದರು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಚಿವ ಬಿ.ಶ್ರೀರಾಮುಲು ಹಾಗೂ ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾಶೈಲೇಂದ್ರ ಬೆಲ್ದಾಳೆ ಅವರು ಪಕ್ಷದ ಧ್ವಜ ಕೊಟ್ಟು ಬಿಜೆಪಿಗೆ ಬರಮಾಡಿಕೊಂಡರು.

ಬಿಜೆಪಿಗೆ ಸೇರ್ಪಡೆಗೊಂಡವರಲ್ಲಿ ಮುಖಂಡರಾದ ನಾಗಭೂಷಣ ಕಮಠಾಣ, ಅಶೋಕ ಪಾಟೀಲ ಸಂಗೊಳ್ಳಿ, ಹನುಮಂತರಾಯ ಮೈಲಾರಿ ಕಪಲಾಪುರ, ವೈಜಿನಾಥ ಕಾಡವಾದೆ ಬುಧೇರಾ, ಬಸವರಾಜ ಗುರುನಾಥರಾವ್ ಕ್ಯಾಶಾ ಕಮಠಾಣ, ವೀರಶೆಟ್ಟಿ ಚಿಟಗುಪ್ಪ ಔರಾದ್ ಎಸ್, ಸಿದ್ದು ನಾಗಭೂಷಣ ಕಮಠಾಣ, ಮಲ್ಲಿಕಾರ್ಜುನ ಪೆÇಲೀಸ್ ಪಾಟೀಲ ಬರಿದಾಬಾದ್, ವಿಜಯಕುಮಾರ ಭದಬದೆ, ಶಿವಕುಮಾರ ಮಡಕಿ, ಸೂರ್ಯಕಾಂತ ಯಾಕತಪುರೆ ಯದಲಾಪುರ, ಶಿವರಾಜ ಕೊರೆ ಬುಧೇರಾ, ವಿಜಯಕುಮಾರ ಸೂಗುರ ಕಮಠಾಣ, ಬಸವಂತರಾವ್ ಅಲ್ಲಾರೆಡ್ಡಿ ಬರಿದಾಬಾದ್, ರಾಜಕುಮಾರ ಹೌದಖಾನಿ, ರಘು ಹೌದಖಾನಿ, ಶಾಂತಕುಮಾರ ಶಂಭು ಕಂಗನಕೋಟ್, ಸಂಗಪ್ಪ ಬಸಲಿಂಗಪ್ಪ ಮರ್ಜಾಪೂರ, ರಾಜಶೇಖರ ಚೊಳಕೆ ಮರ್ಜಾಪುರ, ಸಂಗ್ರಾಮಪ್ಪ ಭಂಡೆ ಮರ್ಜಾಪುರ, ಅದನಾಲ ಜಾಗೀರದಾರ್ ಮಿರ್ಜಾಪುರ, ಅನಿಲ್ ಹೌದಖಾನಿ, ವೀರಶೆಟ್ಟಿ ಹೌದಖಾನಿ, ಅಶೋಕ ಬಿರಾದಾರ, ಗುಂಡು ಹೌದಖಾನಿ ಕಮಠಾಣ, ಪ್ರಭು ಪಾಟೀಲ ಸಂಗೋಳಗಿ ಹಾಗೂ ಸುಭಾಷ ಮೆಟಗೆ ಸೇರಿದ್ದಾರೆ.

ಬೀದರ್ ದಕ್ಷಿಣದಲ್ಲಿ ಜನ ಈ ಬಾರಿ ಹೊಸ ಮುಖ ಬಯಸಿದ್ದಾರೆ. ಎಲ್ಲೆಡೆ ಬಿಜೆಪಿ ಅಲೆ ಇದೆ. ಯಾತ್ರೆ ಕಾರ್ಯಕರ್ತರಲ್ಲಿ ಇನ್ನಷ್ಟು ಉತ್ಸಾಹ ಮೂಡಿಸಿದೆ ಎಂದು ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು. ಸಚಿವ ಬಿ. ಶ್ರೀರಾಮುಲು ಅವರು, ಜನ ಬೆಲ್ದಾಳೆ ಅವರ ಕೈ ಬಲಪಡಿಸಬೇಕು ಎಂದರು.

ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಭಗವಂತ ಖೂಬಾ ಮೊದಲಾದವರು ಇದ್ದರು.

ಬೈಕ್ ರ್ಯಾಲಿಗೆ ಸ್ವಾಗತ:

ಕಮಠಾಣದಿಂದ ಆರಂಭವಾದ ಯಾತ್ರೆ ಬಗದಲ್, ಮನ್ನಾಎಖ್ಖೆಳ್ಳಿ ಮಾರ್ಗವಾಗಿ ಸಾಗಿ ಚಾಂಗಲೇರಾಗೆ ತಲುಪಿತು. ಕಾರ್ಯಕರ್ತರು ಬೈಕ್ ರ್ಯಾಲಿಗೆ , ಬ್ಯಾಂಡ್ ಬಾಜಾ, ರಥಕ್ಕೆ ಪೂಜೆ, ಪುಷ್ಪವೃಷ್ಟಿ ಮಾಡುವ ಮೂಲಕ ಯಾತ್ರೆಗೆ ಸ್ವಾಗತ ನೀಡಿದರು.