ಬೀದರ್ ತುರ್ತು ಸೇವೆ ನೀಡಲು ಹೆಸರಾದ ವಾಲಿಶ್ರೀ ಆಸ್ಪತ್ರೆ: ಬಾಲಕನ ಮೋಳಕೈ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು

ಬೀದರ ಜು. 21:ಬೀದರ್ ಜಿಲ್ಲೆಯಲ್ಲಿಯೇ ಅತಿ ತುರ್ತು ಸೇವೆ ನೀಡುವಲ್ಲಿ ಹೆಸರಾದ ವಾಲೀಶ್ರೀ ಆಸ್ಪತ್ರೆಯ ವೈದ್ಯರು ಈಗ ಮತ್ತೊಂದು ಸೇವೆ ನೀಡಿದ್ದು ಯಾವ ಆಸ್ಪತ್ರೆಯ ವೈದ್ಯರು ಕೈ ಹಿಡಿಯದ ಚಿಕ್ಕ ಬಾಲಕನ ಶಸ್ತ್ರ ಚಿಕಿತ್ಸೆ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.
7 ವರ್ಷದ ಅರ್ಮಾನ್ ಎಂಬ ಬಾಲಕ ಆಟ ಆಡಲು ಹೋಗಿ ಕಾಲು ಜಾರಿ ಬಿದ್ದು ತನ್ನ ಬಲಗೈ ಮೋಳ ಕೈ ಎಲುಬು ಮತ್ತು (ಶುದ್ದ ರಕ್ತ ನಾಳ) ರಕ್ತ ಹರಿದು ಹೊರಗೆ ಬಂದಿದ್ದು ಹೆಚ್ಚಿನ ರಕ್ತಸ್ರಾವ ಆಗಿತ್ತು. ಆ ಬಾಲಕನನ್ನು ಎಲ್ಲ ಆಸ್ಪತ್ರೆಗೆ ಹೋಗಿ ವಿಚಾರಸಿದರು ಎಲ್ಲ ಆಸ್ಪತ್ರೆಯವರು ಬಾಲಕನ ಚಿಕಿತ್ಸೆಗಾಗಿ ಹೈದ್ರಾಬಾದ್‍ಗೆ ಹೋಗಿ ಎಂದು ಬರೆದುಕೊಟ್ಟರು.
ಅಂತಿಮವಾಗಿ ವಾಲಿಶ್ರೀ ಆಸ್ಪತ್ರೆಗೆ ಬಂದ ಕುಟುಂಬಸ್ಥರು ಶಸ್ತ್ರ ಚಿಕಿತ್ಸೆಗೆ ರೆಡಿಯಾದರು ಆಸ್ಪತ್ರೆಯ ಹಿರಿಯ ಮೂಳೆ ರೋಗ ತಜ್ಞರಾದ ಡಾ. ರಾಜಶೇಖರ ಸೇಡಂಕರ್, ಕಲ್ಯಾಣ ಕರ್ನಾಟಕ ಪ್ರದೇಶದ ಹಿರಿಯ ಹೃದಯರೋಗ ತಜ್ಞರು ಹಾಗೂ ವ್ಯಾಸ್‍ಕುಲರ್ (ಕಾರ್ಡಿಯೋ ಥೋರೋಸಿಕ್ ವ್ಯಾಸಕುಲರ್, ಲೇಸರ್ ಐಂಡ್ ಲಂಗ್) ತಜ್ಞರಾದ ಡಾ. ಅರುಣಕುಮಾರ ಹರಿದಾಸ ನೇತೃತ್ವದಲ್ಲಿ ಸುಮಾರು 6 ಗಂಟೆಗಳ ಕಾಲ ಶಸ ಚಿಕಿತ್ಸೆ ನಡೆಯಿತು. ಶಸ್ತ್ರ ಚಿಕಿತ್ಸೆ ಒಳ್ಳೆಯ ರೀತಿಯಿಂದ ಯಶಸ್ವಿಯಾಗಿ ರೋಗಿಯ ರಕ್ತನಾಳ ಹಿಂದಿನಂತೆ ಸಾಮಾನ್ಯವಾಗಿ ಕೆಲಸ ಮಾಡುತ್ತಿದೆ.
ಚಿಕ್ಕ ಬಾಲಕ ಅರ್ಮಾನ ಅವರ ಕುಟುಂಬಸ್ಥರು ವಾಲಿಶ್ರೀ ಆಸ್ಪತ್ರೆಯ ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿಯೇ ವಾಲಿಶ್ರೀ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ 24/7 ಸೇವೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಕÁ್ಯಥ್‍ಲಾಬ್ ಸೇವೆಗೆ ಒಂದು ವರ್ಷ:
ವಾಲಿಶ್ರೀ ಆಸ್ಪತ್ರೆಯಲ್ಲಿ ಕ್ಯಾಥ್‍ಲಾಬ್ ಸೇವೆ ಆರಂಭಗೊಂಡು ಜುಲೈ 21ಕ್ಕೆ ಒಂದು ವರ್ಷವಾಗುತ್ತಿದೆ ಆಸ್ಪತ್ರೆಯಿಂದ ಇಲ್ಲಿಯವರೆಗೆ 150ಕ್ಕೂ ಹೆಚ್ಚು ಹೃದಯ ಸಂಬಂದಿ
ಶಸ್ತ್ರ ಚಿಕಿತ್ಸೆಗಳನ್ನು ಮಾಡಲಾಗಿದೆ.
ಒಂದು ವರ್ಷದ ಅವದಿಯಲ್ಲಿ 100 ಜನ ಬಿಪಿಎಲ್ ಚೀಟಿದಾರರಿಗೆ ಆಯುಷ್ಮಾನ ಭಾರತ ಯೋಜನೆಯಡಿಯಲ್ಲಿ ಉಚಿತ ಸೇವೆ ನೀಡಿದ್ದೇವೆ ಎಂದು ಆಸ್ಪತ್ರೆಯ ಮೂಳೆ ತಜ್ಞ ಡಾ. ರಾಜಶೇಖರ ಸೇಡಂಕರ್ ತಿಳಿಸಿದರು.
ಇದಲ್ಲದೇ ಹೃದಯಯದ ರಕ್ತನಾಳಕ್ಕೆ ಸ್ಟಂಟ್ ಹಾಕಲಾಗುತ್ತಿದೆ. ಇದೇಲ್ಲವು ಸರ್ಕಾರ ನಿಗ„ಪಡಿಸಿದ ದರದಲ್ಲಿಯೇ ಮಾಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಇನ್ನು ಲೆಸರ್ ಸರ್ಜರಿ ಮೂಲಕ ಪೈಲ್ಸ್ ರೋಗಕ್ಕೂ ಚಿಕಿತ್ಸೆ ನೀಡಲಾಗುತ್ತಿದೆ.
ಹೀಗೆ ವಿವಿಧ ರೀತಿಯ ಎಲ್ಲ ರೋಗಗಳಿಗೆ ಚಿಕಿತ್ಸೆ ನೀಡಲು ವಾಲಿಶ್ರೀ ಆಸ್ಪತ್ರೆ ಸನ್ನದ್ದವಾಗಿದೆ ಎಂದರೆ ತಪ್ಪಾಗಲಾರದು ಎಂದು ಡಾ. ಸೇಡಂಕರ್ ತಿಳಿಸಿದ್ದಾರೆ.