
ಬೀದರ್: ಆ.10:ಸ್ವಾತಂತ್ರ್ಯೊತ್ಸವದ ಅಮೃತ ಮಹೋತ್ಸವದ ಅಂಗವಾಗಿ ನಿರ್ಮಿಸಲಾದ ಅಮೃತ ಸರೋವರದ ಬಳಿ ಈ ಬಾರಿಯ 76 ಸ್ವಾತಂತ್ರ ದಿನಾಚರಣೆ ಆಚರಿಸಲಾಗುವುದು ಎಂದು ನರೇಗಾ ಯೋಜನೆಯ ಸಹಾಯಕ ನಿರ್ದೇಶಕಿ ಲಕ್ಷ್ಮೀ ಬಿರಾದಾರಾ ಹೇಳಿದರು.
ಅವರು ಬುಧವಾರ ಅಮೃತ ಸರೋವರ ಯೋಜನೆಯಡಿ ಜನವಾಡ ಬಳಿ ನಿರ್ಮಿಸಲಾದ ಅಮೃತ ಸರೋವರದ ದಡದಲ್ಲಿ
ವಸುಧ ವಂಧನ ಕಾರ್ಯಕ್ರಮದಡಿ 75.ದು ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಲ್ಲೂಕಿನ ಪಂಚಾಯತ ಬೀದರ ವತಿಯಿಂದ ಏಳು ಅಮೃತ ಸರೋವರದ ದಡದಲ್ಲಿ ದ್ವಜಾರೊಹಣ ಕಾರ್ಯಕ್ರಮ ಹಂಮೀಕೊಳ್ಳಲಾಗಿದೆ. ಇದರ ಅಂಗವಾಗಿ ಇಂದು ಸಸಿ ನೆಡುವ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.
ಜೊತೆಗೆ ತಿರಂಗಾ ಯಾತ್ರೆ, ಸ್ವಚ್ಚತ್ತಾ ಪ್ರತಿಜ್ಞೆ, ಮಕ್ಕಳಿಗಾಗಿ ಸ್ಪರ್ಧೆಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಿಆರೆಫೆÇ ರಾಗೇಂದ್ರನಾಥ ಸಿಂಗೋಡೆ, ತಾಲೂಕ್ ಪಂಚಾಯತ್ ಸದಸ್ಯರಾದ ರವೀಂದ್ರ ಭಂಗೆ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ಸವಿತಾ ಹಿರೆಮಠ್, ಐಇಸಿ ಸಂಯೋಜಕ ಸತ್ಯಜಿತ್ ನಿಡೊದಕರ್, ಸೇರಿದಂತೆ ಗ್ರಾಮ ಪಂಚಾಯತ ಸಿಬ್ಬಂದಿಗಳು ಉಪಸ್ಥಿತರಿದ್ದರು..