ಬೀದರ್ ಡೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಬೀದರ್:ನ.2: ತಾಲ್ಲೂಕಿನ ಚಿಕ್ಕಪೇಟೆ ಸಮೀಪದ ಬೀದರ್ ಡೇರಿಯಲ್ಲಿ ಮಂಗಳವಾರ 67ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಲಬುರಗಿ- ಬೀದರ್- ಯಾದಗಿರಿ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಮಲ್ಲಿಕಾರ್ಜುನ ಬಿರಾದಾರ ಧ್ವಜಾರೋಹಣ ಮಾಡಿದರು. ಒಕ್ಕೂಟದ ನಿರ್ದೇಶಕರಾದ ಭೀಮರಾವ್ ಬಳತೆ, ಶ್ರೀಕಾಂತ ದಾನಿ, ಬಂಡುರಾವ್ ಕುಲಕರ್ಣಿ, ಸಹಾಯಕ ಮಾರುಕಟ್ಟೆ ವ್ಯವಸ್ಥಾಪಕ ಶಾಲಿವಾನ್ ವಾಡೆ, ಸಹಾಯಕ ವ್ಯವಸ್ಥಾಪಕಿ ಮೀನಾಕುಮಾರಿ, ಡೇರಿ ಮೇಲ್ವಿಚಾರಕ ಸೂರ್ಯಕಾಂತ ಇದ್ದರು.