ಬೀದರ್ ಜಿಲ್ಲೆ ಸಹಕಾರದ ಕಾಶಿ: ಉಮಾಕಾಂತ ನಾಗಮಾರಪಳ್ಳಿ

ಬೀದರ್:ನ.21: ಬೀದರ್ ಜಿಲ್ಲೆ ಸಹಕಾರ ಕ್ಷೇತ್ರದ ಕಾಶಿ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳದ ನಿರ್ದೇಶಕರು ಹಾಗೂ ಜಿಲ್ಲಾ ಸಹಕಾರ ಕೇಂದ್ರ(ಡಿ.ಸಿ.ಸಿ) ಬ್ಯಾಂಕ್‍ನ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ತಿಳಿಸಿದರು.

ಸಹಕಾರ ಸಪ್ತಾಹದ ಸಮಾರೋಪ ಸಮಾರಂಭ ಹಾಗೂ ಕರ್ನಾಟಕ ಸರ್ಕಾರದಿಂದ ಈ ವರ್ಷ ಸಹಕಾರ ರತ್ನ ಪ್ರಶಸ್ತಿ ಪುರಸ್ಕøತರಾದ ಸೂರ್ಯಕಾಮತ ನಾಗಮಾರಪಳ್ಳಿ ಅವರಿಗಾಗಿ ಆಯೋಜಿಸಿದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಹಕಾರ ತತ್ವದಡಿ ಡಿ.ಸಿ.ಸಿ ಬ್ಯಾಂಕ್ ಅಡಿಯಲ್ಲಿ 188 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು 8 ಲಕ್ಷ ರೈತರಿಗೆ ಶುನ್ಯ ಬಡ್ಡಿ ದರದಲ್ಲಿ 150 ಕೋಟಿ ವರೆಗೆ ಸಾಲ ನೀಡುವ ಗುರಿ ಹೊಂದಲಾಗಿದೆ. ಸಾಲ ನೀಡುವುದು ರೈತರನ್ನು ಸಾಲಗಾರನ್ನಾಗಿ ಮಾಡದೇ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಗುರಿ ಹೊಂದಲಾಗಿದೆ ಎಂದರು.

ಹಿಂದೆ ಸಿದ್ಧರಾಮಯ್ಯ ಹಾಗೂ ಹೆಚ್.ಡಿ ಕುಮಾರ ಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ನಮ್ಮ ಬ್ಯಾಂಕ್ ಮೂಲಕ 1 ಸಾವಿರ 25 ಕೋಟಿ ಸಾಲ ಮನ್ನಾ ಮಾಡಲಾಗಿದೆ. 2015ರಿಂದ ಇಲ್ಲಿ ವರೆಗೆ ದೇಶಕ್ಕೆ ಮಾದರಿಯಾಗುವಂತೆ ಜಿಲ್ಲೆ ರೈತರ ಹೆಸರಲ್ಲಿ 12 ಕೋಟಿ ರೂಪಾಯಿ ಫಸಲು ವಿಮಾ ಯೋಜನೆ ಅಡಿ ಬೆಳೆ ವಿಮೆ ಕಟ್ಟಿ 150 ಕೋಟಿ ರೂಪಾಯಿ ಪರಿಹಾರ ನೀಡುವಲ್ಲಿ ಡಿ.ಸಿ.ಸಿ ಬ್ಯಾಂಕ್ ಕಾರಣವಾಗಿದೆ ಎಂದರು.

ಸಹಕಾರ ಇಲಾಖೆ ಆರಂಭವಾಗಿ 117 ವರ್ಷಗಳು ಗತಿಸಿವೆ. 20 ಸಾವಿರದಿಂದ ಆರಂಭವಾದ ಡಿ.ಸಿ.ಸಿ ಬ್ಯಾಂಕ್ ಇಂದು 4,100 ಕೋಟಿ ಬಂಡವಾಲ ಹೊಂದುವ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದೆ. 188 ಪಿ.ಕೆ.ಪಿ.ಎಸ್‍ಗಳ ಪೈಕಿ 178 ಪಿ.ಕೆ.ಪಿ.ಎಸ್‍ಗಳು ಈಗಾಗಲೇ ಗಣಕಿಕೃತಗೊಳ್ಳುವ ಮೂಲಕ ದೇಶಕ್ಕೆ ಮಾದರಿ ಕಾರ್ಯವಾಗಿದೆ. ಜಗತ್ತಿನ 82 ದೇಶಕ್ಕೂ ಅಧಿಕ ರಾಷ್ಟ್ರಗಳ ಜನಪ್ರತಿನಿಧಿಗಳು ನಮ್ಮ ಸಹಾರ್ದಾ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದಿರುತ್ತಾರೆ. 15 ಸಾವಿರ ಯುವ ಯುವತಿಯರು ಸ್ವಯಂ ಉದ್ಯೋಗಕ್ಕಾಗಿ ತರಬೇತಿ ಪಡೆದಿರುತ್ತಾರೆ. ಒಟ್ಟಾರೆ ಇಡೀ ಜಿಲ್ಲೆಯನ್ನು ಸಹಕಾರಮಯವನ್ನಾಗಿಸಲು ನಮ್ಮ ಬ್ಯಾಂಕ್‍ನ ಹಾಗೂ ಸಹಕಾರ ಯುನಿಯನ್ ಸಿಬ್ಬಂದಿಗಳ ಪರಿಶ್ರಮಕ್ಕೆ ಋಣಿಯಾಗಿರುವೆ ಎಂದವರು ಹೇಳಿದರು.

ಬೀದರ್ ಜಿಲ್ಲೆ ಸಹಕಾರ ಜಿಲ್ಲೆ:- ಸೂರ್ಯಕಾಂತ ನಾಗಮಾರಪಳ್ಳಿ:- ಸನ್ಮಾನ ಸ್ವೀಕರಿಸಿ ಮಾತನಾಡಿದ ಸಹಕಾರ ರತ್ನ ಪ್ರಶಸ್ತಿ ಪುರಸ್ಕøತರು ಹಾಗೂ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪಷಾಲಿಟಿ ಸಹಕಾರ ಆಸ್ಪತ್ರೆಯ ಅಧ್ಯಕ್ಷರಾದ ಸೂರ್ಯಕಾಂತ ನಾಗಮಾರಪಳ್ಳಿ ಅವರು, ಕೋವಿಡ್ ಕಾಲದಲ್ಲಿ ಶವ ಸಂಸ್ಕಾರಕ್ಕೆ ಹಿಂದೇಟು ಹಾಕುತ್ತಿದ್ದ ಜಿಲ್ಲೆಯ ಸುಮಾರು 82 ಶವಗಳನ್ನು ನಮ್ಮ ನಾಗಮಾರಪಳ್ಳಿ ಫೌಂಡೆಶನ್ ವತಿಯಿಂದ ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಅವರವರ ಧರ್ಮದ ಅನುಸಾರ ಶವ ಸಂಸ್ಕಾರ ಮಾಡಲಾಯಿತು. 1 ರೂಪಾಯಿಯಲ್ಲಿ ಕೋವಿಡ್ ಚಿಕಿತ್ಸೆ ನೀಡುವ ಮೂಲಕ ನಮ್ಮ ಆಸ್ಪತ್ರೆ ಇಡೀ ದೇಶದಲ್ಲಿ ಚೊಚ್ಚಲ ಕೋವಿಡ್ ಚಿಕಿತ್ಸಾ ಆಸ್ಪತ್ರೆಗೆ ಭಾಜನವಾಯಿತು. ನಮ್ಮ ಆಸ್ಪತ್ರೆಯಲ್ಲಿ ಬಡವರಿಗಾಗಿ ಕೇವಲ 3500 ರೂಪಾಯಿಯಲ್ಲಿ ಎಮ್.ಆರ್.ಐ ಸ್ಕ್ಯಾನಿಂಗ್ ಮಾಡಲಾಗುತ್ತಿದೆ. ಇಡೀ ಬೀದರ್ ತಾಲೂಕಿನ ಎಲ್ಲ ಕುಟುಂಬಗಳಿಗೆ ಆಯುಷ್ಮಾನ ಕಾರ್ಡ್, ಈ ಶ್ರಮ್ ಕಾರ್ಡ್ ಮಾಡಿ ಕೊಡಲಾಗುತ್ತಿದೆ. ಒಟ್ಟಾರೆ ಬೀದರ್ ನಗರದಲ್ಲಿ ವಾಸಿಸುವ ತಾವೆಲ್ಲರು ಇಲ್ಲಿಯ ಮತದಾರ ಗುರುತಿನ ಚೀಟಿ ಮಾಡಿಕೊಂಡು ಈ ಎರಡು ಪ್ರಮುಖ ಯೋಜನೆಗಳ ಸದುಪಯೋಗ ಪಡೆಯಲು ಮುಂದೆ ಬರುವಂತೆ ತಿಳಿಸಿದರು.

ವಿಶೇಷ ಸನ್ಮಾನಿತರಾದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಮಾತನಾಡಿ, ಡಾ.ಗುಇರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ುಚಿತ ಚಿಕಿತ್ಸೆಗಾಗಿ ಹಾಗೂ 50 ಪ್ರತಿಶತ ರಿಯಾಯತಿ ದರದಲ್ಲಿ ಸ್ಕ್ಯಾನಿಂಗ್‍ಗಾಗಿ ಆರೋಗ್ಯ ಕಾರ್ಡ್ ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದ ಅವರು, ಮುಂಬರುವ ದಿನಗಳಲ್ಲಿ ಸಹಾರ್ದಾ ಡಿ.ಸಿ.ಸಿ ಬ್ಯಾಂಕ್ ವತಿಯಿಂದ ಜಿಲ್ಲೆಯ ಮಾದ್ಯಮ ಪ್ರತಿನಿಧಿಗಳಿಗೆ ಮಾದ್ಯಮ ಅಕಾಡೆಮಿ ಸಹಕಾರ ಪಡೆದು ತರಬೇತಿ ನೀಡಬೇಕು ಎಂದರು.

ಇದೇ ವೇಳೆ ಪತ್ರಕರ್ತ ಓಂಕಾರ ಮಠಪತಿ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು.

ವಿಧಾನ ಪರಿಷತ್ ಸದಸ್ಯರಾದ ಭೀಮರಾವ ಪಾಟೀಲ, ಡಿ.ಸಿ.ಸಿ ಬ್ಯಾಂಕ್ ನಿದೇಶಕರಾದ ಎಮ್.ಡಿ ಸಲೊಮೋದ್ದಿನ್, ಬಸವರಾಜ ಹೆಬ್ಬಾಳೆ, ಮುಖ್ಯ ಕಾರ್ಯುನಿರ್ವಹಣಾಧಿಕಾರಿ ಮಹಾಜನ್ ಮಲ್ಲಿಕಾರ್ಜುನ್, ಸಹಕಾರ ಇಲಾಖೆಯ ಉಪ ನಿಭಂದಕ ಮೋಹನ್ ರಾಠೋಡ್ ಹಾಗೂ ಇತರರು ವೇದಿಕೆಯಲ್ಲಿದ್ದರು. ಜಿಲ್ಲಾ ಸಹಕಾರ ಯುನಿಯನ್‍ನ ಅಧ್ಯಕ್ಷ ಪರಮೇಶ್ವರ ಮುಗಟೆ ಅಧ್ಯಕ್ಷತೆ ವಹಿಸಿದ್ದರು.

ಆರಂಭದಲ್ಲಿ ಕಲಾವಿದರಾದ ಸಂಜೀವಕುಮಾರ ಉಜನಿ ಹಾಗೂ ತಂಡದವರು ಸಂಗೀತ ಕಾರ್ಯಕ್ರಮ ನಡೆಸಿ ಕೊಟ್ಟರು. ಡಿ.ಸಿ.ಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಚನ್ನಬಸಯ್ಯ ಸ್ವಾಮಿ ಸ್ವಾಗತಿಸಿದರು. ಸಹಕಾರ ಯುನಿಯನ್‍ನ ಶ್ರೀಧರ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿ, ಸಹಕಾರ ಯುನಿಯನ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಆರ್ ಮಲ್ಲಮ್ಮ ವಂದಿಸಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ, ಬೀದರ್ ಜಿಲ್ಲಾ ಸಹಕಾರ ಯುನಿಯನ್, ಬೀದರ್ ಜಿಲ್ಲಾ ಸಹಕಾರ ಕೇಂದ್ರ(ಡಿ.ಸಿ.ಸಿ) ಬ್ಯಾಂಕ್, ಶಾರದಾ ರುಡ್‍ಸೆಟ್ ಸಂಸ್ಥೆ, ಸಹಾರ್ದಾ ತರಬೇತಿ ಸಂಸ್ಥೆ ಹಾಗೂ ಸಹಕಾರ ಇಲಾಖೆಗಳ ಸಹಯೋಗದಲ್ಲಿ ಕಾರ್ಯಕ್ರಮ ಜರುಗಿತು.