ಬೀದರ್ ಜಿಲ್ಲೆಯ ಮುಖಂಡರು ರೈತರ ಸಮಸ್ಯೆ ಬಗೆಹರಿಸದೆ ಕೇವಲ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾರೆ: ರೈತರ ಆಕ್ರೋಶ

ಭಾಲ್ಕಿ:ಡಿ.4:ಇಂದು ತಾಲೂಕಿನ ಜಮಖಂಡಿ ಗ್ರಾಮದ ರೈತರು ಹಾಗೂ ಸುತ್ತಮುತ್ತಲಿನ ಗ್ರಾಮಗಳಾದ ವಾಂಜರಖೇಡ್ , ಕೊಂಗಳಿ , ಗ್ರಾಮದ ನೂರಕ್ಕೂ ಹೆಚ್ಚು ಜನ ರೈತರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ನಿನ್ನೆ ರಾತ್ರಿ ಮಹಾರಾಷ್ಟ್ರದ ತೇರಿನ ನದಿಯಿಂದ ನೀರು ಹರಿದು ಮಾಹಿತಿ ಇದ್ದು ಬ್ರೀಜ್ ಕಂ ಬ್ಯಾರೇಜ್ ನ ಗೇಟ್ ತೆಗೆಯದ ಕಾರಣ ಸುಮಾರು 500ಕ್ಕೂ ಹೆಚ್ಚು ಎಕರೆ ಜಮೀನು ನೀರಿನಿಂದ ಆವರಿಸಿಕೊಂಡಿದೆ ಇದರಿಂದ ಹಿಂಗಾರು ಬೆಳೆಗಳಾದ ಕಡಲೆ ಮತ್ತು ಜೋಳ ಬೆಳೆಗಳು ಸಂಪೂರ್ಣ ನಾಶವಾಗಿವೆ. ಮುಂಗಾರು ಮಳೆಯಿಂದ ಅನೇಕ ಅಪಾರ ಬೆಳೆ ಹಾನಿ ನಷ್ಟವಾಗಿತ್ತು ತಾಲೂಕಿನ ಯಾವುದೇ ರೈತರಿಗೆ ಇನ್ನೂ ನಯಾಪೈಸೆ ಮುಟ್ಟಿಲ್ಲ ರೈತರ ಬಗ್ಗೆ ಕಾಳಜಿ ಇಲ್ಲದ ಸರ್ಕಾರ ಬರೀ ಚುನಾವಣೆಗೆ ತನ್ನ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಶಾಸಕರು ರೈತರ ಪರವಾಗಿ ನಿಂತು ರೈತರ ಸಮಸ್ಯೆಯನ್ನು ಬಗೆಹರಿಸಬೇಕೆಂದು ಅನೇಕ ರೈತರು ತನ್ನ ಅಳಲನ್ನು ತೋಡಿಕೊಂಡರು.
” ಸರ್ಕಾರವು ಬಸವಕಲ್ಯಾಣ ಹಾಗೂ ಹುಲಸೂರು ತಾಲೂಕಿಗೆ ನೀರಿನ ಪೂರೈಕೆ ಆಗಬೇಕೆಂದು ಬ್ರೀಜ್ ಕಂ ಬ್ಯಾರೇಜ್ ಕಟ್ಟಲಾಗಿತ್ತು ಆದರೆ
ಸುತ್ತಮುತ್ತಲಿನ ಗ್ರಾಮಗಳಲ್ಲಿನ ರೈತರ ಜಮೀನುಗಳು ನೀರಿನಲ್ಲಿ ಮುಳುಗಿದ್ದುಇನ್ನು ಜಮೀನಿನ ಹಣ ಸಂದಾಯವಾಗಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.”
” ಸರ್ಕಾರ ರೈತರ ಸಮಸ್ಯೆಗೆ ಮುಂದೆ ಬರಬೇಕಾಗಿದೆ ಮುಂಗಾರು ಬೆಳೆ ನೀರಿನಿಂದ ಹರಿದರೆ ಹಿಂಗಾರು ಬೆಳೆಯ ಮೇಲೆ ಅವಲಂಬಿಸಿದ ರೈತರು ಬೆಳೆಯುವ ಕೂಡ ಈಗ ಅತಿ ಹೆಚ್ಚು ನೀರು ಬಂದು ಸಂಪೂರ್ಣ ನೀರಿಂದ ಹರಿದು ಹೋಗಿದೆ ಎಂದು ರೈತ ಪ್ರಶಾಂತ್ ಬಿರಾದಾರ್ ಹೇಳಿದರು”
” ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು, ಹಾಗೂ ಬೀದರ್ ಜಿಲ್ಲೆಯ ನಾಯಕರು, ತಾಲೂಕಿನ ಶಾಸಕರು, ರಾಜಕೀಯ ಮುಖಂಡರು, ತಾಲ್ಲೂಕಿನ ತಹಸೀಲ್ದಾರರು,ತಕ್ಷಣ ಬಂದು ರೈತರ ಸಮಸ್ಯೆಯನ್ನು ಬಗೆಹರಿಸಬೇಕು ಇಲ್ಲದಿದ್ದರೆ ಧರಣಿ, ಹೋರಾಟ ಮಾಡಲಾಗುವುದು ಎಂದು ಗಣೇಶ ಡಾವ ರಗಾವೆ ಹೇಳಿದರು”
“ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಏಕನಾಥ ಕಾರಬಾರಿ, ನರಸಿಂಗ ತಂಬುಳಿ, ಪ್ರಶಾಂತ್ ಬಿರಾದಾರ್, ಸಂಭಾಜಿ ಬಿರಾದರ್, ಸತ್ಯವಾನ್ ಜಾದವ್, ನೇತಾಜಿ ತೊಡೆ, ಮಾರುತಿ ಜಾದವ್, ಸಂದೀಪ್ ದೇವನೇ, ಅಣ್ಣಾರಾವ್ ಮೋರೆ, ಮಲ್ಲಪ್ಪ ದೇಶಮುಖ್, ಈರಪ್ಪ ಚೂರೇ, ದಯಾನಂದ ದವರ್ಗಾವ್, ಪಂಡರಿ ಬಿರಾದರ್, ಹಾಗೂ ಹಲವಾರು ಜನ ರೈತರು ಹಾಜರಿದ್ದರು.