ಬೀದರ್ ಜಿಲ್ಲೆಯಲ್ಲಿ 49 ಮನೆಗಳು ಕುಸಿತ

ಬೀದರ್:ಜು.12: ಜಿಲ್ಲೆಯಲ್ಲಿ 24 ಗಂಟೆಗಳ ಅವಧಿಯಲ್ಲಿ ಸರಾಸರಿ 15.24 ಮಿ.ಮೀ ಮಳೆಯಾಗಿದೆ. ಜಿಲ್ಲೆಯ 30 ಹೋಬಳಿಗಳ ಪೈಕಿ ಔರಾದ್ ಹೋಬಳಿಯಲ್ಲಿ ಗರಿಷ್ಠ 43 ಮಿ.ಮೀ ಮಳೆ ದಾಖಲಾಗಿದೆ. ಬಸವಕಲ್ಯಾಣ ತಾಲ್ಲೂಕಿನಲ್ಲಿ ಕನಿಷ್ಠ 2 ಮಿ.ಮೀ ಮಳೆಯಾಗಿದೆ.

ಜಿಲ್ಲೆಯಲ್ಲಿ ಒಟ್ಟು 49 ಮನೆಗಳ ಗೋಡೆಗಳು ಬಿದ್ದಿವೆ.

ಬಸವಕಲ್ಯಾಣ ತಾಲ್ಲೂಕಿನಲ್ಲಿ 20, ಔರಾದ್ ತಾಲ್ಲೂಕಿನಲ್ಲಿ 12, ಕಮಲನಗರದಲ್ಲಿ 7, ಬೀದರ್, ಭಾಲ್ಕಿಯಲ್ಲಿ ತಲಾ ನಾಲ್ಕು ಹಾಗೂ ಹುಲಸೂರಿನಲ್ಲಿ 2 ಮನೆಗಳ ಗೋಡೆಗಳು ಕುಸಿದಿವೆ.

ಬೀದರ್ ತಾಲ್ಲೂಕಿನ ಚಿಮಕೋಡದ ಮಲ್ಲಮ್ಮ ಧೂಳಪ್ಪ, ದದ್ದಾಪುರದ ಕ್ರಿಸ್ತಕುಮಾರಿ ಮೋಹನ, ಓಡವಾಡದ ನಾಗಿನಿ ಜಾನ್ಸನ್ ಮತ್ತು ಶಹಾಪುರದ ಮಹಾದೇವಿ ಅವರ ಮನೆ ಗೋಡೆಗಳು ಕುಸಿದಿವೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಔರಾದ್ ತಾಲ್ಲೂಕಿನಲ್ಲಿ 28 ಮಿ.ಮೀ, ಬೀದರ್ ತಾಲ್ಲೂಕಿನಲ್ಲಿ ಸರಾಸರಿ 18.68 ಮಿ.ಮೀ, ಭಾಲ್ಕಿ ತಾಲ್ಲೂಕಿನಲ್ಲಿ 20.73 ಮಿ.ಮೀ, ಬಸವಕಲ್ಯಾಣ ತಾಲ್ಲೂಕಿನಲ್ಲಿ 4.74 ಮಿ.ಮೀ, ಹುಮನಾಬಾದ್ ತಾಲ್ಲೂಕಿನಲ್ಲಿ 2.57 ಮಿ.ಮೀ. ಚಿಟಗುಪ್ಪ ತಾಲ್ಲೂಕಿನಲ್ಲಿ 7.93 ಮಿ.ಮೀ, ಕಮಲನಗರದಲ್ಲಿ 25.29 ಮಿ.ಮೀ ಹಾಗೂ ಹುಲಸೂರಿನಲ್ಲಿ 4.20 ಮಿ.ಮೀ ಮಳೆಯಾಗಿದೆ.

ಔರಾದ್‍ನಲ್ಲಿ 43 ಮಿ.ಮೀ, ಚಿಂತಾಕಿಯಲ್ಲಿ 14 ಮಿ.ಮೀ, ಸಂತಪುರದಲ್ಲಿ 27 ಮಿ.ಮೀ, ಬೀದರ್ ನಗರದಲ್ಲಿ 12.20ಮಿ.ಮೀ, ಬಗದಲ್‍ನಲ್ಲಿ 23.60 ಮಿ.ಮೀ, ಬೀದರ್ ದಕ್ಷಿಣದಲ್ಲಿ 13.20 ಮಿ.ಮೀ, ಜನವಾಡದಲ್ಲಿ 25.90 ಮಿ.ಮೀ, ಕಮಠಾಣದಲ್ಲಿ 27.80 ಮಿ.ಮೀ, ಮನ್ನಳ್ಳಿಯಲ್ಲಿ 9.40 ಮಿ.ಮೀ, ಭಾಲ್ಕಿ ಪಟ್ಟಣದಲ್ಲಿ 15.20 ಮಿ.ಮೀ, ಹಲಬರ್ಗಾದಲ್ಲಿ 22.20 ಮಿ.ಮೀ, ಖಟಕಚಿಂಚೋಳಿಯಲ್ಲಿ 5 ಮಿ.ಮೀ, ಲಖನಗಾಂವದಲ್ಲಿ 32.20 ಮಿ.ಮೀ, ನಿಟ್ಟೂರ(ಬಿ)ದಲ್ಲಿ 30.80 ಮಿ.ಮೀ, ಸಾಯಿಗಾಂವದಲ್ಲಿ 19 ಮಿ.ಮೀ ಮಳೆ ಸುರಿದಿದೆ.

ಬಸವಕಲ್ಯಾಣ ನಗರದಲ್ಲಿ 7.20 ಮಿ.ಮೀ, ಕೊಹಿನೂರಲ್ಲಿ 2.30 ಮಿ.ಮೀ, ಮಂಠಾಳದಲ್ಲಿ 3 ಮಿ.ಮೀ, ಮುಡಬಿಯಲ್ಲಿ 2 ಮಿ.ಮೀ, ರಾಜೇಶ್ವರದಲ್ಲಿ 9.20 ಮಿ.ಮೀ, ಹುಮನಾಬಾದ್ ಪಟ್ಟಣದಲ್ಲಿ 4.50 ಮಿ.ಮೀ, ದುಬಲಗುಂಡಿಯಲ್ಲಿ ಪ್ರದೇಶದಲ್ಲಿ ಮಳೆಯಾಗಿಲ್ಲ, ಹಳ್ಳಿಖೇಡ(ಬಿ)ದಲ್ಲಿ 3.20 ಮಿ.ಮೀ, ಚಿಟಗುಪ್ಪ ಪಟ್ಟಣದಲ್ಲಿ 8 ಮಿ.ಮೀ, ಬೇಮಳಖೇಡದಲ್ಲಿ 6.40 ಮಿ.ಮೀ, ನಿರ್ಣಾದಲ್ಲಿ 9.40 ಮಿ.ಮೀ, ಕಮಲನಗರದಲ್ಲಿ 28.60 ಮಿ.ಮೀ, ದಾಬಕಾದಲ್ಲಿ 16.30 ಮಿ.ಮೀ, ಠಾಣಾಕುಶನೂರಿನಲ್ಲಿ 33 ಮಿ.ಮೀ ಹಾಗೂ ಹುಲಸೂರಿನಲ್ಲಿ 4.20 ಮಿ.ಮೀ ಮಳೆಯಾಗಿದೆ.

ಹವಾಮಾನ ಇಲಾಖೆ ಸೋಮವಾರ ಭಾರಿ ಮಳೆ ಬೀಳುವ ಮುನ್ಸೂನೆ ನೀಡಿತ್ತು. ಹೀಗಾಗಿ ಜಿಲ್ಲಾಡಳಿತ ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಹಾಗೂ ಕಾಲೇಜಿಗಳಿಗೆ ರಜೆ ಘೋಷಿಸಿತ್ತು. ಆದರೆ, ಮಧ್ಯಾಹ್ನದ ವರೆಗೆ ಜಿಲ್ಲೆಯಲ್ಲಿ ಬೆಳಿಗ್ಗೆ ಮೋಡ ಮುಸುಕಿದ ವಾತಾವರಣ ಇತ್ತು. ಸೂರ್ಯನ ದರ್ಶನ ಆಗಲಿಲ್ಲ. ಮಳೆಯೂ ಸುರಿಯಲಿಲ್ಲ.