ಬೀದರ್ ಜಿಲ್ಲಾ ಎಸ್ಪಿ ಜೊತೆ ಆಕಾಶವಾಣಿ ಸಂದರ್ಶನ

ಕಲಬುರಗಿ:ಎ.24:ಬೀದರ್ ಜಿಲ್ಲೆಯಲ್ಲಿ ಚುನಾವಣೆಗೆ ಕೈಗೊಂಡ ಭದ್ರತಾ ವ್ಯವಸ್ಥೆಗಳ ಸಿದ್ಧತೆಗಳ ಕುರಿತಾಗಿ ಕಲ್ಬುರ್ಗಿ ಆಕಾಶವಾಣಿಯು ಬೀದರ್ ಜಿಲ್ಲಾ.ಪೆÇಲೀಸ್ ವರಿಷ್ಠಾಧಿಕಾರಿ ಶ್ರೀ ಚೆನ್ನಬಸವಣ್ಣ ಎಸ್. ಎಲ್ ಅವರ ಜೊತೆ ನಡೆಸಿದ ಸಂದರ್ಶನವನ್ನು ಏಪ್ರಿಲ್ 25 ರಂದು ಬೆಳಗ್ಗೆ 8.30ಕ್ಕೆ ಬಿತ್ತರಿಸಲಿದೆ.
ಬೀದರ್ ಜಿಲ್ಲೆಯಲ್ಲಿ ನ್ಯಾಯ ಸಮ್ಮತ ಹಾಗೂ ಭಯಮುಕ್ತವಾಗಿ ಚುನಾವಣೆ ನಡೆಸಲು ಚುನಾವಣಾ ಆಯೋಗ ನಿರ್ದೇಶನವನ್ನು ಬೀದರ್ ಜಿಲ್ಲಾ ಪೆÇಲೀಸ್ ಇಲಾಖೆ ಕೈಗೊಂಡ ಕ್ರಮಗಳ ಬಗ್ಗೆ ಸಂಕೀರ್ಣ ಮತಗಟ್ಟೆಗಳ ಭದ್ರತಾ ವ್ಯವಸ್ಥೆ ಮತ್ತು ಈ ವರೆಗೆ ವಶಪಡಿಸಿಕೊಂಡ ಅಕ್ರಮ ಗಾಂಜಾ, ನಗದು , ಅಕ್ರಮ ಮದ್ಯ ಮತ್ತು ಇತರ ವಸ್ತುಗಳ ಬಗ್ಗೆ ಪೆÇಲೀಸ್ ವರಿಷ್ಠಾಧಿಕಾರಿಗಳು ಸಂದರ್ಶನದಲ್ಲಿ ವಿವರ ನೀಡಿದ್ದಾರೆ. ಇವರನ್ನು ಡಾ. ಸದಾನಂದ ಪೆರ್ಲ ಅವರು ಸಂದರ್ಶಿಸಿದ್ದಾರೆ ಎಂದು ಆಕಾಶವಾಣಿಯ ಪ್ರಕಟಣೆ ತಿಳಿಸಿದೆ.