ಬೀದರ್‍ನಲ್ಲಿ ಕಮ್ಮಿ ಪಾಸಿಟಿವಿಟಿ: ಖೇಣಿ ಸಂತಸ

ಬೀದರ:ಮೇ.20: ಕಳೆದ ಒಂದು ವಾರದಿಂದ ಬೀದರ್ ಜಿಲ್ಲೆಯಲ್ಲಿ ಜಿಲ್ಲಾಡಳಿತ ದಿಟ್ಟ ನಿರ್ಧಾರ ಹಾಗೂ ಜನರ ಸಹಕಾರದಿಂದ ಕೋವಿಡ್ ಮಹಾಮಾರಿ ತನ್ನ ರೌದ್ರನರ್ತನ ತಣ್ಣಿಗೆ ಮಾಡಿದಂತೆ ಕಾಣುತ್ತಿದ್ದು ಇದು ಹೀಗೆ ಮುಂದುವರೆಯಲಿ ಎಂದು ಬೀದರ್ ದಕ್ಷಿಣ ಕ್ಷೇತ್ರದ ಮಾಜಿ ಶಾಸಕ ಅಶೋಕ ಖೇಣಿ ಅಭಿಪ್ರಾಯ ಪಟ್ಟಿದ್ದಾರೆ.

ಪಾಸಿಟಿವಿಟ್ ದರ ಕಡಿಮೆ ಆಗಿದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ಎಪ್ರಿಲ್ ತಿಂಗಳಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಸೊಂಕಿತರು ಇದ್ದರು. ವೈದ್ಯರ ಸಹಾಯದಿಂದ ಪಾಸಿಟಿವಿಟಿ ಕಡಿಮೆಯಾಗಿದೆ ಅಲ್ಲದೆ ಲಾಕ್ ಡಾನ್ ಮಾಡಿದರಿಂದ ಕೂಡ ಜನರು ಅನಗತ್ಯವಾಗಿ ಓಡಾಡುವುದು ಕಡಿಮೆಯಾಗಿದೆ. ಬೀದರ ದಕ್ಷಿಣ ಕ್ಷೇತ್ರದ ಪ್ರತಿಯೊಬ್ಬ ಕಾರ್ಯಕರ್ತರ ಜೊತೆ ದೂರವಾಣಿ ಮೂಲಕ ಸಂಪರ್ಕ ಮಾಡಿ ಆರೋಗ್ಯ ವಿಚಾರಿಸುತ್ತಿದ್ದೆನೆ. ನನ್ನ ಅವಧಿಯಲ್ಲಿ ಮನ್ನಳ್ಳಿ, ಘೋಡಂಪಳ್ಳಿ, ನಿರ್ಣಾ, ಬಗದಲ್ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ಮಾಡಿದ ಕಾರಣ ಇಂದಿನ ಕೊರೋನಾ ಕಾಲದಲ್ಲಿ ಜನ ಪ್ರಾಥಮಿಕ ಚಿಕಿತ್ಸೆ ಪಡೆಯಲು ಅನುಕುಲವಾಗುತ್ತಿದೆ ಎಂದು ತಿಳಿಸಿದ್ದಾರೆ.

ವಿರೋಧ ಪಕ್ಷದ ನಾಯಕರು ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ, ಕಾರ್ಯಧ್ಯಕ್ಷ ಈಶ್ವರ ಖಂಡ್ರೆ ಅವರ ಜೊತೆ ವಿಡಿಯೋ ಕಾನ್ಫರೆನ್ಸ ಮೂಲಕ ಮಾತಾನಾಡಿ, ಪ್ರಸ್ತುತ ಕ್ಷೇತ್ರದಲ್ಲಿ ಜನರ ಪರವಾಗಿ ನಿಲ್ಲಲು ಕೈಗೊಂಡ ಕ್ರಮಗಳ ಮತ್ತು ಕೈಗೊಳ್ಳುಬೇಕಾದ ಕಾರ್ಯಕ್ರಮಗಳ ಬಗ್ಗೆ ವಿತರಿಸಿರುವುದಾಗಿ ಖೇಣಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.