ಬೀದರ್:ಬೀಜ್, ಕೀಟನಾಶಕ, ರಸಗೊಬ್ಬರ ಮಾರಾಟ ಮಳಿಗೆ ಉದ್ಘಾಟನೆ

ಬೀದರ್,ನ.8-ಇಲ್ಲಿನ ಗಾಂಧಿ ಗಂಜ್ ನಲ್ಲಿ ಬೀದರ್ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ನಿಯಮಿತ ವತಿಯಿಂದ ಆರಂಭಿಸಲಾದ ಬೀದರನ ಬೀಜ, ಕೀಟನಾಶಕ ಮತು ್ತರಸಗೊಬ್ಬರಗಳ ಮಾರಾಟ ಮಳಿಗೆಯನ್ನು ಕೇಂದ್ರ ರಾಸಾಯನಿಕ, ರಸಗೊಬ್ಬರ ಹಾಗೂ ನವೀಕರಿಸಬಹುದಾದ ಇಂಧನ ಖಾತೆ ಸಚಿವ ಭಗವಂತ ಖೂಬಾ ಉದ್ಘಾಟಿಸಿದರು.
ರಾಮಕೃಷ್ಣ ವಿವೇಕಾನಂದ ಆಶ್ರಮದ ಜ್ಯೋತಿರ್ಮಯಾನಂದಸ್ವಾಮಿಜಿ, ಬಗ್ದಲ್ ನ ಪ್ರಗತಿಪರ ರೈತ ಖಾದ್ರಿಸಾಹೇಬ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ವಿಜಯಕುಮಾರ ಆನಂದೆ, ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ವಿಜಯಕುಮಾರ ಪಾಟೀಲ ಗಾದಗಿ, ಉಪಾಧ್ಯಕ್ಷರು, ಅಗ್ರಿ ಇನ್ಪುಟ್ಡಿಲ್ ಅಸೋಸಿಯೇಷನ್ ನ ಮಡಿವಾಳಪ್ಪ ಗಂಗಶೆಟ್ಟಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ವಿಶ್ವನಾಥ, ಸಹಾಯಕ ಕೃಷಿ ನಿರ್ದೇಶಕ ಧೂಳಪ್ಪ ಹೊಸಾಳೆ, ನಬಾರ್ಡ ಬ್ಯಾಂಕ್ ನ ಡಿಡಿಎಂ ರಾಮರಾವ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ರೈತಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.
ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಚೇತನ ದಾಬೆ ್ಕಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ, ಕಂಪನಿಯ ಗುರಿಯ ಬಗ್ಗೆ ತಿಳಿಸಿದರು. 14 ಗ್ರಾಮಗಳ ಮತು ್ತಸಾವಿರಕ್ಕಿಂತ ಹೆಚು ್ಚರೈತ ಸದಸ್ಯರನ್ನು ಒಳಗೊಂಡ ಈ ಕಂಪನಿಯು ಈ ಮಾರಾಟ ಮಳಿಗೆ ಮೂಲಕವಾಗಿ ಕಂಪನಿಯ ರೈತ ಸದಸ್ಯರಿಗೆ ಬೆಳೆ ಬೆಳೆಸಲು ತಾಂತ್ರಿಕ ಸಹಾಯ ಮತು ್ತಸರಿಯಾದ ದರದಲ್ಲಿ ಬೀಜ, ಕೀಟನಾಶಕ ಮತ್ತು ರಸಗೊಬ್ಬರಗಳನ್ನೂ ಕೊಡಲಾಗುವುದು ಎಂದು ಆಶ್ವಾಸನೆ ನೀಡಿದರು.
ಅದರೊಂದಿಗೆ ಕಂಪನಿಯ ಮುಖ್ಯ ಉದ್ದೇಶವಾದ ಹಲವಾರು ಸಂಸ್ಕರಣೆ ಘಟಕಗಳನ್ನೂ ಸ್ಥಾಪಿಸಲು ಸರ್ಕಾರದ ಮತು ್ತಇಲಾಖೆಯ ಬೆಂಬಲ ಬೇಕೆಂದು ತಿಳಿಸಿದರು.
ಸಚಿವ ಭಗವಾಂತಖುಬಾ ಅವರು ಮಾತನಾಡಿ, ರೈತರಿಂದ, ರೈತರಿಗಾಗಿ ಪ್ರಾರಂಭಿಸಲಾಗಿರುವ ಈ ಕಂಪನಿಯನ್ನು ನೀವೆಲ್ಲರೂ ಒಗ್ಗಟ್ಟಾಗಿ ಉಳಿಸಿ, ಬೆಳಿಸಿಕೊಂಡು ಹೋಗಬೇಕು ಎಂದು ಎಲ್ಲಾ ರೈತರಲ್ಲಿ ಕೋರಿಕೊಂಡರು.
ಮತ್ತು ಈ ಕಂಪನಿಗೆ ಕೇಂದ್ರ ಮತ್ತುರಾಜ್ಯ ಸರ್ಕಾರದ ಯೋಜನೆಗಳನ್ನು ಉಪಯೋಗಿಸಿ ದೇಶದ ಪ್ರಧಾನಿಯಾದ ನರೇಂದ್ರ ಮೋದಿ ಅವರ ಕನಸಾದ ರೈತರ ಆದಾಯವನ್ನು ದ್ವಿಗುಣಗೊಳಿಸಬೇಕೆಂದುನಿರ್ದೇಶಕರ ಮಂಡಳಿಗೆ ಸೂಚಿಸಿದರು.
ಈ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ರೈತಸದಸ್ಯರಿಗೆ ಬೀದರ ತೋಟಗಾರಿಕೆ ರೈತ ಉತ್ಪಾದಕರ ಕಂಪನಿಯ ನಿರ್ದೇಶಕರ ಆಡಳಿತ ಮಂಡಳಿ ಮತು ್ತಸಿಇಓಯವರ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.