
ಬೀದರ್:ಮೇ.25: ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬುಧವಾರ 15 ನಿಮಿಷ ಸಾಧಾರಣ ಮಳೆಯಾಗಿದೆ.
ಸಂಜೆ ಸುರಿದ ಮಳೆ ಸ್ವಲ್ಪ ಮಟ್ಟಿಗೆ ತಂಪು ಎರಚಿದರೂ ಸೆಕೆ ಮಾತ್ರ ಕಡಿಮೆಯಾಗಿಲ್ಲ. ಬಿಸಿಲಿನ ಝಳದಿಂದ ಕಾದ ಕಟ್ಟಡದ ಮೇಲೆ ಬಿದ್ದ ನೀರು ಬಿಸಿಯಾಗಿ ಮತ್ತಷ್ಟು ತೇವಾಂಶ ಹೆಚ್ಚಿದೆ. ಇನ್ನೂ ಒಂದು ವಾರ ಉರಿ ಬಿಸಿಲು ಹಾಗೂ ಸಂಜೆ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.