ಬೀದರ್‍ನಲ್ಲಿ ಕಲಾವಿದರ ಒಕ್ಕೂಟದ ಮೆರವಣಿಗೆಗೆ ಚಾಲನೆ

ಬೀದರ್: ಜು.28:ಒಂದೆ ವರ್ಷದಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಜನಪದ ಕಲಾವಿದರ ನೊಂದಣಿಯಾಗಿದ್ದಾರೆ ಇನ್ನು ಹೆಚ್ಚಿನ ನೊಂದಣಿಯಾಗಿ ಜನಪದ ಸಂಸ್ಕøತಿಗೆ ಒಳ್ಳೆಯ ಅಡಿಪಾಯ ಹಾಕುವ ಮೂಲಕ ಜನಪದ ಕಲೆ ಉಳಿಸಿ ಬೆಳೆಸಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಕರೆ ನೀಡಿದರು.

ನಿನ್ನೆ ಬೆಳಿಗ್ಗೆ ನಗರದ ಡಾ. ಅಂಬೇಡ್ಕರ್ ವೃತ್ತದಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಪ್ರಥಮ ವರ್ಷಾಚರಣೆ ಹಾಗೂ ಸಾಂಸ್ಕøತಿಕ ಮತ್ತು ಜನಪದ ಉತ್ಸವದ ವಿವಿಧ ಕಲಾ ತಂಡಗಳ ಭವ್ಯ ಮೆರವಣಿಗೆಗೆ ಚರ್ಮ ವಾದ್ಯ ನುಡಿಸುವುದರೊಂದಿಗೆ ಚಾಲನೆ ನೀಡಿ ಮಾತನಾಡಿ, ಒಕ್ಕೂಟ ಅಧ್ಯಕ್ಷರು ಇಟ್ಟಿದ್ದ ಬೇಡಿಕೆ ಕುರಿತು ಪರಿಶೀಲನೆ ನಡೆಸಲಾಗುವುದು. ಬೀದರ್‍ನಲ್ಲಿ ಎರಡು ದಿನಗಳ ವರೆಗೆ ನಡೆಯಲಿರುವ ಉತ್ಸವ ಯಶಸ್ವಿಯಾಗಲಿ ಎಂದು ಹಾರೈಸಿದರು.

ಒಕ್ಕೂಟದ ಗೌರವಾಧ್ಯಕ್ಷೆ ಮಂಜಮ್ಮ ಜೋಗತಿ,

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ, ಮಾದಿಗ ದಂಡೋರ ಹೋರಾಟ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ, ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ,

ಗಾನಯೋಗಿ ಪಂಚಾಕ್ಷರಿ ಗವಾಯಿ ಸೇವಾ ಸಂಘದ ಅಧ್ಯಕ್ಷ ಎಸ್‍ವಿ ಕಲ್ಮಠ, ಗುಲ್ಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಪ್ರತಿಭಾ ಚಾಮಾ, ಹಿರಿಯ ಸಾಹಿತಿ ಎಸ್‍ಎಂ ಜನವಾಡಕರ್, ಭಾರತಿ ವಸದ, ಪಾರ್ವತಿ ಸೋನಾರೆ, ಶಂಭುಲಿಂಗ ವಾಲ್ದೊಡ್ಡಿ, ಹಿರಿಯ ಕಲಾವಿದ ಮಹೇಶ ವಿ. ಪಾಟೀಲ್, ಒಕ್ಕೂಟದ ಸಲಹೆಗಾರ ಶ್ರಿನಿವಾಸ ಜಿ. ಕಪ್ಪಣ್ಣ, ರೇಖಾ ಸೌದಿ, ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂಗಡಿ ಕನ್ನೆಳ್ಳಿ, ಸುನೀಲ ಕಡ್ಡೆ, ಸುನೀಲ ಭಾವಿಕಟ್ಟಿ, ವಿದ್ಯಾವತಿ ಬಲ್ಲೂರ, ಸೇರಿದಂತೆ ಇನ್ನಿತರ ಪ್ರಮುಖರು ಹಾಜರಿದ್ದರು.

ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಬಸವೇಶ್ವರ ವೃತ್ತ, ಶಿವಾಜಿ ವೃತ್ತದ ರಸ್ತೆಯ ಮೂಲಕ ರಂಗ ಮಂದಿರಕ್ಕೆ ತಲುಪಿತು.

ಮೆರವಣಿಗೆಯಲ್ಲಿ ಬೆಂಗಳೂರಿನ ಗೋರವ ಕುಣಿತ ತಂಡದ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ವಿವಿಧ ಜಿಲ್ಲೆಯ ಕಲಾ ತಂಡಗಳಾದ ಚರ್ಮವಾದ್ಯ, ಮಹಿಳಾ ಕೋಲಾಟ, ರಾಮ ಲಕ್ಷ್ಮಣ, ಡೊಳ್ಳು ಕುಣಿತ, ಹೆಜ್ಜೆ ಕುಣಿ, ಶಹನಾಯಿ ವಾದನ, ಕರಡಿ ಮಜಲು, ಚಿಟ್ಟ ಹಲಗೆ ಮೇಳ, ಲಮಾಣಿ ನೃತ್ಯ, ಹಗಲುವೇಶ, ಮಹಿಳಾ ತಮಟೆ, ಹಲಗೆ ವಾದನ, ಜನಪದ, ಖವ್ವಾಲಿ, ಕೀಲು ಕುದರೆ, ನಂದಿಧ್ವಜ, ಭಜನೆ, ಬ್ಯಾಂಡ್‍ಸೆಟ್ ವೀರಗಾಸೆ, ಗೋರವಕುಣಿತ, ಚಕ್ರಿಭಜನೆ, ತತ್ವಪದ ಗಾಯನ, ಡೊಳ್ಳಿನ ಪದ, ಸುಗ್ಗಿ ಹಾಡು, ಗೀಗಿಪದ, ಬಯಲಾಟ ಹಾಡಿಕೆ, ಸೋಬಾನ ಪದ, ಸಾಮಾಜಿಕ ಕಿರುನಾಟಕ ಸೇರಿದಂತೆ ಇನ್ನಿತರ ಕಲಾವಿದರು ಪಾಲ್ಗೊಳ್ಳುವ ಮೂಲಕ ಮೆರವಣಿಗೆಯುದ್ದಕ್ಕೂ ತಮ್ಮ ಕಲೆಯ ಪ್ರದರ್ಶನ ನೀಡಿದರು.