ಬೀದರ್:ಎ.24: ಚುನಾವಣೆ ಹತ್ತಿರವಾಗುತ್ತಿದ್ದಂತೆ ಚುನಾವಣಾ ಅಕ್ರಮಗಳು ಜೋರಾಗುತ್ತಿವೆ. ಬೀದರ್‍ನಲ್ಲಿ ಇವತ್ತು ಅಪಾರ ಪ್ರಮಾಣದ ಹಣ ಹಾಗೂ ಬೆಳ್ಳಿ ನಾಣ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನು ಹೈದರಾಬಾದ್‍ನಿಂದ ಬೀದರ್‍ಗೆ ತರುತ್ತಿರುವ ವೇಳೆ ಸಿಕ್ಕಿಬಿದ್ದಿದ್ದಾರೆ.
ತೆಲಂಗಾಣ ಗಡಿಯ ಶಾಪೂರ್ ಬಳಿ ಇರುವ ಚೆಕ್ ಪೆÇೀಸ್ಟ್‍ನಲ್ಲಿ ಪರಿಶೀಲನೆ ವೇಳೆ ಕಾರೊಂದರಲ್ಲಿ ಹಣ ಹಾಗೂ ಬೆಳ್ಳಿ ನಾಣ್ಯಗಳು ಪತ್ತೆಯಾಗಿವೆ. ಸುಮಾರು 18 ಲಕ್ಷ ರೂಪಾಯಿ ನಗದು, ಐದು ಗ್ರಾಂನ 1250 ಬೆಳ್ಳಿ ನಾಣ್ಯಗಳು, 1 ಗ್ರಾಂನ 1000 ಬೆಳ್ಳಿ ನಾಣ್ಯಗಳನ್ನು ಜಪ್ತಿ ಮಾಡಲಾಗಿದೆ. ಕಾರಿನಲ್ಲಿದ್ದವರು ಇದಕ್ಕೆ ಯಾವುದೇ ದಾಖಲೆಗಳನ್ನು ನೀಡಿಲ್ಲ. ಈ ಹಿನ್ನೆಲೆಯಲ್ಲಿ ಅವುಗಳನ್ನು ಜಪ್ತಿ ಮಾಡಲಾಗಿದ್ದು, ಕಾರನ್ನು ಕೂಡಾ ಸೀಜ್ ಮಾಡಲಾಗಿದೆ.