ಬೀದರನ ನಿಡೇಬಾನ ಸುಪುತ್ರ ಪಾಟೀಲ್‍ಗೆಒಲಿದ ಸುಪ್ರೀಂಕೋರ್ಟ್ ಎಎಜಿ ಭಾಗ್ಯ

ಭಾಲ್ಕಿ:ಜು.5:ಕರ್ನಾಟಕದ ಕಿರೀಟ ಜಿಲ್ಲೆಯಾದ ಬೀದರನ ಭಾಲ್ಕಿ ತಾಲೂಕಿನ ನಿಡೇಬಾನ ಗ್ರಾಮದ ಸುಪುತ್ರ ಅಡ್ವೊಕೇಟ್ ನಿಶಾಂತ ಪಾಟೀಲ್ ಅವರಿಗೆ ಭಾರತದ ಸುಪ್ರೀಂಕೋರ್ಟ್‍ನ ಹೆಚ್ಚುವರಿ ಅಡ್ವೊಕೇಟ್ ಜನರಲ್ (ಎಎಜಿ)ಆಗಿ ನೇಮಿಸಿ ಕರ್ನಾಟಕ ಸರ್ಕಾರದ ಕಾನೂನು ಇಲಾಖೆ ಆದೇಶ ಹೊರಡಿಸಿದೆ.
ಎಡೀಶನಲ್ ಅಡ್ವೊಕೇಟ್ ಜನರಲ್ ನಿಶಾಂತ ಪಾಟೀಲ್ ಅವರು ಕರ್ನಾಟಕದ ಹೈಕೋರ್ಟ್ ನ್ಯಾಯಧೀಶರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಭಾಲ್ಕಿ ತಾಲೂಕಿನ ನಿಡೇಬಾನ ಗ್ರಾಮದ ಎನ್.ಕೆ .ಪಾಟೀಲ ಅವರ ಸುಪುತ್ರರು ಹೌದು.
ಎಡೀಶನಲ್ ಅಡ್ವೊಕೇಟ್ ಜನರಲ್ ನಿಶಾಂತ ಪಾಟೀಲ್ ಅವರು,ಸುಪ್ರೀಂಕೋರ್ಟ್ ಮತ್ತು ದೇಹಲಿ ಹೈಕೋರ್ಟ್‍ನಲ್ಲಿ ಅತ್ಯುತ್ತಮ ದಕ್ಷ ನ್ಯಾಯವಾದಿಗಳಾಗಿ ಕಾರ್ಯನಿರ್ವಹಿಸಿರುತ್ತಾರೆ.ಅಲ್ಲದೆ ರಾಜಸ್ಥಾನ ಮತ್ತು ಛತ್ತಿಸಗಡ್ ರಾಜ್ಯದ ಸ್ಟ್ಯಾಡಿಂಗ್ ಕೌನ್ಸೆಲ್‍ಆಗಿ ಸುಪ್ರೀಂಕೋರ್ಟ್‍ನಲ್ಲಿ (2019 ರಿಂದ 23ರ)ವರೆಗೆ,ಕರ್ನಾಟಕದ ಮಹಾದಾಯಿ ನೀರು ಹಂಚಿಕೆ ಟ್ರೀಬ್ಯುನಲ್ ಅಡ್ವೊಕೇಟ್‍ರಾಗಿ ಸಮರ್ಥವಾಗಿ ವಾದ ಮಂಡಿಸಿ,ಕರ್ನಾಟಕಕ್ಕೆ ನ್ಯಾಯ ಒದಗಿಸಿ ಕೊಟ್ಟಿರುತ್ತಾರೆ.ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಅಡ್ವೊಕೇಟ್‍ರಾಗಿ ಸೇವೆ ಸಲ್ಲಿಸಿರುತ್ತಾರೆ.ಮತ್ತು ಸುಪ್ರೀಂಕೋರ್ಟ್‍ನಲ್ಲಿ ಕರ್ನಾಟಕ ಸರ್ಕಾರ ಪರವಾಗಿ ಹಿಜಾಬ್ ಪ್ರಕರಣದಲ್ಲಿ ವಾದ ಮಂಡಿಸಿರುತ್ತಾರೆ.ಸಂವಿಧಾನಾತ್ಮಕ ಕಾನೂನು,ಆಡಳಿತಾತ್ಮಕ ಕಾನೂನು,ಸೇವಾ ಕಾನೂನು,ವಿದ್ಯುತ್ ಕಾನೂನು,ಅಪರಾಧ ಕಾನೂನು, ವಾಣಿಜ್ಯ ಕಾನೂನು ಮತ್ತು ಪ್ರತ್ಯಕ್ಷ ಹಾಗು ಪರೋಕ್ಷ ತೆರಿಗೆ ಕಾನೂನು ಸೇರಿದಂತೆ ಇನ್ನೀತರ ಪ್ರಮುಖ ವ್ಯಾಜ್ಯಗಳಲ್ಲಿ ಭಾಗವಹಿಸಿ ನ್ಯಾಯ ದೊರಕಿಸಿಕೊಟ್ಟಿರುತ್ತಾರೆ.ಪಾಟೀಲ್ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಮತ್ತು ನಲಸಾರ ವಿಶ್ವವಿದ್ಯಾಲಯದಿಂದ ಪಿಜಿಡಿಎಆರ್ ಸ್ವಾತ್‍ಕೋತ್ತರ್ ಪದವಿ ಪಡೆದಿರುತ್ತಾರೆ.
ಇವರ ಅಮೋಘ ಸೇವೆ ಗಮನಿಸಿ ಕರ್ನಾಕಟ ಸರ್ಕಾರ ಇವರಿಗೆ ಭಾರತದ ಸುಪ್ರೀಂಕೋರ್ಟ್‍ನ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ನೇಮಿಸಿದಕ್ಕಾಗಿ ಭಾಲ್ಕಿ ಹಿರೇಮಠದ ಹಿರಿಯ ಪೂಜ್ಯರಾದ ಡಾ.ಬಸವಲಿಂಗ ಪಟ್ಟದ್ದೇವರು,ಪೀಠಾಧಿಪತಿ ಗುರುಬಸವ ಪಟ್ಟದ್ದೇವರು,ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ವಂಕೆ,ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶೀಧರ ಕೋಸಂಬೆ,ಜಿಪಂ ಮಾಜಿ ಸದಸ್ಯ ಅಂಬಾದಾಸ ಕೋರೆ, ನ್ಯಾಯವಾದಿ ಸಂಘದ ಅಧ್ಯಕ್ಷ ರಾಹುಲ ಸಾವಳೆ,ನ್ಯಾಯವಾದಿಗಳಾದ ಉಮಾಕಾಂತ ವಾರದ,ಸಾಗರ ನಾಯಕ್,ಶಾಂತನು ಕುಲಕರ್ಣಿ ಸಂತಸ ವ್ಯಕ್ತಪಡಿಸಿ,ಅಭಿನಂದಿಸಿದ್ದಾರೆ.