ಬೀದರನಲ್ಲಿ ಎರಡನೇ ದಿನವೂ ಯಶಸ್ವಿಯಾದ ವೀಕೆಂಡ್ ಕರ್ಫ್ಯೂ

ಬೀದರ:ಎ.25: ರಾಜ್ಯ ಸರ್ಕಾರ ಈ ತಿಂಗಳ ಇಪ್ಪತ್ತೊಂದರಿಂದ ಮೇ ನಾಲ್ಕರ ವರೆಗೆ ರಾಜ್ಯಾದ್ಯಂತ ಹೊರಡಿಸಿರುವ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ನಿಮಿತ್ಯ ಇಂದು ವೀಕೆಂಡ್ ಕರ್ಫ್ಯೂ ಎರಡನೇ ದಿನವಾದ ಭಾನುವಾರ ರಾಜ್ಯದ ಮುಕುಟಪ್ರಾಯ ಗಡಿ ಜಿಲ್ಲೆ ಬೀದರ್ ಸಹ ಇಂದೂ ಸಹ ಸಂಪೂರ್ಣ ನಿಶ್ಶಬ್ದದಿಂದ ಕೂಡಿತ್ತು. ವಿರಳ ಜನಸಂಚಾರ ಹೊರತುಪಡಿಸಿ ಉಳಿದೆಲ್ಲ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು. ಕೋವಿಂದ್ ಎರಡನೇ ಅಲೆಯೂ ಇಡೀ ಜಗತ್ತು ತತ್ತರಿಸಿದ ಹಾಗೆ ಭಾರತದಲ್ಲೂ ಸಹ ಇದರ ಜೋರು ಹೆಚ್ಚಾಗಿರುವುದರಿಂದ ಬೀದರ್ ನಲ್ಲಿ ಜನ ಮನೆಯಿಂದ ಹೊರಬರದೆ ಮನೆಯಲ್ಲಿ ಲಾಕ್ ಆಗಿರುವ ಸನ್ನಿವೇಶ ಕಂಡು ಬಂದಿರುವುದು ಗಮನಾರ್ಹ ಬೆಳವಣಿಗೆ. ಕೆಲವು ಹೋಟೆಲ್ ಗಳಲ್ಲಿ ಪಾರ್ಸಲ್ ಹೊರತುಪಡಿಸಿದರೆ ಉಳಿದೆಲ್ಲವು ಮೌನವಾಗಿದ್ದು ಕಂಡು ಬಂತು. ಕೋವಿಡ್ ಎರಡನೇ ಅಲೆ ಗಡಿ ಜಿಲ್ಲೆ ಬೀದರ್ ಜನರನ್ನ ಬೆಂಬಿಡದೆ ಕಾಡುತ್ತಿದ್ದು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲೂ ಸಹ ಬೆಡ್ ಸಿಗದೆ ತೊಂದರೆಗೆ ಸಿಲುಕಿತ್ಯಿರುವುದನ್ನು ಗಮನಿಸುತ್ತಿರುವ ಜನ ಮನೆಯಿಂದ ಹೊರಬರದೆ ತಾವೇ ಲಾಕ್ ಆಗಿರುವ ಸನ್ನಿವೇಶ ಎಲ್ಲೆಡೆ ಕಂಡು ಬಂದಿರುವುದು ಗಮನಾರ್ಹ ಸಂಗತಿ.