
ಬೀದರ:ಸೆ.19:ಕಲ್ಯಾಣ ಕರ್ನಾಟಕ ಉತ್ಸವದಂದು, ಬೀದರ ಜಿಲ್ಲೆಗೆ, ಸಚಿವರ ಬೇಡಿಕೆಯಂತೆ ದೇಶದ ಪ್ರತಿಷ್ಠೀತ ಶಾಲೆಗಳಲ್ಲೊಂದಾದ ಸೈನಿಕ ಶಾಲೆಯನ್ನು ಮಂಜೂರಿ ಮಾಡಿರುವ ಹಿನ್ನಲೆಯಲ್ಲಿ ರಕ್ಷಣಾ ಸಚಿವರಾದ ಶ್ರೀ ರಾಜನಾಥ ಸಿಂಗ್‍ಜಿಯವರಿಗೆ, ನೂತನ ಹಾಗೂ ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವರಾದ ಶ್ರೀ ಭಗವಂತ ಖೂಬಾರವರು ಭೇಟಿಮಾಡಿ, ಸಮಸ್ತ ಬೀದರ ಜನತೆಯ ಪರವಾಗಿ ಧನ್ಯವಾದಗಳು ತಿಳಿಸಿದ್ದಾರೆ.
ಆದಷ್ಟೂ ಬೇಗ ಸೈನಿಕ ಶಾಲೆಯ ನಿರ್ಮಾಣ ಕಾಮಗಾರಿ ಹಾಗೂ ತರಗತಿಗಳ ಪ್ರಾರಂಭಕ್ಕೆ ಅವಶ್ಯಕವಾಗಿರುವ ಎಲ್ಲಾ ಪ್ರಕ್ರೀಯೆಗಳು ಮುಗಿಸಲು ಸಂಬಂಧಪಟ್ಟವರಿಗೆ ಸೂಚಿಸಬೇಕೆಂದು ಮನವಿ ಮಾಡಿದಾಗ, ರಕ್ಷಣಾ ಸಚಿವರು ಬರುವ ವರ್ಷದಿಂದ ತರಗತಿಗಳು ಪ್ರಾರಂಭಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೋಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಕೇಂದ್ರ ಸಚಿವ ಖೂಬಾ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ನಮ್ಮ ಸೈನಿಕ ಶಾಲೆಯೂ ಕೇಂದ್ರ ಸರ್ಕಾರದಿಂದ ನೀಡಿರುವ ಬಹುಮೂಲ್ಯ ಕೋಡುಗೆಯಾಗಿದೆ ಎಂದರೆ ತಪ್ಪಾಗಲಾರದು, ಸೈನಿಕ ಶಾಲೆಗಾಗಿ ಎಲ್ಲಾ ರಾಜ್ಯದವರು ನಿರಂತರವಾಗಿ ಪ್ರಯತ್ನ ಮಾಡುತ್ತಾರೆ, ಆದರೆ ಈ ಸಾಲಿನಲ್ಲಿ ನಾನು ಎಲ್ಲರಿಗಿಂತ ಮೊದಲಿಗನಾಗಿ ಯಶಸ್ವಿಯಾಗಿದ್ದೇನೆ, ನಮ್ಮ ಸರ್ಕಾರ ಯಾವಾಗಲೂ ಬೀದರ ಜಿಲ್ಲೆಯ ಮೇಲೆ ವಿಶೇಷ ಕಾಳಜಿ ಇಟ್ಟಿದ್ದಾರೆ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆಯಾಗಿದೆ ಎಂದು ಸಚಿವ ಖೂಬಾ ಬಣ್ಣಿಸಿದ್ದಾರೆ.