ಬೀದರ,ಜೂ 2 :ಬೀದರ ಜಿಲ್ಲೆಯಿಂದ ಈಶ್ವರಖಂಡ್ರೆ ಮತ್ತು ರಹಿಂ ಖಾನ್ ನೂತನಸಚಿವರಾಗಿದ್ದು ಜಿಲ್ಲೆಯ ಜ್ವಲಂತ ಸಮಸ್ಯೆಗಳಬಗ್ಗೆ ಅರಿತಿರುವ ಉಭಯ ಸಚಿವರು ಬೀದರ ಜಿಲ್ಲೆಯರಚನಾತ್ಮಕ ಪ್ರಗತಿಯ ಬಗ್ಗೆ ಗಂಭೀರವಾಗಿ ಪರಿಗಣಿಸಿರಾಜಕೀಯ ಇಚ್ಛಾಶಕ್ತಿ ವ್ಯಕ್ತಪಡಿಸುವ ಮೂಲಕ ಕಾಲಮಿತಿಯಲ್ಲಿಅಭಿವೃದ್ಧಿ ಕಾರ್ಯಗಳು, ಕಾರ್ಯಾಚರಣೆ ರೂಪದಲ್ಲಿ ಕೈಗೊಳ್ಳಬೇಕೆಂದು ಲಕ್ಷ್ಮಣ ದಸ್ತಿ ಸುದ್ದಿಗೋಷ್ಠಿಯಲ್ಲಿ ಅಗ್ರಹಿಸಿದರು
ಸುಮಾರು 11 ತಿಂಗಳುಗಳಿಂದ ಕಾರಂಜಾ ಸಂತ್ರಸ್ತರು
ನ್ಯಾಯಯುತವಾದ ಬೇಡಿಕೆಗೆ ಮಾನವಿಯತೆಯ
ಮಾನದಂಡದಂತೆ, ಈಡೇರಿಸಲು ನಡೆಸುತ್ತಿರುವ
ಹೋರಾಟಕ್ಕೆ ತಕ್ಷಣ ಸ್ಪಂದಿಸಿ ನ್ಯಾಯ ಒದಗಿಸಬೇಕು.ಪ್ರಸ್ತುತ 371ನೇ(ಜೆ) ಕಲಂ ನಿಯಮವಳಿಗಳನ್ನು
ಅವಲೋಕಿಸಿ ಪರಿಷ್ಕರಣೆ ಮಾಡಬೇಕು. ಅಷ್ಟೇ ಅಲ್ಲದೇ
ಪ್ರತಿ ವರ್ಷ ನಿಯಮಾವಳಿಗಳಿಗೆ ಪರಿಷ್ಕರಣೆ ಮಾಡಿ ಕಲ್ಯಾಣಕೆ.ಕೆ.ಆರ್.ಡಿ.ಬಿ.ಗೆ ಮಂತ್ರಿಗಳನ್ನೇ ಸರದಿವಾರು
ಅಧ್ಯಕ್ಷರನ್ನಾಗಿ ಮಾಡಬೇಕು. ಅದರಂತೆ 371ನೇ(ಜೆ)
ಕಲಂ ಸಂಪುಟ ಉಪ ಸಮಿತಿಗೆ ಕಲ್ಯಾಣ ಕರ್ನಾಟಕದ
ಸಚಿವರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕು.
ಬೀದರ, ಕಲಬುರಗಿ ಜಿಲ್ಲೆಯ ನೀರಾವರಿ ಯೋಜನೆಗಳುಕಾಲಮಿತಿಯಲ್ಲಿ ಪೂರ್ಣಗೊಳಿಸಲು ಕೃಷ್ಣಾ ಭಾಗ್ಯ ಜಲನಿಗಮದಡಿ ಸೇರಿಸಬೇಕು. ಈಗಾಗಲೇ ಕೇಂದ್ರ ಸರಕಾರಕೃಷ್ಣಾ ಗೋದಾವರಿ ಕೊಳದ ಯೋಜನೆಗಳಿಗೆಹೈದ್ರಾಬಾದದಲ್ಲಿ ಒಂದೇ ಆಯುಕ್ತಾಲಯ ಕಚೇರಿ ಅಸ್ತಿತ್ವಕ್ಕೆ ತಂದಿದೆ. ಅದಕ್ಕೆ ಪೂರಕವಾಗಿ ಎರಡು ಜಿಲ್ಲೆಗಳ ನೀರಾವರಿ ಯೋಜನೆಗಳು (ಕಾರಂಜಾ, ಭೀಮಾಮ್, ಮುಂತಾಗಿಎಲ್ಲಾ ಯೋಜನೆಗಳು) ಕೆ.ಬಿ.ಜೆ.ಎನ್.ಎಲ್.ಗೆ ಸೇರಿಸಬೇಕು ಎಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಚಂದ್ರಶೇಖರ ಪಾಟೀಲ ಹುಚಕ್‍ನಳ್ಳಿ ಸೇರಿದಂತೆ ಹಲವರಿದ್ದರು.