ಬೀಡಿ ಉದ್ಯಮಕ್ಕೆ ತಡೆ ಇಲ್ಲ-ಮನವಿಸ್ಪಂದಿಸಿದ ಸರ್ಕಾರ

ಪುತ್ತೂರು, ಮೇ ೧- ರಾಜ್ಯದಲ್ಲಿ ಕೊರೊನಾ ಹಿನ್ನಲೆಯಲ್ಲಿ ಜಾರಿಗೊಂಡ ಜನತಾ ಕರ್ಫ್ಯೂವಿನ ಬಿಗಿ ಕ್ರಮದಿಂದಾಗಿ ಲಕ್ಷಾಂತರ ಬೀಡಿ ಕಾರ್ಮಿಕರ ಬದುಕು ಸಂಕಷ್ಟಕ್ಕೀಡಾಗುತ್ತಿದೆ. ಹಾಗಾಗಿ ಅವರ ಆರ್ಥಿಕ ಸ್ಥಿತಿಗೆ ಸಮಸ್ಯೆ ಉಂಟಾಗದಂತೆ ಮಾಡಲು ಬೀಡಿ ಉದ್ಯಮಕ್ಕೆ ಚಾಲನೆ ನೀಡಬೇಕು ಎಂದು ಆಗ್ರಹಿಸಿ ದಕ
ಜಿಲ್ಲಾಧಿಕಾರಿ ಮತ್ತು ಉಸ್ತುವಾರಿ ಸಚಿವರಿಗೆ ಕಾರ್ಮಿಕ ಮುಖಂಡ ಬಿ.ಎಂ.ಭಟ್ ಮತ್ತು ಗುತ್ತಿಗೆದಾರರ ಸಂಘದ ಮುಖಂಡ ಲಕ್ಷ್ಮಣ ಪರಂಗಿಪೇಟೆ ಮನವಿ ನೀಡಿದರು.
ಪುತ್ತೂರು, ಬೆಳ್ತಂಗಡಿ, ಹಾಗೂ ದ.ಕ. ಜಿಲ್ಲಾ ಬೀಡಿ ಕಾರ್ಮಿಕರ ಸಂಘಟನೆಗಳು ಮತ್ತು ದ.ಕ. ಮತ್ತು ಉಡುಪಿ ಜಿಲ್ಲಾ ಬೀಡಿ ಗುತ್ತಿಗೆದಾರರ ಸಂಘಗಳ ಒಕ್ಕೂಟದಿಂದ ಈ ಮನವಿ ನೀಡಲಾಯಿತು. ಜನತಾ ಕರ್ಫ್ಯು ನಡುವೆ ಉತ್ಪಾದನಾ ವಲಯಗಳಿಗೆ, ಕೃಷಿಗೆ ಸರಕಾರ ಅನುಮತಿ ನೀಡಿದೆ.
ಜನರ ಆರ್ಥಿಕ ಶಕ್ತಿ ಕುಂದದಂತೆ ಮಾಡಲು ಬೀಡಿ ಕೈಗಾರಿಕೆಯ ಚಾಲನೆ ಅತೀ ಅಗತ್ಯವಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಬೀಡಿ ಉದ್ಯಮಕ್ಕೆ ಅವಕಾಶ
ಈ ವಿಚಾರವನ್ನು ಒಪ್ಪಿರುವ ಸರ್ಕಾರ ಬೀಡಿ ಉದ್ಯಮ ಚಾಲನೆಗೆ ಅವಕಾಶ ನೀಡಿದೆ. ಬೀಡಿ ಉದ್ಯಮದ ಕೆಲಸ ನಡೆಸಲು ಯಾವುದೇ ಪಾಸು ಅಗತ್ಯವಿರುವುದಿಲ್ಲ ಎಂದು ಅದಿಕಾರಿಗಳು ತಿಳಿಸಿರುತ್ತಾರೆ. ಬೀಡಿ ಗುತ್ತಿಗೆದಾರರು ಬೀಡಿ ಕಾರ್ಮಿಕರಿಗೆ ಕಚ್ಚಾ ವಸ್ತುಗಳ ನೀಡಲು ಹಾಗೂ ಬ್ರಾಂಚು ಬ್ರಾಂಚುಗಳಿಗೆ ಹೋಗಿ ಬೀಡಿ ಸಂಗ್ರಹ ಮಾಡವುದಕ್ಕೆ ವಿರೋಧ ಇಲ್ಲ. ಕಂಪೆನಿಗಳು ತಮ್ಮ ನೌಕರರನ್ನ ತರಿಸಲು ಅವರವರೇ ವ್ಯವಸ್ಥೆ ಮಾಡಬೇಕಿದೆ. ಬೀಡಿ ಸಾಗಾಟದ ಸಂದರ್ಭ ಪೋಲೀಸರು ತಡೆ
ಮಾಡದಂತೆ ಪೋಲೀಸ್ ವರಿಷ್ಟಾಧಿಕಾರಿ ವರಲ್ಲಿ ತಿಳಿಸಿ ಒಪ್ಪಿಗೆ ಪಡೆಯಲಾಗಿದೆ. ಹಾಗೂ ಪೋಲೀಸರು ತಡೆ ಮಾಡಿದಲ್ಲಿ ಅವರ ಗಮನಕ್ಕೆ ಮತ್ತು ವೃತ್ತ ನೀರೀಕ್ಷಕರ ತರಲು ಸೂಚಿಸಿರುತ್ತಾರೆ ಎಂದು
ಕಾರ್ಮಿಕ ಮುಖಂಡರು ಮಾಹಿತಿ ನೀಡಿದ್ದಾರೆ.
ಆದರೆ ಬೀಡಿ ಉದ್ಯಮದವರಿಂದ ಕೊರೋನಾ ಹರಡದಂತೆ ಮುಂಜಾಗ್ರತಾ ಕ್ರಮವನ್ನು ಎಲ್ಲರೂ ಪಾಲಿಸಬೇಕು. ಬ್ರಾಂಚುಗಳಿಗೆ ಕಾರ್ಮಿಕರು ಒಬ್ಬೊಬ್ಬರೇ ಬರುವಂತೆಯೂ, ಬಂದವರು ದೈಹಿಕ ದೂರ ಕಾಪಾಡುವುದು ಮತ್ತು ಮಾಸ್ಕ್ ದರಿಸಿಕೊಳ್ಳವುದು ಅಗತ್ಯ. ಬೀಡಿ ಬ್ರಾಂಚುಗಳಲ್ಲಿ ಸಾನಿಟೈಸರ್ ವ್ಯವಸ್ಥೆ ಇರಬೇಕು. ಯಾರನ್ನೂ ಜಾಸ್ತಿ ಸಮಯ ಬ್ರಾಂಚಲ್ಲಿ ನಿಲ್ಲಿಸಬಾರದು. ಇದಕ್ಕೆ ಮಾಲಕರು ಮತ್ತು ಗುತ್ತಿಗೆದಾರರು ವ್ಯವಸ್ಥೆ ಮಾಡಬೇಕು ಎಂದು ಅವರು ಬೀಡಿ ಬ್ರಾಂಚು ಗುತ್ತಿಗೆದಾರರು ಹಾಗೂ ಬೀಡಿ ಕಾರ್ಮಿಕರಲ್ಲಿ ವಿನಂತಿ ಮಾಡಿದ್ದಾರೆ. ಈ ಸಂದರ್ಭ ಬೀಡಿ ಗುತ್ತಿಗೆದಾರರ ಸಂಘದ ರಾಜ್ಯ ಮುಖಂಡರಾದ ರವಿ ಪೂಜಾರಿ, ಜಿಲ್ಲಾದ್ಯಕ್ಷ ಕಷ್ಣಪ್ಪ, ಜಯಕರ್ನಾಟಕ ಸಂಘದ ಗಂಗಾಧರ ಶೆಟ್ಟಿ ಪುತ್ತೂರು, ರಾಧಾಕೃಷ್ಣ ಪುತ್ತೂರು, ಜಲೀಲ್ ಸಂಪ್ಯ, ಸಂಜೀವ ಪೂಜಾರಿ, ಮಹಾಲಿಂಗ ನಾಯ್ಕ, ಸಿ.ಮಹಮ್ಮದ್
ಬೆಳ್ತಂಗಡಿ ಮತ್ತಿತರರು ಭಾಗಿಯಾಗಿದ್ದರು.