ಬೀಟ್ ಸಭೆ

ಗದಗ, ಮೇ.30: ಜಿಲ್ಲೆಯ ಪ್ರತಿಯೊಂದು ಪೊಲೀಸ್ ಠಾಣಾ ಮಟ್ಟದಲ್ಲಿ ಪರಿಸ್ಕøತ ಬೀಟ ಪದ್ದತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ಪೊಲೀಸ್ ಹಾಗೂ ಸಾರ್ವಜನಿಕ ಸಂಪರ್ಕ ವೃದ್ಧಿಗಾಗಿ ಒಟ್ಟು 87 ಕಡೆಗಳಲ್ಲಿ ಬೀಟ್ ಮೀಟಿಂಗ ಕೈಗೊಳ್ಳಲಾಯಿತು. ಮೀಟಿಂಗಿಗೆ ಠಾಣೆಯ ವಿವಿಧ ದರ್ಜೆಯ ಅಧಿಕಾರಿಗಳಾದ ಡಿ.ಎಸ್.ಪಿ, ಸಿಪಿಐ/ಪಿಐ, ಪಿ.ಎಸ್.ಐ, ಎ.ಎಸ್.ಐ. & ಹೆಚ್.ಸಿ/ಪಿಸಿ ಮಟ್ಟದ ಅಧಿಕಾರಿಗಳು ಹಾಜರಾಗಿ ಬೀಟ ಸಭೆಯನ್ನು ಕೈಗೊಂಡು ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ತಿಳುವಳಿಕೆ ನೀಡಲಾಯಿತು. ಹಾಗೂ ಗ್ರಾಮ ಮಟ್ಟದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಹಾಗೂ ರೌಡಿ ಜನರ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ನೀಡುವುದು ಅಲ್ಲದೆ ಸಾರ್ವಜನಿಕರು ಕಾನೂನು ಕೈಗೆತ್ತಿಕೊಳ್ಳದೆ ಪೊಲೀಸರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಪೊಲೀಸ್ ಇಲಾಖೆಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಉತ್ತಮ ಸಹಕಾರ ನೀಡುವಂತೆ ತಿಳಿಸಲಾಯಿತು.

ಇತ್ತೀಚಿನ ದಿನಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಸೈಬರ್ ಅಪರಾಧಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದಿರಲು ಹಾಗೂ ಮೋಸ ಹೋಗದಂತೆ ಕಾನೂನು ತಿಳುವಳಿಕೆ ನೀಡಲಾಯಿತು.