ಬೀಜ ಸಂಗ್ರಹ ಮಾಡೋಣ ಬನ್ನಿ

ಚಿಂಚೋಳಿ,ಮಾ.30- ದಯವಿಟ್ಟು ನಿಮ್ಮ ಸುತ್ತಮುತ್ತ ಸಿಗುವ ಯಾವುದೇ ರೀತಿಯ ಹಣ್ಣಿನ ಬೀಜಗಳನ್ನು, ನೆರಳು ನೀಡುವ ಮತ್ತು ಮೇವು ನೀಡುವ ಮರಗಳ ಬೀಜಗಳನ್ನು ಸಂಗ್ರಹಿಸಿರಿ ಮತ್ತು ತಮಗೆ ತಲುಪಿಸುವಂತೆ ಪರಿವರ್ತನಾ ಫೌಂಡೇಶನ್ ಅಧ್ಯಕ್ಷ ರೇವಣಸಿದ್ದ ಬಡಾ ಅವರು ಮನವಿ ಮಾಡಿದ್ದಾರೆ.
ಬರುವ ಮಳೆಗಾಲದಲ್ಲಿ ಸೀಡ್ ಬಾಲ್ ಮತ್ತು ಸಸಿಮಾಡಲು ಆ ಬೀಜಗಳನ್ನು ಉಪಯೋಗಿಸಲಾಗುವುದು. ಸೀಡ್ ಬಾಲ್ ಮಾಡಲು ಶಾಲಾ ಮಕ್ಕಳ, ಅನಾಥಾಶ್ರಮದ, ವೃದ್ಧಾಶ್ರಮದ ಮತ್ತು ಇನ್ನಿತರ ಹಸಿರು ಪ್ರೇಮಿಗಳ ಸಹಕಾರ ಪಡೆಯಲಾಗುವುದು.
ಸಂಗ್ರಹಿತ ಬೀಜಗಳನ್ನು ಮತ್ತು ಮಾಡುವ ಸೀಡ್ ಬಾಲ್ ಗಳನ್ನು ಸರ್ಕಾರಿ, ಧಾರ್ಮಿಕ ಮತ್ತು ಇನ್ನಿತರ ಸಂರಕ್ಷಿತ ಸ್ಥಳಗಳಲ್ಲಿ ಬಿತ್ತಲಾಗುವುದು ಮತ್ತು ಇನ್ನಿತರ ಆಸಕ್ತ ಸಂಘಟನೆಗಳಿಗೂ ಹಂಚಲಾಗುವುದು. ಈ ಕಾರ್ಯಕ್ರಮವು ಹಸಿರು ಹೆಚ್ಚಿಸಲು ಮತ್ತು ಎಲ್ಲರಿಗೂ ಹಸಿರಿನ ಮಹತ್ವ ತಿಳಿಸಲು ಸಹಕಾರವಾಗುವುದು.
ಇದರಿಂದ : ನೀರು, ಮಣ್ಣು, ಗಾಳಿ ಸೇರಿದಂತೆ ಸಮಗ್ರವಾಗಿ ಪರಿಸರ ರಕ್ಷಣೆಯಾಗುವುದು. ಸಸಿಗಳು ಬೆಳೆದಂತೆ, ಒಂದಷ್ಟು ಪ್ರಾಣಿ ಪಕ್ಷಿಗಳಿಗೆ ಹಣ್ಣು ಮತ್ತು ಮೇವು ಸಿಕ್ಕಂತಾಗುವುದು. ಜಾಗತಿಕ ತಾಪಮಾನ ನಿಯಂತ್ರಣಕ್ಕೆ ನಮ್ಮಿಂದಲೂ ಒಂದಷ್ಟು ಅಳಿಲು ಸೇವೆ ಮಾಡಿದಂತಾಗುವುದು. ಎಲ್ಲಾ ಹಸಿರು ಕಾರ್ಯಗಳಲ್ಲಿ, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ್ದ ಮತ್ತು ಸಹಕರಿಸಲಿರುವ ಎಲ್ಲಾ ಹಸಿರು ಪ್ರೇಮಿಗಳಿಗೂ ಹೃದಯಪೂರ್ವಕವಾಗಿ ಆಭಾರಿಯಾಗಿದ್ದೇವೆ.
ಸದಾ ಎಲ್ಲಾ ಹೃದಯವಂತರ ಸಲಹೆ, ಸೂಚನೆ, ಸಹಕಾರ ಮತ್ತು ಸಹಭಾಗಿತ್ವಗಳ ಅಪೇಕ್ಷೆಯಲ್ಲಿರುತ್ತೇವೆ. ದಯವಿಟ್ಟು ತಮಗೆ ಅನುಕೂಲವಾಗುವ ರೀತಿಯಲ್ಲಿ ತಾವೆಲ್ಲರೂ ನಮ್ಮ ಅಳಿಲು ಸೇವೆಯಲ್ಲಿ ಪಾಲ್ಗೊಳ್ಳುವಿರೆಂಬ ಅಪೇಕ್ಷೆಯೊಂದಿಗೆ.
ರೇವಣಸಿದ್ಧ ಬಡಾ ಅಧ್ಯಕ್ಷರು ಪರಿವರ್ತನಾ ಫೌಂಡೇಶನ್ ಕಲಬುರ್ಗಿ ಬೀಜಗಳನ್ನು ತಲುಪಿಸಬಹುದಾದ 9945786777ವಿಳಾಸ:- ರೇವಣಸಿದ್ದ ಬಡಾ ಪೆÇೀಸ್ಟ್ ರಟಕಲ್ ತಾಲೂಕ ಕಾಳಗಿ.