ಬೀಜ ವಿತರಣೆ

ಬೈಲಹೊಂಗಲ,ಜೂ6: ತಾಲೂಕಿನ ನೇಸರಗಿ ಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸೊಸೈಟಿಯಲ್ಲಿ ರೈತರಿಗೆ ಸೋಯಾಬಿನ ಬೀಜದ ಪ್ಯಾಕೇಟ್ ಗಳನ್ನು ಕಾಂಗ್ರೆಸ್ ಮುಖಂಡ ನಾನಾಸಾಹೇಬ ಪಾಟೀಲ ವಿತರಣೆ ಮಾಡಿದರು.
ನಂತರ ಮಾತನಾಡಿ ಹಳದಿ ರತ್ನ ಎಂದೇ ಕರೆಯುವ ಸೋಯಾ ಅವರೆಯ ಬೀಜೋಪಚಾರ ಕೈಗೊಂಡು ಬಿತ್ತುವುದರಿಂದ ಹೆಚ್ಚಿನ ಇಳುವರಿ ಹೆಚ್ಚಿಸಬಹುದು ಎಂದು ಬೀಜ ಪಡೆಯಲು ಬಂದ ರೈತರಿಗೆ ಸಲಹೆ ನೀಡಿದರು.
ಸೋಯಾಬೀನ್ ಬೆಳೆಯುವಾಗ ರೈತರು ಮಣ್ಣಿಗೆ ಎಂತಹ ಪೆÇೀಷಕಾಂಶವನ್ನು ನೀಡಬೇಕು. ಹೆಚ್ಚಿನ ಸಾರಜನಕ (ಪೆÇ್ರೀಟಿನ್, ಶೇ.40) ಹಾಗೂ ಎಣ್ಣೆ ಅಂಶ (ಶೇ.20) ಹೊಂದಿರುವ ಸೋಯಾ ಬೆಳೆ, ಮಳೆ ಸ್ವಲ್ಪ ಹೆಚ್ಚು ಅಥವಾ ಕಡಿಮೆಯಾದರೂ ಸಹ ಕನಿಷ್ಠ 4 ರಿಂದ 5 ಕ್ವಿಂಟಾಲ್ ಇಳುವರಿ ಬರುತ್ತದೆ. ಜತೆಗೆ, 90 ರಿಂದ 100 ದಿನಗಳೊಳಗಾಗಿ ಕಟಾವಿಗೆ ಬರುವುದರಿಂದ ಅತಿ ಹೆಚ್ಚು ಕ್ಷೇತ್ರದಲ್ಲಿ ಬಿತ್ತನೆಯಾಗುವ ನಿರೀಕ್ಷೆಯಿದೆ. ಇಲಾಖೆಯ ಮಾರ್ಗದರ್ಶನ ಪಡೆದು ಅಳವಡಿಸಿಕೊಂಡಲ್ಲಿ ಕನಿಷ್ಟ 1 ರಿಂದ 2 ಕ್ವಿಂಟಾಲ್ ಹೆಚ್ಚಿನ ಇಳುವರಿ ಪಡೆಯುವ ಸಾಧ್ಯತೆ ಇದೆ.
ಅತೀ ತೆಳು ಬೀಜ ಪದರ ಹೊಂದಿರುವ ಸೋಯಾವನ್ನು ಮಣ್ಣಿನಲ್ಲಿ ತೇವಾಂಶ ಕೊರತೆ ಇದ್ದಾಗ ಬಿತ್ತನೆ ಮಾಡದೇ ಉತ್ತಮ ಮಳೆಯಾದಾಗ (ಕನಿಷ್ಟ 80 ರಿಂದ 90 ಮಿ.ಮಿ) ಎರಡು ಇಂಚು ಆಳಕ್ಕೆ ಮೀರದಂತೆ ಬಿತ್ತನೆ ಮಾಡಬೇಕು. ಪ್ರತಿ ಎಕರೆಗೆ ಕನಿಷ್ಟ 2.5 ಟನ್ ಕೊಟ್ಟಿಗೆ ಗೊಬ್ಬರ ಬಳಸುವುದರಿಂದ ಮಣ್ಣಿನ ರಚನೆ, ಫಲವತ್ತತೆ ಹಾಗೂ ಉಪಯುಕ್ತ ಜೀವಾಣುಗಳು ಹೆಚ್ಚಿ ಅಧಿಕ ಇಳುವರಿ ಪಡೆಯಬಹುದು. ಬಿತ್ತುವ ಪೂರ್ವದಲ್ಲಿ ಬೀಜೋಪಚಾರ ಕೈಗೊಂಡು 15 ನಿಮಿಷ ನೆರಳಿನಲ್ಲಿ ಆರಲು ಬಿಟ್ಟು ಬಳಿಕ ಬೀಜಗಳನ್ನು ಬಳಸಬೇಕು. ಜೀವಾಣು ಜೈವಿಕ ಗೊಬ್ಬರಗಳನ್ನು ಯಾವುದೇ ರಸಗೊಬ್ಬರ ಅಥವಾ ಕೀಟನಾಶಕಗಳೊಂದಿಗೆ ಬೆರೆಸಬಾರದು ಎಂದು ಕೃಷಿ ಅಧಿಕಾರಿ ಆರ್ ಐ ಕುಂಬಾರ ತಿಳಿಸಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡ ಬಾಳಪ್ಪ ಮಾಳಗಿ, ಎ ಪಿ ಎಮ್ ಸಿ ಮಾಜಿ ಅಧ್ಯಕ್ಷ ಭರಮಣ್ಣ ಸತ್ಯೆನ್ನವರ, ನಿಂಗಪ್ಪ ಅರಕೇರಿ, ಶಿವನಗೌಡ ಪಾಟೀಲ, ಶಿವನಪ್ಪ ಮದೇನ್ನವರ, ನಿಂಗಪ್ಪ ತಳವಾರ, ರವಿ ಸಿದ್ದಮ್ಮನವರ, ಮಲ್ಲೇಶ ಮಾಳನ್ನವರ, ಶಿವಜಾತ ಪಾಟೀಲ, ಬಸವರಾಜ ಚಿಕ್ಕನಗೌಡರ, ವಿರೂಪಾಕ್ಷ ಚೋಬಾರಿ, ಮಲ್ಲಿಕಾರ್ಜುನ ಕಲ್ಲೋಳ್ಳಿ, ಯಮನಪ್ಪ ತಳವಾರ, ದೇಮಣ್ಣ ಗುಜನಟ್ಟಿ, ಮಹಾದೇವ ಸತ್ತಿಗೇರಿ, ಬಸವರಾಜ ಸಿದ್ದಮ್ಮನವರ, ಶಂಕರ ಹುಣಚ್ಯಾಳ ಗದಗಯ್ಯ ಹೀರೆಮಠ ಇದ್ದರು.