ಬೀಜ ವಿತರಣೆಯಲ್ಲಿ ತಾರತಮ್ಯ : ಆರೋಪ

ವಾಡಿ:ಜೂ.5: ಮುಂಗಾರು ಬಿತ್ತನೆ ಬೀಜ ಈಗಾಗಲೇ ಸರಕಾರ ಸಹಾಯಧನದ ರೂಪದಲ್ಲಿ ವಿತರಣೆ ಮಾಡಲಾಗುತ್ತಿದ್ದು, ನಾಲವಾರ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಎಸ್ಸಿಎಸ್ಟಿ ಬಡ ರೈತರಿಗೆ ಸಬ್ಸಡಿಯಲ್ಲಿ ಬೀಜ ವಿತರಿಸದೆ ಉಳ್ಳವರಿಗೆ ವಿತರಿಸುವ ಮೂಲಕ ರೈತರಿಗೆ ತಾರತಮ್ಯ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಶುಕ್ರವಾರ ಬೀಜ ವಿತರಣೆಗೆ ಮುಂದಾದ ಕೃಷಿ ಇಲಾಖೆಯ ಅಧಿಕಾರಿಗಳು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಬಡ ರೈತರಿಗೆ ಬೀಜ ನೀಡದೆ ವಂಚಿಸುತ್ತಿದ್ದಾರೆ. ಸಾಮಾನ್ಯ ವರ್ಗದಲ್ಲಿ ಮಾತ್ರ ಬೀಜ ಲಭ್ಯವಿದೆ, ಸಹಾಧನದಲ್ಲಿ ಲಭ್ಯವಿಲ್ಲ ಎನ್ನುವ ಮಾತು ಕೃಷಿ ಅಧಿಕಾರಿಗಳಿಂದ ಕೇಳಿ ಬರುತ್ತಿದೆ. ಬಿತ್ತನೆ ಬೀಜಕ್ಕಾಗಿ ಜಾತಕ ಪಕ್ಷದಂತೆ ಕಾದು ಕುಳಿತಿರುವ ಹಿಂದುಳಿದ ರೈತರು, ಸಬ್ಸಿಡಿಯಲ್ಲಿ ಬೀಜ ಸಿಗದೆ ವಂಚಿತರಾಗುತ್ತಿದ್ದಾರೆ. ಈ ಕುರಿತು ರೈತರ ಪ್ರಶ್ನೆಗೆ ಸಮಂಜಸ ಉತ್ತರ ಕೊಟ್ಟಿರುವ ಕೃಷಿ ಅಧಿಕಾರಿಗಳು ಸಾಮಾನ್ಯ ವರ್ಗದಲ್ಲಿ ಹೆಚ್ಚು ಬೀಜಗಳು ಲಭ್ಯವಿದ್ದು, ಸಾಮಾನ್ಯ ದರದಲ್ಲಿಯೇ ಎಲ್ಲಾ ರೈತರು ಹಣ ಕೊಟ್ಟು ಬೀಜಗಳನ್ನು ಪಡೆಯಬಹುದಾಗಿದೆ ಎಂದು ರೈತರಿಗೆ ಉತ್ತರಿಸಿದ್ದಾರೆ.