ಬೀಜ- ರಸಗೊಬ್ಬರಗಳ ಮಾರಾಟದ ಅವಧಿ ವಿಸ್ತರಿಸಲು ಒತ್ತಾಯ

ಸಿರವಾರ.ಜೂಂ೭-ಪಟ್ಟಣದಲ್ಲಿ ರಸಗೊಬ್ಬರ, ಕೀಟನಾಶಕಗಳ ಮತ್ತು ಬಿತ್ತನೆ ಬೀಜಗಳ ಮಾರಾಟ ಹಾಗೂ ಖರಿದಿ ಅವಧಿಯನ್ನು ಬೆಳಿಗ್ಗೆ ೬ ರಿಂದ ೧೦ ಗಂಟೆ ರೈತರಿಗೆ ಹಾಗೂ ಮಾರಾಟಗಾರರಿಗೆ ಸಾಲುತ್ತಿಲದ ಕಾರಣ ಮಧ್ಯಾಹ್ನ ೨ ಗಂಟೆಯ ವರೆಗೆ ವಿಸ್ತರಿಸಬೇಕು ಸಿರವಾರತಾಲೂಕ ಕಾಂಗ್ರಸ್ ಬ್ಲಾಕ್ ಅಧ್ಯಕ್ಷ ಚುಕ್ಕಿ ಶಿವಕುಮಾರ ಒತ್ತಾಯಿಸಿದ್ದಾರೆ.
ರೈತರು ಬೀಜ ಖರೀದಿಗೆ ಹಳ್ಳಿಗಳಿಂದ ಸಾವಿರಾರು ರೂ. ಖರ್ಚು ಮಾಡಿ ಆಗಮಿಸುತ್ತಾರೆ ಅವರು ಬರುವಷ್ಟರಲ್ಲಿ ನಿಗದಿ ಮಾಡಿದ ಸಮಯ ಮುಕ್ತಾಯವಾಗುತ್ತದೆ. ಇದರಿಂದ ಕಾಳ ಸಂತೆಯಲಿ ದೊರೆಯುವ ಭೀಜವನ್ನು ರೈತರು ಖರಿದಿ ಮಾಡಿ ನಷ್ಟಕ್ಕೆ ಗುರಿಯಾಗುತ್ತಾನೆ. ಲಾಕ್‌ಡೌನ್ ನಿಂದಾಗಿ ಸಾರಿಗೆ ವ್ಯವಸ್ಥೆ ಇಲ್ಲವಾದ್ದರಿಂದ ಸುತ್ತ ಮುತ್ತಲಿನ ಗ್ರಾಮಗಳ ರೈತರಿಗೆ ಬೆಳಿಗ್ಗೆ ೧೦ ರವರೆಗೆ ಪಟ್ಟಣ ತಲುಪಲು ಸಮಯದ ಅಭಾವವಾಗುತ್ತಿದೆ, ಅವಧಿಯ ಒಳಗೆ ಬರಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ತೀವ್ರ ತೊಂದರೆಯಾಗುತ್ತಿದೆ.
ಆದ್ದರಿಂದ ಜಿಲ್ಲಾಡಳಿತ, ತಾಲೂಕ ಆಡಳಿತ, ಪ.ಪಂಚಾಯತಿ ರಸಗೊಬ್ಬರ, ಬಿತ್ತನೆ ಬೀಜ ಮತ್ತು ಕ್ರಿಮಿನಾಶಕಗಳ ಮಾರಾಟಕ್ಕೆ ಮಧ್ಯಾಹ್ನ ೨ ಗಂಟೆಯ ವರೆಗೆ ಕಾಲಾವಕಾಶವನ್ನು ನೀಡಿ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕು. ಇಲ್ಲಲದಿದ್ದರೆ ರೈತರೊಂದಿಗೆ ಹೋರಾಟ ಮಾಡಲಾಗುವುದು ಎಂದಿದ್ದಾರೆ.