ಬೀಜ-ರಸಗೊಬ್ಬರಗಳ ಮಾರಾಟಕ್ಕೆ ಅವಧಿ ವಿಸ್ತರಿಸಲು ಮನವಿ

ಸಿರವಾರ.ಜೂ.೦೩-ಮುಂಗಾರು ಪ್ರಾರಂಭವಾಗಿದ್ದೂ ರೈತರು ಬಿತ್ತನೆಗೆ ಬೀಜ ಹಾಗೂ ರಸಗೊಬ್ಬರ ಖರೀದಿಗೆ ಆಗಮಿಸುತ್ತಿದ್ದೂ ಸರ್ಕಾರ ಈಗ ನೀಡಿರುವ ಸಮಯದಲ್ಲಿ ಮಾರಾಟ- ಖರೀದಿಗೆ ಸಮಯ ಸಾಕಾಗುತ್ತಿಲ್ಲದಿರುವುದರಿಂದ ಬೆಳಿಗ್ಗೆ ೬ರಿಂದ೧೦ ಗಂಟೆಯ ಬದಲಿಗೆ ಮಧ್ಯಾಹ್ನ ೨ ಗಂಟೆಯ ವರೆಗೆ ವಿಸ್ತರಿಸಬೇಕು ಎಂದು ಬೀಜ ಹಾಗೂ ರಸಗೊಬ್ಬರ ಮಾರಾಟಗಾರ ಸಂಘದಿಂದ ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಸಿರವಾರ ಪಟ್ಟಣ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದೂ, ಸಿರವಾರ, ದೇವದುರ್ಗ ತಾಲೂಕಿನ ರೈತರು ಇಲ್ಲಿಗೆ ಆಗಮಿಸಿ ಬೀಜ ಹಾಗೂ ರಸಗೊಬ್ಬರ ಖರೀದಿಗೆ ಪಟ್ಟಣಕ್ಕೆ ಆಗಮಿಸಬೇಕಾಗಿದೆ.
ಲಾಕ್‌ಡೌನ್‌ನಿಂದಾಗಿ ಸಾರಿಗೆ ವ್ಯವಸ್ಥೆ ಇಲ್ಲವಾದ್ದರಿಂದ ಸುತ್ತ ಮುತ್ತಲಿನ ಗ್ರಾಮಗಳ ರೈತರಿಗೆ ಬೆಳಿಗ್ಗೆ ೧೦ ರವರೆಗೆ ಪಟ್ಟಣ ತಲುಪಲು ಸಮಯದ ಅಭಾವವಾಗುತ್ತಿದೆ. ಅವಧಿಯ ಒಳಗೆ ಬರಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ತೀವ್ರ ತೊಂದರೆಯಾಗುತ್ತಿದೆ. ಆದ್ದರಿಂದ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕ್ರಿಮಿನಾಶಕಗಳ ಮಾರಾಟಕ್ಕೆ ಮಧ್ಯಾಹ್ನ ೨ ಗಂಟೆಯ ವರೆಗೆ ಕಾಲಾವಕಾಶವನ್ನು ನೀಡಿ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾಧಿಕಾರಿಗಳ ಗಮನಕ್ಕೆ ತರಲು ರೈತ ಸಂಪರ್ಕ ಕೇಂದ್ರದ ಅಧಿಕಾರಿಗೆ, ಪ.ಪಂಚಾಯತಿ ಮುಖ್ಯಾಧಿಕಾರಿಗೂ ಸಹ ಮನವಿ ಪತ್ರವನ್ನು ನೀಡಿದರು.
ಈ ಸಂದರ್ಭದಲ್ಲಿ ಮಾರಾಟಗಾರರ ಸಂಘದ ಅಧ್ಯಕ್ಷ ಗಣೇಕಲ್ ವೀರೇಶ, ಜಿ.ಲೋಕರೆಡ್ಡಿ, ರಮೇಶ ದರ್ಶನಕರ, ಚುಕ್ಕಿ ಉಮಾಪತಿ, ಹೆಚ್.ಶರಣಪ್ಪ ಸುಬ್ಬಾರಾವ್, ಸೇರಿದಂತೆ ಇತರರು ಇದ್ದರು